ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಯಭಾರಿ ಸ್ವಾಮಿ ರಂಗನಾಥಾನಂದಜೀ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಮೇ.12

ದಿವ್ಯತ್ರಯರ ಇಂದಿನ ಅಲಂಕಾರ 🪷🪻
ಶ್ರೀರಾಮಕೃಷ್ಣ ಮಹಾ ಸಂಘದ ಹದಿಮೂರನೇ ಸಂಘ ಗುರುಗಳಾಗಿ 96 ವರ್ಷಗಳ ಸಾರ್ಥಕ ಆಧ್ಯಾತ್ಮಿಕ ಜೀವನ ನಡೆಸಿದ ಸ್ವಾಮಿ ರಂಗನಾಥಾನಂದ ಜೀಯವರು ಭಾರತದ ಅಭಿನವ ವಿವೇಕಾನಂದ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಯಭಾರಿ ಎಂಬ ಬಿರುದುಗಳನ್ನು ಪಡೆದವರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯ ಪಟ್ಟರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಸ್ವಾಮಿ ರಂಗನಾಥಾನಂದಜೀ” ಹಾಗೂ “ತ್ಯಾಗಮೂರ್ತಿ ಶ್ರೀಮಾತೆ ಶಾರದಾದೇವಿ” ಎಂಬ ವಿಷಯವಾಗಿ ಪ್ರವಚನ ನೀಡುತ್ತ ಮಾತನಾಡುತ್ತಿದ್ದರು.

ತ್ಯಾಗ ಮೂರುತಿಯಾಗಿದ್ದ ಶಾರದಾದೇವಿಯವರಲ್ಲಿ ಪರಿಪೂರ್ಣ ಅಹಂಕಾರದ ತ್ಯಾಗವನ್ನು ಮತ್ತು ನಿರಹಂಕಾರದ ಪರಾಕಾಷ್ಠೆಯನ್ನು ಕಾಣಬಹುದು ಎಂದರು.

ಸತ್ಸಂಗದ ಆರಂಭದಲ್ಲಿ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಸದ್ಭಕ್ತರಿಂದ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಸತ್ಸಂಗದಲ್ಲಿ ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಚೇತನ್, ಮಂಜುಳಾ ಉಮೇಶ್, ರಶ್ಮಿ ವಸಂತ, ಯಶಸ್ವಿ, ಅಂಬುಜಾ ಶಾಂತಕುಮಾರ್, ಸುಮನಾ, ಡಿ ಕಾವೇರಿ ಸುರೇಶ್, ಸಿ.ಎಸ್ ಭಾರತಿ, ಪಂಕಜ, ಗೀತಾ ವೆಂಕಟೇಶ್, ಹನ್ವಿಕಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

