ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗ್ರೀನವುಡ್ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ – ಶೇ 95 ರಷ್ಟು ಸಾಧನೆ.
ರೋಣ ಮೇ.08

ಪಟ್ಟಣದ ಶ್ರೀ ಸಿದ್ರಾಮೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಅಂಗ ಸಂಸ್ಥೆಯಾದ ಗ್ರೀನವುಡ್ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಶೇ 95 ರಷ್ಟು ಫಲಿತಾಂಶ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಕಬಾಡರ 94/88 ಪ್ರಥಮ ಸ್ಥಾನ ಆಸ್ಟ್ರಿಯತಾಜ್ ಹುಲ್ಲೂರ ಶೇ 94/24 ದ್ವಿತೀಯ ಸ್ಥಾನ ಆಸ್ಥಾದಳವಾಯಿ ಶೇ 88/64 ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಅವಿನಾಶ.ಎಸ್ ಸಾಲಿಮನಿ ಆಡಳಿತಾಧಿಕಾರಿಗಳಾದ ಎಸ್.ಎಂ ಕೊಟಗಿ ಮುಖ್ಯಪಾಧ್ಯಾರುಗಳಾದ ಶ್ರೀಮತಿ ಸುನೀತಾ ರಾಜಾ.ಮಹೇಶ ಅಚ್ಚಿನಗೌಡ್ರ, ಶಿವರಾಜ ದೊಡ್ಡಣ್ಣವರ, ಪ್ರತಿಭಾ ಬೂದಿಹಾಳ ಮತ್ತು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ