ಸುಮಾರು ವರ್ಷಗಳಿಂದ ಸರ್ಕಾರಿ ಗೌಂಠಾಣ ಜಾಗೆಗಳನ್ನು ಕೋಟ್ಯಾಧಿಶರ ಹೆಸರಿಗೆ ಅಕ್ರಮವಾಗಿ ಠರಾವು ನಕಲು & ಈ ಸ್ವತ್ತು – ಪೂರೈಕೆ ಬಗ್ಗೆ ಆಕ್ಷೇಪಣೆ.
ಗುಡೂರ ಮೇ.20


ಎಸ್.ಸಿ ಗ್ರಾಮದಲ್ಲಿ ವಾರ್ಡ್ ನಂ/01 ರಲ್ಲಿ ಆಸ್ತಿ ನಂ/84 ಖರೀದಿ ದಸ್ತ ನಂ/2284 ದಿನಾಂಕ:-11-10-2001 ನೇ. ಸಾಲಿನಲ್ಲಿ ಖರೀದಿ ಇರುವ ಮೂಲ ದಾಖಲಾತಿ ಪ್ರಕಾರ 45+22. 1/2 ಈ ರೀತಿ ಇರುವ ಆಸ್ತಿಗೆ ಹಿಂದಿನ ಭಾಗದಲ್ಲಿ ಪಂಚಾಯತ ಗೌಂಠಾಣ ಜಾಗೆಯ ಅಳತೆ 22. 1/2+15 ಈ ರೀತಿ ಪಂಚಾಯತ ಗೌಂಠಾಣ ಜಾಗೆಯನ್ನು ಬಹುಕೋಟಿ ಉದ್ದಿಮೆದಾರರಾದ ಶ್ಯಾಮ ಸುಂದರ ಧಲಬಂಜನ ಇವರ ಹೆಸರಿನಿಂದ ರಾತ್ರೋ ರಾತ್ರಿ ಠರಾವು ನಕಲು ಹಾಗೂ ಈ ಸ್ವತ್ತು ನಮೂನೆ-9 ಕಂಪ್ಯೂಟರ ಉತಾರೆ ದಾಖಲು ಮಾಡಿ ಕೊಟ್ಟಿರುವ.

ಗುಡೂರ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯ ಮೇಲೆ ಮಾನ್ಯ ತಾಲೂಕ ಪಂಚಾಯತ ಇಲಕಲ ಇವರಲ್ಲಿ ಮತ್ತು ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬಾಗಲಕೋಟೆ ಈ ಇಬ್ಬರು ಅಧಿಕಾರಿಗಳಲ್ಲಿ ದೂರು ನೀಡಿದರು. ಪಿ.ಡಿ.ಓ ಅಧಿಕಾರಿಯ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸದೇ ಇರುವದರಿಂದ ದೂರುದಾರರಲ್ಲಿ ಈ ಮೇಲಿನ ಇಬ್ಬರು ಅಧಿಕಾರಿಗಳು ಇಂಥಹ ಸರ್ಕಾರಿ ಗೌಂಠಾಣ ಜಾಗೆಯನ್ನು ದಾಖಲಿಸುವಲ್ಲಿ ಇವರ ಪ್ರೋತ್ಸಾಹವೇ ಮೇಲ್ನೋಟಕ್ಕೆ ತಿಳಿದು ಬಂದಿರುತ್ತದೆ.


ಹಾಗೂ ಈ ಪಂಚಾಯತ ಗೌಂಠಾಣ ಜಾಗೆಯ ಠರಾವು ನಕಲು ಹಾಗೂ ಈ ಸ್ವತ್ತು ಕಂಪ್ಯೂಟರ ಉತಾರನ್ನು ರದ್ದು ಪಡಿಸಿ ಈ ಗೌಂಠಾಣ ಜಾಗೆಯನ್ನು ಪಂಚಾಯತಿಗೆ ವಶ ಪಡಿಸಿ ಕೊಳ್ಳುತ್ತಾರೋ ಅಥಾವಾ ಮುಂದಿನ ದಿನಗಳಲ್ಲಿ ಗುಡೂರ ಗ್ರಾಮ ಪಂಚಾಯತ ಕಾರ್ಯಾಲಯ ಸಂಬಂಧಪಟ್ಟ ಗೌಂಠಾಣ ಜಾಗೆಯನ್ನು ಇದೆ ರೀತಿಯಾಗಿ ಬಹೂಕೋಟಿ ಮಾಲೀಕರ ಹೆಸರಿಗೆ ದಾಖಲು ಮಾಡಿ ಕೊಡುತ್ತಾರೋ ಕಾಯ್ದು ನೋಡಬೇಕಾಗಿದೆ ಮುಂದಿನ ಸಂಚಿಕೆಯಲ್ಲಿ ಕೂತೂಹಲ ಕಾದಿದೆ.
ವರದಿ:ಆನಂದ.ಎಚ್.ವಡ್ಡರ (ಸಾಮಾಜಿಕ ಹೋರಾಟಗಾರ) ಗೂಡುರ.