ಶ್ರೀಶಾರದಾಶ್ರಮದಲ್ಲಿ ಸ್ವಾಮಿ ಜಪಾನಂದರ ಅಮರನಾಥ – ಯಾತ್ರೆಯ ಅನುಭವಗಳು.
ಚಳ್ಳಕೆರೆ ಜೂ.28

ಮಂಗಳಾರತಿ
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಏಕಾದಶಿಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಪೂಜ್ಯ ಮಾತಾಜೀ ತ್ಯಾಗಮಯೀ ಅವರು “ಸ್ವಾಮಿ ಜಪಾನಂದರ ಅಮರನಾಥ ಯಾತ್ರೆಯ ಅನುಭವಗಳು” ಎಂಬ ವಿಷಯವಾಗಿ ಪ್ರವಚನವನ್ನು ನಡೆಸಿ ಕೊಟ್ಟರು.

ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ಸ್ವಾಮಿ ಜಪಾನಂದರ ಅಮರನಾಥ ಯಾತ್ರೆಯ ಸ್ಮೃತಿಗಳು
“ಏಕಾದಶಿ” ಯ ಪ್ರಯುಕ್ತ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಶ್ರೀರಾಮನಾಮ ಸಂಕೀರ್ತನೆ , ದಿವ್ಯತ್ರಯರಿಗೆ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ವನಜಾಕ್ಷಿ ಮೋಹನ್, ಸುದೀಪ್, ಕವಿತಾ, ಅಂಬುಜಾ, ಡಿ.ಕಾವೇರಿ, ಬಿ.ಸುಮನಾ, ಜಿ ಯಶೋಧಾ, ಮಂಜುಳಾ, ಸುಧಾಮಣಿ, ಲತಾ ಭಕ್ತವತ್ಸಲ, ಚೇತನ್ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

