700. ಕಿ. ಮೀ ಪಾದಯಾತ್ರೆ ಫಲ ನೀಡಿದೆ ಬಸವಜಯ ಮೃತ್ಯುಂಜಯ ಶ್ರೀಗಳು ….

ಇಂಡಿ (ಮೇ.5) :

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಒದಗಿಸಿಕೊಡುವದಕ್ಕಾಗಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಸುಮಾರು 700 ಕಿಲೋ ಮೀಟರ್ ಮಾಡಿದ ಪಾದಯಾತ್ರೆ ಫಲ ನೀಡಿದೆ ಎಂದು ಪಂಚಮಸಾಲಿ ಪೀಠದ ಪ್ರಥಮ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಶ್ರೀಗಳು ಅಭಿಪ್ರಾಯಪಟ್ಟರು. ಇಂಡಿ ಪಟ್ಟಣದಲ್ಲಿ ಸಮಾಜದ ಮುಖಂಡರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.1994 ರಲ್ಲಿ ನಡೆದ ಪಂಚಮಸಾಲಿ ಸಮಾರಂಭದಲ್ಲಿ ಸಮಾಜಕ್ಕೆ ಮೀಸಲಾತಿ ಒದಗಿಸಿಕೊಡಬೇಕೆಂದು ಆಗ್ರಹಿಸಲಾಗಿತ್ತು.

ಅಂದಿನಿಂದ ಇಂದಿನವರೆಗೆ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ ಕಳೆದ 2 ವರ್ಷಗಳಿಂದ ನಡೆದ ಹೋರಾಟ ತೀವ್ರ ಸ್ವರೂಪ ತಾಳಿತ್ತು. ಇದಕ್ಕೆ ವಿಜಯಾನಂದ ಕಾಶಪ್ಪನವರ, ಬಸನಗೌಡ ಪಾಟೀಲ, ವಿನಯ ಕುಲಕರ್ಣಿ, ಡಾ, ಸಾರ್ವಬೌಮ ಬಗಲಿ, ರವಿಕಾಂತ ಪಾಟೀಲ ಮುಂತಾದವರ ಸಹಕಾರದೊಂದಿಗೆ ಜನೇವರಿ 14 ರಿಂದ ಕೈಕೊಂಡಿರುವ ಪಾದಯಾತ್ರೆ ಮೊದಲು ಕೇವಲ 10 ಸಾವಿರ ಜನರಿಂದ ಕೂಡಿದ್ದು, ಬೆಂಗಳೂರು ತಲುಪುವದರೊಳಗಾಗಿ 10 ಲಕ್ಷಕ್ಕೆ ಮುಟ್ಟಿರುವದು ಒಂದು ಇತಿಹಾಸ ಎಂದರು. ನಮ್ಮ ಹೋರಾಟವನ್ನು ಕಂಡ ಸರಕಾರ ಕೊನೆಗೆ 2ಡಿ ಹೊಸ ಮೀಸಲಾತಿ ಸೃಷ್ಠಿಸಿ ನಮಗೆ ಮೀಸಲಾತಿ ನೀಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದಿಂದ ಒಬಿಸಿ ಪಟ್ಟಿಗೆ ಸೇರಿಸುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಅದಕ್ಕೆಲ್ಲಾ ಸಮಾಜ ಬಾಂಧವರು ಸನ್ನದ್ದರಾಗಬೇಕು,ಸಂಘಟಿತರಾಗಬೇಕು, ಹೊರಟಕ್ಕೆ ಕರೆ ಕೊಟ್ಟ ತಕ್ಷಣವೇ ಸಮಾಜದ ಹೋರಾಟದಲ್ಲಿ ಭಾಗವಹಿಸಬೇಕು ಎಂದರು. ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ, ಸಮಾಜದ ಮುಖಂಡರಾದ ಸೋಶೇಖರ ದೇವರ, ಅಶೋಕಗೌಡ ಬಿರಾದಾರ, ವಿ.ಹೆಚ್. ಬಿರಾದಾರ ಬಸವರಾಜ ಮುಜಗೊಂಡ ಮಾತನಾಡಿದರು. ವೇದಿಕೆಯಲ್ಲಿ ಎಸ್.ವೈ.ಪಾಟೀಲ, ಅನೀಲಪ್ರಸಾದ ಏಳಗಿ, ಬಾಳು ಮುಳಜಿ, ಬುದ್ದುಗೌಡ ಪಾಟೀಲ, ಪ್ರಕಾಶ ಬಿರಾದಾರ, ರವಿ ಖಾನಾಪೂರ, ಸಂಕೇತ ಬಗಲಿ, ಡಿ.ಎಸ್.ಪಾಟೀಲ, ಉದ್ದಿಮೆದಾರ ಎಸ್.ಬಿ.ಬಿರಾದಾರ, ಬೌರಮ್ಮ ಮುಳಜಿ ಮತ್ತಿತರಿದ್ದರು.

ಜಿಲ್ಲಾ ವರದಿಗಾರರು : ಬೀ.ಎಸ್.ಹೊಸೂರ್.ವಿಜಯಪುರ …..

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button