“ಹೆಣ್ಣು ಜಗದ ಕಣ್ಣು”…..

ಹೆಣ್ಣು ಮನೆಗೆ ಕನ್ನಡಿ ಇದ್ದಂಗೆ

ಹೆಣ್ಣು ಸಂಸಾರದ ಕಣ್ಣು ಇದ್ದಂಗೆ

ಹೆಣ್ಣು ಈ ಭೂಮಿಗೆ ದೇವರ ಅನರ್ಘ್ಯ

ಕೊಡುಗೆ

ಹೆಣ್ಣು ಮನಕುಲದ ಕಣ್ಣು ಹೆಣ್ಣು ಈ ಜಗದ

ಕಣ್ಣು

ಹೆಣ್ಣೆಂದರೆ ಹುಟ್ಟಿದ ಮನೆ ಸೇರಿದ ಮನೆಯನ್ನು

ಬೆಳಗುವಳು

ಎಲ್ಲರ ಮೆಚ್ಚುಗೆಗೆ ಇವಳು ಪಾತ್ರಳು

ಜೀವನದ ಪರೀಕ್ಷೆಗೆ ನಿತ್ಯವೂ ತಯಾರಿ ನಡೆಸಿ

ನಡೆದವಳು

ಹೆಣ್ಣು ಸಮಾಜದ ಕಣ್ಣು ಹೆಣ್ಣು ಈ ಜಗದ

ಕಣ್ಣು

ಯಾರದೋ ಮನೆಯ ಮಗಳಾಗಿ

ಮತ್ತಾರದೋ ಮನೆಯ ಜೊತೆಯಾಗಿ

ಒಡಲ ಕೂಸುಗಳ ಮಾತೆಯಾಗಿ

ಹೆಣ್ಣು ಮನಕುಲದ ಕಣ್ಣು ಹೆಣ್ಣು ಈ ಜಗದ

ಕಣ್ಣು

ಅಪ್ಪನ ಕಣ್ಣೀರು ಒರೆಸುವ

ಕರುಣಾಮಯಿಯಾಗಿ

ಸಂಸಾರದಲ್ಲಿ ನಮ್ಮ ಎಲ್ಲಾ ಕಷ್ಟ ನಷ್ಟಗಳಿಗೆ

ಜೊತೆಯಾಗಿ

ನಗುವ ಹೂಗಳ ಚೆಲ್ಲಿ ಮನೆ ಬೆಳಗಿದ

ಲಕ್ಷ್ಮಿಯಾಗಿ

ತುಂಬು ಸಂಸಾರದ ಕಣ್ಣು ಹೆಣ್ಣು ಈ ಜಗದ

ಕಣ್ಣು

ಜನ್ಮ ಕೊಟ್ಟ ತಾಯಿ ಒಂದು ಹೆಣ್ಣು

ಅಮೂಲ್ಯವಾದ ಸಂಪತ್ತು ಈ ಹೆಣ್ಣು

ಸೃಷ್ಟಿ ಪ್ರೀತಿ ತ್ಯಾಗ ಈ ಹೆಣ್ಣು

ಮನಕುಲದ ದೇವತೆ ಹೆಣ್ಣು ಹೆಣ್ಣು ಈ ಜಗದ

ಕಣ್ಣು

ಕು. ಜ್ಯೋತಿ ಆನಂದ ಚಂದುಕರ

ಬಾಗಲಕೋಟ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button