ಡಾ, ಬಿ.ಆರ್ ಅಂಬೇಡ್ಕರ್ ಹಾಗೂ ಡಾ, ಬಾಬು ಜಗಜೀವನ್ ರಾಮ್ ಅವರ – ಜಯಂತ್ಯೋತ್ಸವ ಕಾರ್ಯಕ್ರಮ ಆಚರಣೆ.
ರೋಣ ಏ.15

ಡಾ, ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಬ್ಬರೂ ನಡೆಯಬೇಕು. ಎಲ್ಲಾ ವರ್ಗದ ಜನರಿಗೆ ಸಮಾನತೆ, ಶಿಕ್ಷಣ ನೀಡಿದ ಧೀಮಂತ ನಾಯಕ ಡಾ, ಬಿ.ಆರ್ ಅಂಬೇಡ್ಕರ್ ಅವರ ವಿಚಾರ ಧಾರೆಗಳನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಪುರಸಭೆ ಸದಸ್ಯ ಮಿಥುನ ಪಾಟೀಲ ಹೇಳಿದರು. ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕ ಆಡಳಿತ ಹಾಗೂ ಎಲ್ಲಾ ಸಂಘಟನೆಗಳ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ಅವರ 134 ನೇ. ಜಯಂತ್ಯೋತ್ಸವ ಹಾಗೂ ಡಾ, ಬಾಬು ಜಗಜೀವನ್ ರಾಮ್ ಅವರ 118 ನೇ. ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.ಡಾ, ಬಿ.ಆರ್ ಅಂಬೇಡ್ಕರ್ ಅವರ ಕುರಿತು ಉಪನ್ಯಾಸಕ ಲಕ್ಷ್ಮಣ ಬಕ್ಕಾಯಿ ಉಪನ್ಯಾಸ ನೀಡಿದ ಅವರು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಕುರಿತು ಅಧ್ಯಯನ ಮಾಡಿದಾಗ ಮಾತ್ರ ಜ್ಞಾನಿಗಳಾಗಲು ಸಾಧ್ಯ. ದಲಿತ ಸಮುದಾಯದ ಜನರಿಗೆ ರಾಜಕೀಯ ಹಾಗೂ ಮತದಾನದ ಹಕ್ಕನ್ನು ನೀಡಿದವರು ಅಂಬೇಡ್ಕರ್. ಅಂಬೇಡ್ಕರ್ ಅವರು ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂಅಳವಡಿಸಿ ಕೊಳ್ಳಬೇಕು. ದೇಶ ಕಂಡ ಅಪ್ರತಿಮ ನಾಯಕ ಬಾಬಾ ಸಾಹೇಬ ಅಂಬೇಡ್ಕರ್. ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಂವಿಧಾನದಿಂದಾಗಿ ಸಮಾಜದಲ್ಲಿ ಒಳ್ಳೆಯ ಶಿಕ್ಷಣವಂತರು ಆಗಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನ ಹೊಂದಲು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಎಂದು ಹೇಳಿದರು.ಡಾ, ಬಾಬು ಜಗಜೀವನ್ ರಾಮ್ ಅವರ ಕುರಿತು ಪುಂಡಲಿಕ ಮಾದರ ವಿಶೇಷ ಉಪನ್ಯಾಸ ನೀಡಿದರು.ಡಾ, ಬಿ.ಆರ್ ಅಂಬೇಡ್ಕರ್ ಹಾಗೂ ಡಾ, ಬಾಬು ಜಗಜೀವನ್ ರಾಮ್ ಅವರ ಭಾವ ಚಿತ್ರವನ್ನು ಶ್ರೀ ಸಿದ್ದಾರೂಢ ಮಠದಿಂದ ಪುರಸಭೆ ಕಚೇರಿ ಆವರಣದ ವರೆಗೂ ಡೊಳ್ಳು ಕುಣಿತ ವಾದ್ಯ ಮೇಳಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ತಹಶೀಲ್ದಾರ ನಾಗರಾಜ.ಕೆ ಸಿಪಿಐ ಎಸ್.ಎಸ್ ಬೀಳಗಿ, ಪಿ.ಎಸ್.ಐ ಪ್ರಕಾಶ ಬಣಕಾರ, ತಾ.ಪಂ ಇ.ಓ ಚಂದ್ರಶೇಖರ ಕಂದಕೂರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಆಲೂರು, ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರಗಪ್ಪ ಹಿರೇಮನಿ, ಬಿ.ಇ.ಓ ರುದ್ರಪ್ಪ ಹುರಳಿ, ಬಲವಂಯಪ್ಪ ನಾಯಕ, ರವೀಂದ್ರಗೌಡ ಪಾಟೀಲ, ರಾಮಣ್ಣ ಲಮಾಣಿ,ಪ್ರಕಾಶ ಹೊಸಳ್ಳಿ, ಸೋಮು ನಾಗರಾಜ, ಸಂಜಯ್ ದೊಡ್ಡಮನಿ, ಶರಣಪ್ಪ ದೊಡ್ಡಮನಿ, ಸಂಗಪ್ಪ ಹೊಸಮನಿ, ವೀರಪ್ಪ ತೆಗ್ಗಿನಮನಿ, ಮೌನೇಶ ಹಾದಿಮನಿ, ಹನುಮಂತ ಪೂಜಾರ, ದೇವೇಂದ್ರಪ್ಪ ಕೊಳಪ್ಪನವರ, ಬಾಳಪ್ಪ ಭಜೇಂತ್ರಿ, ಬಸವರಾಜ ಕುರಿ, ಶರಣು ಚಲವಾದಿ, ಭೀಮಪ್ಪ ಮಾದರ, ಮಂಜುನಾಥ ಚಲವಾದಿ ಸೇರಿದಂತೆ ಇತರರು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ