🔴BREAKING NEWS: ಉಡುಪಿ ಜಿಲ್ಲೆಯಲ್ಲಿ ಭ್ರಷ್ಟಾಚಾರದ ಮಹಾಸ್ಫೋಟ..!🔴 💥ಹೆಡ್‌ಲೈನ್ಸ್: ಸ್ಫೋಟಕ ಸತ್ಯಗಳು ಈಗ ಬಹಿರಂಗ..!💥. 💥ಲೋಕಾಯುಕ್ತರ ‘ಬೋಟಿಂಗ್’ ಮೋಜು ಮಸ್ತಿ – ಭ್ರಷ್ಟಾಚಾರ ತಡೆಯ ಬೇಕಾದವರೇ ಶಾಮೀಲಾಗಿದ್ದಾರಾ..?💥
ಉಡುಪಿ ಮೇ.15

ಪ್ರಜ್ಞಾವಂತರ ಜಿಲ್ಲೆ ಉಡುಪಿಯಲ್ಲಿ ಈಗ ಭ್ರಷ್ಟಾಚಾರದ ಅಟ್ಟಹಾಸ ಮಿತಿ ಮೀರಿದೆ! ಸಾಲಿಗ್ರಾಮ ಮತ್ತು ಬೈಂದೂರು ಪಟ್ಟಣ ಪಂಚಾಯತ್‌ಗಳ ಆಡಳಿತದಲ್ಲಿ ನಡೆದಿರುವ ಸರಣಿ ಅಕ್ರಮಗಳು ಮತ್ತು ಸರಕಾರಿ ಆದೇಶದ ಬಹಿರಂಗ ಉಲ್ಲಂಘನೆಯ ಬಗ್ಗೆ ನಾಗೇಂದ್ರ ಪುತ್ರನ್ ಕೋಟ ಅವರು ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.
🚨ಅಧಿಕಾರಿಯ ವರ್ಗಾವಣೆ ಮತ್ತು ಅಕ್ರಮದ ಗುಟ್ಟು..!
ಆರೋಗ್ಯ ಇಲಾಖೆಯ ಅಧಿಕಾರಿಯಾದ “ಶ್ರೀ ಅಜಯ್ ಭಂಡಾರ್ಕರ್” ಅವರನ್ನು ಮೇ 07 ರಂದೇ ತಕ್ಷಣ ಜಾರಿಗೆ ಬರುವಂತೆ ಮೂಲ ಇಲಾಖೆಗೆ ಹಿಂತಿರುಗುವಂತೆ ರಾಜ್ಯ ಸರಕಾರ ಆದೇಶಿಸಿದೆ. ಆದರೆ, ಈ ಅಧಿಕಾರಿ ಸರಕಾರಿ ಆದೇಶವನ್ನೇ ಗಾಳಿಗೆ ತೂರಿ ಇನ್ನೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕುರ್ಚಿಯಲ್ಲಿ ಝಾಂಡಾ ಹೂಡಿ ಕುಳಿತಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. KAMS ಅಧಿಕಾರಿಗಳಿಗೆ ಮೀಸಲಾದ ಹುದ್ದೆಯಲ್ಲಿ ಅನ್ಯ ಇಲಾಖೆಯ ಅಧಿಕಾರಿ ಕಾನೂನು ಉಲ್ಲಂಘಿಸಿ ಮುಂದುವರಿಯುತ್ತಿರುವುದು ಯಾರ ಪ್ರಭಾವದಿಂದ?
💰ಕೋಟಿ ಕೋಟಿ ಲೂಟಿ:-
ಲಂಚದ ಅಸಲಿ ಮುಖ..! ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಆರೋಪಗಳು ಬೆಚ್ಚಿ ಬೀಳಿಸುವಂತಿವೆ.
80 ಲಕ್ಷದ ಪ್ಲ್ಯಾಟ್ ಬೇಡಿಕೆ:-
ವೆಂಕಟ ಲಕ್ಷ್ಮಿ ಬಹುಮಹಡಿ ಕಟ್ಟಡದ ಪರವಾನಗಿ ನೀಡಲು ಬಿಜೆಪಿ ಸದಸ್ಯ ಸಂಜು ದೇವಾಡಿಗ ಮೂಲಕ “80 ಲಕ್ಷ ರೂಪಾಯಿಯ ಪ್ಲ್ಯಾಟ್” ಬೇಡಿಕೆ ಇಟ್ಟಿರುವ ಸ್ಫೋಟಕ ಮಾಹಿತಿ ಬಯಲಾಗಿದೆ.
ಅಪೋಲೋ ಮೆಡಿಕಲ್ ಹಗರಣ:-
ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೂ ನಿಯಮ ಮೀರಿ ಪರವಾನಗಿ ನೀಡಲು “2 ಲಕ್ಷ ರೂಪಾಯಿ” ಲಂಚ ಪಡೆದಿರುವ ಆರೋಪ ಕೇಳಿ ಬಂದಿದೆ.
ಆರು ಬಂಗಲೆಗಳ ಒಡೆಯ:-
ಕೇವಲ 1-2 ವರ್ಷದ ಅಲ್ಪಾವಧಿಯಲ್ಲಿ “ಪಾರಂಪಳ್ಳಿ ಡಾಲರ್ಸ್ ಕಾಲೋನಿಯಲ್ಲಿ” ಲಕ್ಷಾಂತರ ಮೌಲ್ಯದ ಭೂಮಿ ಮತ್ತು ಐಷಾರಾಮಿ ವಾಹನಗಳ ಖರೀದಿ ಮಾಡಿರುವ ಈ ಅಧಿಕಾರಿಯ ಆಸ್ತಿ ಮೂಲದ ಬಗ್ಗೆ ತನಿಖೆ ಯಾಗಬೇಕಿದೆ.
🚤 ಲೋಕಾಯುಕ್ತರ ನಡೆಯೇ ಅನುಮಾನಾಸ್ಪದ..!
ಜಿಲ್ಲೆಯಲ್ಲಿ ಇಷ್ಟೆಲ್ಲಾ ಭ್ರಷ್ಟಾಚಾರi ನಡೆಯುತ್ತಿದ್ದರೂ, ಈ ಹಿಂದೆ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಭೇಟಿ ನೀಡಿದ್ದ ಉಡುಪಿ ಲೋಕಾಯುಕ್ತರು, ತನಿಖೆ ಮಾಡುವ ಬದಲು ಅಧಿಕಾರಿಗಳ ಜೊತೆ “ಬೋಟಿಂಗ್ ಮತ್ತು ಮೋಜು ಮಸ್ತಿ” ಮಾಡಿ ಹಿಂದಿರುಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ರಕ್ಷಕನೇ ಭಕ್ಷಕರ ಜೊತೆ ಕೈಜೋಡಿಸಿದರೆ ಜನ ಸಾಮಾನ್ಯರ ಗತಿಯೇನು?
🏛️ ಜನರ ನೇರ ಎಚ್ಚರಿಕೆ:-
“ಸಚಿವರೇ ಕೂಡಲೇ ಕ್ರಮ ಕೈಗೊಳ್ಳಿ..!” “ಜನರನ್ನು ಅಧೀ ಮುಷ್ಠಿಯಲ್ಲಿ ಇಡಲು ಸಾಧ್ಯವಿಲ್ಲ. ನಾವು ಸರಿಯಾಗಿ ಕೆಲಸ ಮಾಡಿದರೆ ಮಾತ್ರ ಜನ ಮತ ನೀಡುತ್ತಾರೆ. ಅಕ್ರಮಗಳಿಗೆ ಸಾಥ್ ನೀಡುವ ನಿಮ್ಮಂತಹ ಜನ ಪ್ರತಿನಿಧಿಗಳಿಂದಲೇ ವ್ಯವಸ್ಥೆ ಹಾಳಾಗುತ್ತಿದೆ” ಎಂದು ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಸಾರ್ವಜನಿಕರ ಉಗ್ರ ಬೇಡಿಕೆಗಳು:-
ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ:-
ಜಿಲ್ಲೆಯ ಸ್ಥಿತಿಗತಿ ಅರಿಯದ ಸಚಿವರನ್ನು ಕೂಡಲೇ ಚೇಂಜ್ ಮಾಡಬೇಕು.
CEO ವರ್ಗಾವಣೆ:-
ಜಿಲ್ಲಾ ಪಂಚಾಯತ್ CEO ಪ್ರತೀಕ್ ಬಾಯಲ್ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು.
ಅಜಯ್ ಭಂಡಾರ್ಕರ್ ತೆರವು:-
ಸರಕಾರಿ ಆದೇಶದಂತೆ ಅಧಿಕಾರಿಯನ್ನು ಕೂಡಲೇ ಹುದ್ದೆಯಿಂದ ಬಿಡುಗಡೆ ಗೊಳಿಸಿ ತನಿಖೆ ನಡೆಸ ಬೇಕು.
ಎಚ್ಚರಿಕೆ:-
ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ, ಉಸ್ತುವಾರಿ ಸಚಿವರು ಜಿಲ್ಲೆ ಬಿಡುವ ವರೆಗೂ ಮತ್ತು ಭ್ರಷ್ಟ ಅಧಿಕಾರಿಗಳನ್ನು ಮನೆಗೆ ಕಳುಹಿಸುವ ವರೆಗೂ ಉಡುಪಿಯ ಬುದ್ಧಿವಂತ ಜನತೆ ತೀವ್ರ ಸ್ವರೂಪದ ಕಾನೂನು ಬದ್ಧ ಹೋರಾಟ ನಡೆಸಲಿದ್ದಾರೆ..!
ವರದಿ:ಆರತಿ.ಗಿಳಿಯಾರು.ಉಡುಪಿ

