ಮಾಜಿ ಶಾಸಕರಿಂದ ಪಲ್ಸ್ ಪೋಲಿಯೋ – ಕಾರ್ಯಕ್ರಮಕ್ಕೆ ಚಾಲನೆ.
ಆಲಮೇಲ ಜೂ.28

ತಾಲೂಕಿನ ದೇವಣಗಾಂವ ಗ್ರಾಮದ ಗ್ರಾಮ ಪಂಚಾಯತ ಕಛೇರಿಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ರಮೇಶ ಭೂಸನೂರ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಐದು ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ದೇಶದಲ್ಲಿ ಪೋಲಿಯೋ ಮುಕ್ತ ಸಮಾಜ ಮಾಡಲು ಎಲ್ಲರೂ ಕೈಜೋಡಿಸಬೇಕೆಂದರು.

ಬಿಜೆಪಿ ಮುಖಂಡ ಶ್ರೀಮಂತ ನಾಗೂರ, ಪಿಕೆಪಿಎಸ್ ಅಧ್ಯಕ್ಷ ಷಣ್ಮುಖಪ್ಪ ಸೋಮನಾಯ್ಕ, ಸಿದ್ದಯ್ಯ ಮಠಪತಿ, ಮಲ್ಲಿಕಾರ್ಜುನ ಬಗಲಿ, ದತ್ತಾತ್ರೇಯ ಸೊನ್ನ, ಶಿವಮೂರ್ತಿ ಕಾಟಕರ,ಗಾಲಿಬ ಸೋಮನಾಯ್ಕ, ಗುರು ನಿಂಬಾಳ, ಅಂಗನವಾಡಿ ಕಾರ್ಯಕರ್ತೆ ಎಂ ಆರ್ ಕುಲಕರ್ಣಿ, ಆಯ್.ಕೆ.ಪತ್ತಾರ, ಎಸ್.ಬಿ ಹೆಗ್ಗಣದೊಡ್ಡಿ, ಆಶಾ ಕಾರ್ಯಕರ್ತೆ ಶಾಂತಾಬಾಯಿ ಹಿಂಚಗೇರಿ, ಸಂಗೀತಾ ರಜಪುತ, ಕವಿತಾ ಬೋಗಾರ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ

