🚨**BREAKING NEWS**🚨ಜನರಿಗೆ ಉಪದೇಶ, ತಮಗೆ ವಿದೇಶ ಪ್ರವಾಸ..? ಮೋದಿಯವರ ‘ಬಾಲಿಶ’ – ನೀತಿಗೆ ಕಾಂಗ್ರೆಸ್ ತೀವ್ರ ಆಕ್ರೋಶ..!

ನವದೆಹಲಿ/ಉಡುಪಿ ಮೇ.12

ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ನೀಡಿರುವ ‘ತ್ಯಾಗದ ಕರೆ’ ಈಗ ದೇಶಾದ್ಯಂತ ದೊಡ್ಡ ರಾಜಕೀಯ ಸಂಚಲನ ಸೃಷ್ಟಿಸಿದೆ. “ಮೋದಿ ಅವರೇ, ಆಕರ್ಷಕ ಭಾಷಣಗಳಿಂದ ದೇಶಕ್ಕೆ ಅಚ್ಛೇ ದಿನ್ ತರಲು ಸಾಧ್ಯವಿಲ್ಲ” ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ “ರಮೇಶ್ ಕಾಂಚನ್” ಅವರು ಪ್ರಧಾನಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

🛑 ವರದಿಯ ಮುಖ್ಯಾಂಶಗಳು:-

ಜನರಿಗೆ ಉಪದೇಶ, ತಮಗೆ ಯಾತ್ರೆ:-

“ಪೆಟ್ರೋಲ್ ಬಳಸಬೇಡಿ, ಚಿನ್ನ ಕೊಳ್ಳಬೇಡಿ, ವಿದೇಶಕ್ಕೆ ಹೋಗಬೇಡಿ” ಎಂದು ಜನರಿಗೆ ಹೇಳುವ ಪ್ರಧಾನಿಗಳು, ಮೇ 15ರಿಂದ ತಾವೇ 5 ದೇಶಗಳ ಪ್ರವಾಸಕ್ಕೆ ಹೋಗುತ್ತಿರುವುದು ಹಾಸ್ಯಾಸ್ಪದ ಎಂದು ಕಾಂಚನ್ ವ್ಯಂಗ್ಯವಾಡಿದ್ದಾರೆ.

ವೈಫಲ್ಯದ ಕೈಗನ್ನಡಿ:-

“ಕಳೆದ 10-12 ವರ್ಷಗಳಲ್ಲಿ ದೇಶ ಎಂತಹ ಸ್ಥಿತಿಗೆ ಬಂದಿದೆ ಎಂದರೆ, ಜನರು ಏನು ತಿನ್ನಬೇಕು, ಎಲ್ಲಿಗೆ ಹೋಗಬೇಕು ಎಂದು ಸರ್ಕಾರ ಹೇಳುವಂತಾಗಿದೆ. ಇದು ಮೋದಿಯವರ ಆಡಳಿತ ವೈಫಲ್ಯಕ್ಕೆ ಸಾಕ್ಷಿ.

“ಕೊರೋನಾ ಕಾಲದ ‘ಮಂಗ’ ಮಾಡಿದ ನೆನಪು:-

ಅಂದು ತಟ್ಟೆ ಬಡಿಯಲು ಹೇಳಿ ಜನರನ್ನು ಮಂಗ ಮಾಡಿದ್ದ ಮೋದಿ, ಇಂದು ರಸ ಗೊಬ್ಬರ, ಖಾದ್ಯ ತೈಲ ಮತ್ತು ಇಂಧನ ಬಳಕೆಯನ್ನು ತಗ್ಗಿಸಲು ಹೇಳುತ್ತಿರುವುದು ಜನರ ದೌರ್ಭಾಗ್ಯ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಿಜೆಪಿಯ ಇಬ್ಬಂದಿ ನೀತಿ:-

ಕರ್ನಾಟಕದ ಗ್ಯಾರಂಟಿಗಳನ್ನು ಟೀಕಿಸುವ ಮೋದಿ, ಪಶ್ಚಿಮ ಬಂಗಾಳದಲ್ಲಿ ಉಚಿತ ಬಸ್ ಪ್ರಯಾಣದ ಭರವಸೆ ನೀಡಿದ್ದು ಯಾಕೆ? ರಾಜ್ಯ ಬಿಜೆಪಿ ನಾಯಕರ ಬಳಿ ಇದಕ್ಕೆ ಉತ್ತರವಿದೆಯೇ..? ಎಂದು ಪ್ರಶ್ನಿಸಲಾಗಿದೆ.

📊 “ದೇಶದ ಸಂಕಷ್ಟಕ್ಕೆ ಎಡಬಿಡಂಗಿ ವಿದೇಶಾಂಗ ನೀತಿಯೇ ಕಾರಣ!

“ಇರಾನ್-ಇಸ್ರೇಲ್ ಯುದ್ಧದ ನಡುವೆ ಭಾರತ ಸಿಲುಕಿ ಕೊಂಡಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವ ಬದಲು, ಪ್ರಧಾನಿಗಳು ರೋಡ್ ಶೋ ನಡೆಸಿ ಸಾವಿರಾರು ಲೀಟರ್ ಇಂಧನ ಪೋಲು ಮಾಡುತ್ತಿದ್ದಾರೆ. ಇಂಧನ, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಮೋದಿಯವರ ದೋಷಪೂರಿತ ವಿದೇಶಾಂಗ ನೀತಿಯೇ ಕಾರಣ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ.

“ಪ್ರತಿ ಬಾರಿ ವೈಫಲ್ಯ ಉಂಟಾದಾಗ ನೆಹರೂ ಅಥವಾ ಮನಮೋಹನ್ ಸಿಂಗ್ ಅವರನ್ನು ದೂರುವ ಬಿಜೆಪಿ ಭಕ್ತರೇ, ಈಗ ಪ್ರಧಾನಿ ನೀಡಿರುವ ಈ ‘ಬಿಟ್ಟಿ ಉಪದೇಶ’ ಕ್ಕೆ ಯಾರನ್ನು ದೂರುತ್ತೀರಿ..?” ಎಂದು ರಮೇಶ್ ಕಾಂಚನ್, ಅಧ್ಯಕ್ಷರು, ಉಡುಪಿ ಬ್ಲಾಕ್ ಕಾಂಗ್ರೆಸ್. ಇವರು ತಿಳಿಸಿದ್ದಾರೆ.

🔥ದೇಶವೇ ಬೆಚ್ಚಿ ಬೀಳುವ ಪ್ರಶ್ನೆಗಳು:-

ರೋಡ್ ಶೋಗೆ ಸಾವಿರಾರು ವಾಹನ ಬಳಸುವಾಗ ಇಂಧನ ಉಳಿತಾಯ ನೆನಪಾಗಲಿಲ್ಲವೇ..?

ಸಾಮಾನ್ಯ ಜನರಿಗೆ ವಿದೇಶ ಪ್ರವಾಸ ಬೇಡ ಎನ್ನುವ ಪ್ರಧಾನಿಗಳು ವರ್ಷಕ್ಕೆ 10 ಬಾರಿ ವಿದೇಶಕ್ಕೆ ಹೋಗುವುದೇಕೆ..?

ಮನೆಯಿಂದಲೇ ಕೆಲಸ ಮಾಡಿ (Work from Home) ಎನ್ನುವುದು ಆರ್ಥಿಕ ಪ್ರಗತಿಯ ಲಕ್ಷಣವೇ ಅಥವಾ ಹಿನ್ನಡೆಯೇ..?

ಒಟ್ಟಾರೆ:-

ಪ್ರಧಾನಿ ಮೋದಿಯವರ ಮಾತುಗಳು ಅವರ ಆಡಳಿತದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತಿವೆ. ದೇಶವನ್ನು ಮುನ್ನಡೆಸುವ ತಾಕತ್ತು ಇಲ್ಲದವರು ಜನರಿಗೆ ಉಪದೇಶ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕೆಂಡಕಾರಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button