ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದ ಪಕ್ಷ :- ಯಶವಂತರಾಯಗೌಡ ಪಾಟೀಲ್ ….
ಸಾತಲಾಗಾಂವ (ಮೇ.5) :
ಕಾಂಗ್ರೆಸ್ ಜಾತಿ,ಮತ,ಪಂಥ ಎನ್ನದೇ ಅಖಂಡ ಭಾರತದ ಪ್ರತಿಯೊಬ್ಬ ಪ್ರಜೆಯ ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸ ಮಾಡುತ್ತಿರುವ ಪಕ್ಷ ಆಗಿದೆ. ನುಡಿದಂತೆ ನಡೆಯುವ ಪಕ್ಷ ಎಂದು ಪೂನಾ ಮತಕ್ಷೇತ್ರದ ಶಾಸಕ ಸಂಗ್ರಾಮ ಗಂಗೇಕರ ಹೇಳಿದರು.ತಾಲೂಕಿನ ಸಾತಲಗಾಂವ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣೆಯ ಪ್ರಚಾರದಲ್ಲಿ ಮಾತನಾಡಿದರು. ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ ತಮ್ಮ ಆಡಳಿತಾವಧಿಯಲ್ಲಿ ಜನಪರ ಯೋಜನೆಗಳನ್ನು ಹಂಗಿನ ಬದುಕಿನಿಂದ ಹಕ್ಕಿನ ಬದುಕಿನೊಡೆಗೆ ತೆಗೆದುಕೊಂಡು ಹೋಗಿದ್ದೇನೆ.

ಹಸಿದವರು, ನೋವುಂಡವರು, ತುಳಿತಕ್ಕೊಳಗಾದವರಿಗೆ ಆದ್ಯತೆ ನೀಡಿದ್ದೇನೆ. ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿ ದೃಷ್ಟಿಕೋನದೊಂದಿಗೆ ಅಭಿವೃದ್ಧಿಯತ್ತ ಇಂಡಿ ಮತಕ್ಷೇತ್ರ ನಿರ್ಮಾಣ, ಕೃಷಿ, ಹಳ್ಳಿಗಳ ಸಮಗ್ರ ಅಭಿವೃದ್ಧಿ, ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಿದ್ದೇನೆ ಮತ್ತು ಇಂಡಿ ಜಿಲ್ಲೆಯ ಕನಸು ಕಂಡಿದ್ದೇನೆ ಎಂದ ಅವರು ಬಿಜೆಪಿ ಸರಕಾರ ಪ್ರತಿಯೊಂದು ವಸ್ತುಗಳ ಬೆಲೆಏರಿಸಿ ಜನರನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ ಎಂದರು. ಮುಖಂಡರಾದ ಮಂಜುನಾಥ ಕಾಮಗೊಂಡ ಮಾತನಾಡಿ ಕೊರೊನಾ ಸಮಯದಲ್ಲಿ ಶಾಸಕ ಯಶವಂತರಾಯಗೌಡರು ಇಂಡಿಯಲ್ಲಿಯೇ ಇದ್ದು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ.ಕಾರಣ ಪಾಟೀಲರಿಗೆ ಅತ್ಯಧಿಕ ಮತ ನೀಡುವುದರ ಮೂಲಕ ಅವರನ್ನು ಆಯ್ಕೆ ಮಾಡಬೇಕು ಎಂದರು.ಗ್ರಾ.ಪಂ ಉಪಾಧ್ಯಕ್ಷ ಸಂಗಣ್ಣ ಹೊಸುರ,ಮಮ್ಮ ತಾಂಬೊಳಿ,ಗೌಡಪ್ಪಗೌಡ ಬಿರಾದಾರ,ಶಿವಯ್ಯ ಮಠ,ಕಾಂತು ಲಿಂಗದಳ್ಳಿ,ಅಲ್ಲಾವುದ್ದೀನ ಮುಲ್ಲಾ, ರವಿ ಮಡಗೊಂಡ, ಸಲೀಂ ಮಕಾನದಾರ,ಪ್ರಕಾಶ ಮುಳಸಾವಳಗಿ,ಯಲ್ಲು ಬಮಗೊಂಡ ಮತ್ತಿತರಿದ್ದರು.
ಜಿಲ್ಲಾ ವರದಿಗಾರರು: ಬೀ.ಎಸ್.ಹೊಸೂರ್.ವಿಜಯಪುರ ….