ಪ್ರತಿಯೊಬ್ಬರೂ ಶ್ರೀಶಾರದಾದೇವಿ ಜೀವನಗಂಗಾ ಗ್ರಂಥದ ಅಧ್ಯಯನವ್ರತ ಕೈಗೊಳ್ಳಬೇಕು – ಶ್ರೀಮತಿ ಸಿ.ಎಸ್ ಭಾರತಿ ಚಂದ್ರಶೇಖರ್.
ಚಳ್ಳಕೆರೆ ಮೇ.14

ಪ್ರತಿಯೊಬ್ಬರೂ ಸ್ವಾಮಿ ಪುರುಷೋತ್ತಮಾನಂದಜೀ ಬರೆದಿರುವ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥದ ಅಧ್ಯಯನವ್ರತ ಕೈಗೊಳ್ಳುವುದ ರಿಂದ ಅವರ ಜೀವನ ಸಾರ್ಥಕವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಹಾಗೂ ಶಿಕ್ಷಕರಾದ ಶ್ರೀಮತಿ ಸಿ.ಎಸ್.ಭಾರತಿ ಚಂದ್ರಶೇಖರ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಶ್ರೀಮಾತೆ ಶಾರದಾದೇವಿಯವರ ಜೀವನ ಮತ್ತು ಸಂದೇಶಗಳ “ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಶಾರದಾಮಾತೆಯವರ ಬಾಲ್ಯ ಜೀವನದಿಂದ ಆರಂಭಿಸಿ ಅವರ ಸಮಗ್ರ ಜೀವನವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟ ಅವರು ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಬದುಕಿನಲ್ಲಿ ಶಾರದಾದೇವಿಯವರ ಜೀವನ ಮತ್ತು ಸಂದೇಶಗಳನ್ನು ಅಧ್ಯಯನ ಮಾಡಬೇಕು.
ಅವರ ಜೀವನದ ಒಂದೊಂದು ಘಟನೆಯೂ ನಮ್ಮ ನಿತ್ಯ ಬದುಕಿಗೆ ದಾರಿ ದೀಪವಾಗಿದ್ದು ಸಾರ್ಥಕ ಜೀವನದ ನಿರ್ಮಾಣದಲ್ಲಿ ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದ ಅವರು ತಮ್ಮ ಜೀವನಾನುಭವಗಳನ್ನು ಸದ್ಭಕ್ತರೊಂದಿಗೆ ಹಂಚಿ ಕೊಂಡರು.
ಸತ್ಸಂಗದ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಎಂ ಗೀತಾ ನಾಗರಾಜ್,ರಾಧಾ ಭೀಮಾರೆಡ್ಡಿ, ಪ್ರಮೀಳಾ ಜಗದೀಶ್, ಮಾಕಂಸ್ ಲಕ್ಷ್ಮೀ ಬಾಲಾಜೀ ಅವರಿಂದ ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ ನಾಮಾವಳಿ ಹಾಗೂ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ನಂಜಮ್ಮ ಕೆಂಚಪ್ಪ, ಭಾಗ್ಯಲಕ್ಷ್ಮೀ, ಸೃಜನ ಟಿ.ಸ್ವಾಮಿ ಜಿ.ಟಿ ಸಮಯ್, ಎಂ ಲಕ್ಷ್ಮೀದೇವಮ್ಮ, ಸರಸ್ವತಿ, ಪ್ರೇಮಾ, ಅನುಸೂಯ ರಾಘವೇಂದ್ರ, ಪಂಕಜಾ ಚೆನ್ನಪ್ಪ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

