ಶ್ರೀಶಾರದಾಶ್ರಮದಲ್ಲಿ ಸ್ವಾಮಿ ಆತ್ಮಸ್ಥಾನಂದಜೀ – ಸ್ಮೃತಿಗಳ ಪ್ರವಚನ.

ಚಳ್ಳಕೆರೆ ಮೇ.15

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಶ್ರೀರಾಮಕೃಷ್ಣ‌ ಮಹಾಸಂಘದ ಅಧ್ಯಕ್ಷರಾಗಿದ್ದ ಸ್ವಾಮಿ ಆತ್ಮಸ್ಥಾನಂದಜೀ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅವರ‌ ಸ್ಮೃತಿಗಳ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಪ್ರವಚನದ ಕೊನೆಯಲ್ಲಿ “ತ್ಯಾಗಮೂರುತಿ ಶ್ರೀಮಾತೆ ಶಾರದಾದೇವಿ” ಎಂಬ ವಿಷಯವಾಗಿ ಪ್ರವಚನ ನೀಡಿದ ಅವರು ಶ್ರೀಮಾತೆ ಶಾರದಾದೇವಿಯವರಲ್ಲಿ ನಾವು ಪರಿಪೂರ್ಣ ನಿರಹಂಕಾರದ ವ್ಯಕ್ತಿತ್ವವನ್ನು ಕಾಣ ಬಹುದಾಗಿದ್ದು ಅವರಲ್ಲಿ ಕಾಮ-ಕಾಂಚನ ಹಾಗೂ ಅಹಂಕಾರದ ಪರಿಪೂರ್ಣ ತ್ಯಾಗವನ್ನು ಗಮನಿಸಬಹುದು ಎಂದರು.

ಸತ್ಸಂಗದ ಆರಂಭದಲ್ಲಿ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಎಂ ಗೀತಾ ನಾಗರಾಜ್, ವನಜಾಕ್ಷಿ ಮೋಹನ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಚೇತನ್, ಮಂಜುಳಮ್ಮ, ಸಿ.ಎಸ್ ಭಾರತಿ, ಜಿ.ಯಶೋಧಾ ಪ್ರಕಾಶ್, ರಶ್ಮಿ ವಸಂತ, ಪಂಕಜಾ, ಡಾ‌, ಭೂಮಿಕಾ, ಗೀತಾ ವೆಂಕಟೇಶ್ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button