6 ನೇ. ರಾಜ್ಯ ಮಟ್ಟದ ವಿಶ್ವ ಕನ್ನಡ ಸಾವಿರ ಕವಿಗೋಷ್ಠಿ ಸಮ್ಮೇಳನಕ್ಕೆ – ಸಮ್ಮೇಳನಾಧ್ಯಕ್ಷರಾಗಿ ಶೈಲಜಾ ಬಾಬು ಆಯ್ಕೆ.
ಹಿರಿಯೂರು ಡಿ.08

ವಿಶ್ವ ಕನ್ನಡ ಕಲಾ ಸಂಸ್ಥೆ ನೋ ಹಿರಿಯೂರು ಕೇಂದ್ರದ ವತಿಯಿಂದ ಚಿತ್ರದುರ್ಗ ಮುರುಘಾ ರಾಜೇಂದ್ರ ಮಠ ಅನುಭವ ಮಂಟಪ ಸಭಾಂಗಣದಲ್ಲಿ ಜನವರಿ 19/2025 ರ ಭಾನುವಾರ ನಡೆಯಲಿರುವ 6 ನೇ. ರಾಜ್ಯ ಮಟ್ಟದ ವಿಶ್ವ ಕನ್ನಡ ಸಾವಿರ ಕವಿಗೋಷ್ಠಿ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಗೊಂಡ ಚಿತ್ರದುರ್ಗ ಕವಯತ್ರಿ, ವಚನಗಾರ್ತಿಯಾದ ಇವರು 3 ಕೃತಿಗಳನ್ನು ರಚಿಸಿರುವ ಶೈಲಜಾ ಬಾಬು ಅವರನ್ನು ಸನ್ಮಾನಿಸಿ ಸಮ್ಮೇಳನಕ್ಕೆ ಆಹ್ವಾನ ನೀಡಲಾಯಿತು. ಎಂದುಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಈ ರವೀಶ ಅಕ್ಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಶ್ವ ಕನ್ನಡ ಕಲಾ ಸಂಸ್ಥೆಯ ಪದಾಧಿಕಾರಿಗಳಾದ. ಮಸ್ಕಲ್ ನವೀನ್. ಯು.ನಾಗೇಶ್ ಕಾನ ಹೊಸಹಳ್ಳಿ, ಆರ್.ಜಿ ವಿನಾಯಕ ಚುಟುಕು ಸಾಹಿತಿ, ಡಾ, ನವೀನ್ ಸಜ್ಜನ್, ರಂಜಿತಾ ರಮೇಶ್ ಮಹೇಶ್ ಕಡಲೇಗುದ್ಲು ಶಿಕ್ಷಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ. ಹೊಸಹಳ್ಳಿ