ವೇದ-ಉಪನಿಷತ್ತುಗಳ ಸಾರವನ್ನು ಸಾರುವ ಸದ್ಗ್ರಂಥವೇ ಶ್ರೀಮದ್ ಭಗವದ್ಗೀತೆ – ಶ್ರೀಮತಿ ಪುಷ್ಪಲತಾ ವಿಜಯ್.
ಚಳ್ಳಕೆರೆ ಜೂ.28

ಶ್ರೀಮದ್ ಭಗವದ್ಗೀತೆಯು ವೇದ ಮತ್ತು ಉಪನಿಷತ್ತುಗಳ ಸಾರವನ್ನು ಒಳಗೊಂಡ ಮಹತ್ವದ ಸದ್ಗ್ರಂಥ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಪುಷ್ಪಲತಾ ವಿಜಯ್ ಅಭಿಪ್ರಾಯ ಪಟ್ಟರು.
ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಶ್ರೀಮದ್ ಭಗವದ್ಗೀತೆಯ ಪುರುಷೋತ್ತಮ ಯೋಗದ ಎರಡನೇ ಶ್ಲೋಕದ ಪಠಣ ಮತ್ತು ಅರ್ಥ-ವಿವರಣೆ” ನೀಡುತ್ತ ಅವರು ಮಾತನಾಡಿದರು.
ಪುರುಷೋತ್ತಮ ಯೋಗದ ಪಠಣ ಮತ್ತು ಅಧ್ಯಯನದಿಂದ ಭಗವಾನ್ ಪುರುಷೋತ್ತಮನನ್ನು ಪಡೆದು ಕೊಳ್ಳಬಹುದು. ಸಂಸಾರದ ವೃಕ್ಷವನ್ನು ಅಶ್ವತ್ಥ ವೃಕ್ಷಕ್ಕೆ ಹೋಲಿಸಲಾಗಿದೆ.
ನಾವು ನಮ್ಮ ಮೂಲವನ್ನು ಹುಡುಕುತ್ತಾ ಹೊರಟರೆ ಭಗವಂತನನ್ನೇ ಸೇರುತ್ತವೆ. ಮನುಷ್ಯನ ದೇಹ ಮತ್ತು ಮನಸ್ಸಿನ ಸ್ವಭಾವವನ್ನು ಗುಣತ್ರಯಗಳಾದ ಸತ್ತ್ವ, ರಜಸ್ಸು ಮತ್ತು ತಮಸ್ಸುಗಳು ನಿರ್ಧರಿಸುತ್ತವೆ. ಕರ್ಮದ ಬಂಧನದಂತೆ ಅಶ್ವತ್ಥ ವೃಕ್ಷದ ಬೇರುಗಳು ಆಳವಾಗಿ ಬೇರೂರಿವೆ ಎಂದು ಎರಡನೇ ಶ್ಲೋಕವನ್ನು ಸೊಗಸಾಗಿ ವಿವರಿಸಿದರು.
ಸತ್ಸಂಗ ಕಾರ್ಯಕ್ರಮದಲ್ಲಿ ಎಚ್ ಲಕ್ಷ್ಮೀದೇವಮ್ಮ, ನಂಜಮ್ಮ ಕೆಂಚಪ್ಪ, ಎಂ ಲಕ್ಷ್ಮೀದೇವಮ್ಮ, ಸರಸ್ವತಿ, ವಿಜಯಲಕ್ಷ್ಮೀ, ಗೀತಾ ಪ್ರಕಾಶ್, ಪ್ರಮೀಳಾ ಜಗದೀಶ್, ಯತೀಶ್ ಎಂ ಸಿದ್ದಾಪುರ, ಅನುಸೂಯ ರಾಘವೇಂದ್ರ, ಜಯರಾಜ್, ಪ್ರೇಮಾ, ದ್ರಾಕ್ಷಾಯಣಿ ಹಾಜರಿದ್ದರು.

