ಯುಗ ಪ್ರವರ್ತಕರು ದಿವ್ಯತ್ರಯರು – ಶ್ರೀಮತಿ ಎಚ್.ಲಕ್ಷ್ಮೀದೇವಮ್ಮ.

ಚಳ್ಳಕೆರೆ ಜೂ.28

ಶ್ರೀರಾಮಕೃಷ್ಣ ಪರಮ ಹಂಸರು, ಶ್ರೀಮಾತೆ ಶಾರದಾದೇವಿ, ಸ್ವಾಮಿ ವಿವೇಕಾನಂದರು ಯುಗಪ್ರವರ್ತಕರಾದ ಮಹಾಪುರುಷರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಪ್ರವರ್ತಕರು ದಿವ್ಯತ್ರಯರು” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.

ದಿವ್ಯತ್ರಯರ ಜೀವನ ಮತ್ತು ಸಂದೇಶಗಳು ಪ್ರಸ್ತುತ ಆಧುನಿಕ ಬದುಕಿಗೆ ಸಹಕಾರಿಯಾಗಿದ್ದು ಅವುಗಳ ಸಮರ್ಥ ಅನುಷ್ಠಾನದಿಂದ ಸಾರ್ಥಕ ಜೀವನ ನಡೆಸಬಹುದು ಎಂದು ಹೇಳಿದರು.

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಪ್ರೇಮಾ, ಗೀತಾ ಪ್ರಕಾಶ್, ಪ್ರಮೀಳಾ ಜಗದೀಶ್ ಅವರಿಂದ ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ವಿಶೇಷ ಸತ್ಸಂಗ ಸಭೆಯಲ್ಲಿ ನಂಜಮ್ಮ ಕೆಂಚಪ್ಪ, ಎಂ ಲಕ್ಷ್ಮೀದೇವಮ್ಮ, ಪುಷ್ಪಲತಾ ವಿಜಯ್, ವಿಜಯಲಕ್ಷ್ಮೀ, ದ್ರಾಕ್ಷಾಯಣಿ, ಅನುಸೂಯ, ಜಯರಾಜ್, ರಾಘವೇಂದ್ರ, ಸರಸ್ವತಿ ಪಾಲ್ಗೊಂಡಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button