ಅಗ್ನಿವೀರ ತರಬೇತಿ ಪೂರ್ಣ ಗೊಳಿಸಿ ಸ್ವ ಗ್ರಾಮಕ್ಕೆ ಆಗಮಿಸಿದ – ಯೋಧನಿಗೆ ಅದ್ದೂರಿ ಸ್ವಾಗತ.

ಮಾನ್ವಿ ಜೂ.29

ದೇಶದ ರಕ್ಷಣಾ ಸೇವೆಗೆ ಆಯ್ಕೆಯಾಗಿ ಅಗ್ನಿವೀರ ಸೇನಾ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸ್ವಗ್ರಾಮಕ್ಕೆ ಆಗಮಿಸಿದ ಈರೇಶ ನಾಯಕ ಬೋಮ್ಮನಾಳ ಯೋಧನಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿ ಗೌರವಿಸಿದರು.

ಮಂತ್ರಾಲಯ ಕ್ರಾಸ್ ನಿಂದ ಕಪಗಲ್ ಗ್ರಾಮದ ಸಿದ್ದರೂಢ ಮಠಕ್ಕೆ ಮೆರವಣಿಗೆ ಮಾಡಿದರು.

ದೇಶ ಸೇವೆಯ ಕನಸನ್ನು ನನಸಾಗಿಸಿ ಕೊಂಡು ತರಬೇತಿ ಮುಗಿಸಿ ಬಂದ ಯೋಧನನ್ನು ಗ್ರಾಮದ ಪ್ರಮುಖರು, ಹಿರಿಯರು, ಯುವಕರು ಹಾಗೂ ಸಾರ್ವಜನಿಕರು ಹೂಮಾಲೆ ಹಾಕಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿ ಕೊಂಡರು. ಗ್ರಾಮದ ಬೀದಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಯೋಧನ ಆಗಮನ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿತು.

ಈ ಸಂದರ್ಭದಲ್ಲಿ ವಾಲ್ಮಿಕಿ ಸಮಾಜದ ಅಧ್ಯಕ್ಷ ಶ್ರೀನಿವಾಸ ನಾಯಕ ಮಾತನಾಡಿ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಪ್ರತಿಯೊಬ್ಬರಿಗೂ ಸಿಗುವುದಿಲ್ಲ. ಧೈರ್ಯ, ಶಿಸ್ತು ಹಾಗೂ ಪರಿಶ್ರಮದಿಂದ ಅಗ್ನಿವೀರ ತರಬೇತಿಯನ್ನು ಪೂರ್ಣ ಗೊಳಿಸಿರುವುದು ಗ್ರಾಮದ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಯುವ ಪೀಳಿಗೆ ದೇಶದ ರಕ್ಷಣೆ ಹಾಗೂ ರಾಷ್ಟ್ರ ಸೇವೆಯತ್ತ ಹೆಚ್ಚಿನ ಆಸಕ್ತಿ ಬೆಳೆಸಿ ಕೊಳ್ಳಬೇಕು. ದೇಶಕ್ಕಾಗಿ ಸೇವೆ ಸಲ್ಲಿಸುವ ಯೋಧರ ತ್ಯಾಗ ಮತ್ತು ಸಮರ್ಪಣೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮದ ಯುವಕ ಸೇನೆ ಸೇರಿರುವುದು ಇತರ ಯುವಕರಿಗೂ ಪ್ರೇರಣೆಯಾಗಿದ್ದು, ದೇಶ ಭಕ್ತಿಯ ಭಾವನೆ ಮತ್ತಷ್ಟು ಗಟ್ಟಿ ಗೊಳಿಸಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯೋಧನ ತಂದೆ ಬಸ್ಮಾಸೂರ ನಾಯಕ ಬೊಮ್ಮನಾಳ, ಮಹಾದೇವ ಉತ್ತರಭೂಪ, ಶಿಕ್ಷಕ ರಾಘವೇಂದ್ರ ನಾಯಕ ಗುಂಜಳ್ಳಿ, ಪತ್ರಕರ್ತ ಲಕ್ಷ್ಮಣರಾವ್ ಕಪಗಲ್, ಕರ್ಣ ನಾಯಕ ಬೊಮ್ಮನಾಳ, ನಾಗರಾಜ ನಾಯಕ ಬೋಮ್ಮನಾಳ, ಮಹಾದೇವ ಛಲುವಾದಿ, ಯೋಧನ ಸಹೋದರ ಭೀಮ ನಾಯಕ ಬೊಮ್ಮನಾಳ, ರತ್ನಕರ ನಾಯಕ, ಸ್ವಾಮಿ ಮಡಿವಾಳ ಸೇರಿದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button