ಬಸ್ ನಿಲ್ದಾಣದಲ್ಲಿ ಪಲ್ಸ್ ಪೋಲಿಯೋ ಜಾಗೃತಿ ಅಭಿಯಾನ – ಯಶಸ್ವಿಯಾಗಿ ಜರುಗಿತು.
ಅಮೀನಗಡ ಜೂ.28

ಆರೋಗ್ಯ ಇಲಾಖೆವತಿಯಿಂದ ಬಸ್ ನಿಲ್ದಾಣದಲ್ಲಿ 5 ವರ್ಷ ದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ವಿತರಣಾ ಕೇಂದ್ರದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್.ಎಸ್ ಅಂಗಡಿ, ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಕೆ.ಸಿ ಹೊನಕೇರಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮುಖಾಂತರ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿದರು.
ವಿವಿಧ ಹಳ್ಳಿಗಳಿಂದ ಬರುವ ಪ್ರಯಾಣದಲ್ಲಿರುವ ಮಕ್ಕಳಿಗೆ ಪಲ್ಸ್ ಪೋಲಿಯೋ ಎರಡು ಹನಿ ತಪ್ಪದೇ ಹಾಕಿಸಿ ಪೋಲಿಯೋ ಮುಕ್ತ ಭಾರತ ಮುಂದವರಿ ಸೋಣ 28/06/2026 ರಿಂದ 01/07/2026 ವರೆಗೆ ಪೋಲಿಯೋ ಲಸಿಕಾ ಕೇಂದ್ರ ಕಾರ್ಯ ನಿರ್ವಹಿಸಲಿದೆ.
ಎಂದು ಜಾಗೃತಿ ಮೂಡಿಸಲಾಯಿತು. ಅಭಿಯಾನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಶಾ ಕಾರ್ಯ ಕರ್ತೆಯರು ಸ್ವಯಂ ಸೇವಕರು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

