ಮಕ್ಕಳನ್ನು ಹೃದಯವಂತರಾಗಿ ಬೆಳೆಸಬೇಕು – ಅಕ್ಬರ್ ಅಲಿ.
ತರೀಕೆರೆ ಮೇ.14

ಶಿಕ್ಷಣ ಹಣ ಗಳಿಕೆಯ ಮಾರ್ಗವಾಗಬಾರದು ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾದ ಅಕ್ಬರ್ ಅಲಿ ಉಡುಪಿ ರವರು ಹೇಳಿದರು.
ಅವರು ಇಂದು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಮಾಅತೆ ಇಸ್ಲಾಮಿ ಹಿಂದ್ ತರೀಕೆರೆ ಘಟಕ ಪಟ್ಟಣದ ಹೋಟೆಲ್ ಅರಮನೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಂದೆ ತಾಯಿಯ ಆಶೀರ್ವಾದ ಮಕ್ಕಳಿಗೆ ನೆರಳಾಗಿರಬೇಕು ಮಕ್ಕಳು ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಹಾಕದೆ ಪಾಲನೆ ಮಾಡಬೇಕು. ಮಕ್ಕಳು ಶಿಕ್ಷಣದ ಮೂಲಕ ದೇವರು, ಹೆತ್ತವರನ್ನು ಗುರುತಿಸುವಂಥರಾಗ ಬೇಕು, ಹೆಚ್ಚಿಗೆ ಅಂಕ ಪಡೆದಿಲ್ಲವೆಂದು ಆತ್ಮಹತ್ಯೆ ಮಾಡಿ ಕೊಳ್ಳುವುದು ಸರಿಯಲ್ಲ ಆದ್ದರಿಂದ ಜೀವನದಲ್ಲಿ ಯಶಸ್ಸು ಪಡೆಯುವ ಶಿಕ್ಷಣ ಕಲಿಸಬೇಕು ಎದೆಗಾರಿಕೆ, ಧೈರ್ಯ ತುಂಬುವ ಕೆಲಸ ಮಾಡಬೇಕು. ಆತ್ಮ ಹತ್ಯೆಯಿಂದ ಮಕ್ಕಳನ್ನು ರಕ್ಷಿಸ ಬೇಕು. ಹೃದಯವಂತ ಮನುಷ್ಯರಾಗಲು ಪ್ರಯತ್ನಿಸಿ ಮಕ್ಕಳನ್ನು ಹೃದಯ ವಂತರನ್ನಾಗಿ ಬೆಳೆಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಮೊಗ್ಗ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್ ಮಾತನಾಡಿ ಪ್ರತಿಭಾವಂತ ಮಕ್ಕಳನ್ನು ಪೋಷಕರು ಶಿಕ್ಷಕರು ಜವಾಬ್ದಾರಿಯಿಂದ ಪ್ರೋತ್ಸಾಹಿಸಬೇಕು ಉನ್ನತ ವ್ಯಾಸಂಗಕ್ಕೆ ಹೋಗುವಾಗ ಹಾಸ್ಟೆಲ್ ಗಳಲ್ಲಿ ಸಹವಾಸ ದೋಷದಿಂದ ಎಷ್ಟೋ ಮಕ್ಕಳ ಜೀವನ ಹಾಳಾಗುತ್ತಿದೆ ಆದ್ದರಿಂದ ಕನಿಷ್ಠ ಪ್ರತಿದಿನ ಅರ್ಧ ಗಂಟೆಯಾದರೂ ಪೋಷಕರು ಮಕ್ಕಳೊಂದಿಗೆ ಮಾತನಾಡಬೇಕು ತಮ್ಮ ಭಾವನೆಗಳನ್ನ ಹಂಚಿ ಕೊಳ್ಳಬೇಕು.
ಮೊಬೈಲ್ ನಿಂದ ಮಕ್ಕಳು ಜೀವನ ಹಾಳಾಗುತ್ತಿದೆ ಮಕ್ಕಳ ಭವಿಷ್ಯವೂ ಹಾಳಾಗುತ್ತಿದೆ ಎಸ್.ಎಸ್.ಎಲ್.ಸಿ ಪಿ.ಯು.ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ಮಕ್ಕಳು ಮುಂದಿನ ವ್ಯಾಸಂಗಕ್ಕೆ ಎಚ್ಚರಿಕೆಯಿಂದ ನಡೆಯಬೇಕು.ಒಂದು ಕೈಯಲ್ಲಿ ಪುಸ್ತಕ ಇನ್ನೊಂದು ಕೈಯಲ್ಲಿ ಶಿಕ್ಷಕರ ಕೈಯನ್ನು ಹಿಡಿಯಬೇಕು. ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ಬೆಳೆಸಿರಿ ಎಂದು ಹೇಳಿದರು.

ಅತಿಥಿಗಳಾಗಿ ಶರ್ಮತ್ಉಲ್ಲಾ , ಸದ್ವಿದ್ಯಾ ಶಾಲೆಯ ಮುಖ್ಯ ಶಿಕ್ಷಕಿಯಾದ ಹರ್ಷಿಣಿ ಉಪಸ್ಥಿತರಿದ್ದು, ಶೇಕ್ ಜಾವಿದ್, ಬುರಾನ್ ಅಹಮದ್ ಬೇಗ್, ಕೌಸರ್ ಪಾಶ, ನೆರವೇರಿಸಿದರು.
ಕುರನ್ ಪಟ್ಟಣವನ್ನು ಅಂಜಬೇಗ್ , ಮೊಹಮ್ಮದ್ ಜೈದ್ ಕೌಸರ್ ಮಾಡಿದರು. ಹುಜೈಪ ಅಹಮದ್ ಸೌಹಾರ್ದ ಗೀತೆ ಹಾಡಿದರು, ಶೇಕ್ ಜಾವಿದ್ ಸ್ವಾಗತಿಸಿ ಆದಿಲ್ ಪಾಷಾ ನಿರೂಪಿಸಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು

