ಕಾಂಗ್ರೆಸ್ ಅಭ್ಯರ್ಥಿ ಜಿಎಚ್ ಶ್ರೀನಿವಾಸ್ ಗೆ ಕುರುಬ ಸಮಾಜದ ಸಂಪೂರ್ಣ ಬೆಂಬಲ.
ತರೀಕೆರೆ ಮೇ.1
ಸವಾಲ್ ನ ಸಂದರ್ಭದಲ್ಲಿ ನಾವಿದ್ದೇವೆ , ಸಣ್ಣತನಗಳನ್ನು ಬಿಟ್ಟು ಚುನಾವಣೆ ಮಾಡಬೇಕಾಗಿದೆ ಎಂದು ಸಾಹಿತಿ ಮನುಸುಳಿ ಮೋಹನ್ ಭಾನುವಾರ ಪಟ್ಟಣದ ವಾರ್ಡ್ ನಂ 9 ರಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾತಂತ್ರ ಪೂರ್ವದಲ್ಲಿ ಕಸುಬಿನ ಆಧಾರದಲ್ಲಿ ಜಾತಿಗಳು ತಮ್ಮದೇ ವೃತ್ತಿಯನ್ನು ಮಾಡಿಕೊಂಡು ಇರಬೇಕಿತ್ತು,ಆದರೆ ಡಾ. ಬಿಆರ್ ಅಂಬೇಡ್ಕರ್ ನೀಡಿದ ಸಂವಿಧಾನ ಜಾರಿಗೆ ಬಂದ ನಂತರ ಎಲ್ಲಾ ಜಾತಿಯವರು ಮುಖ್ಯಮಂತ್ರಿಗಳಾಗಬಹುದು, ಪ್ರಧಾನಮಂತ್ರಿಗಳಾಗಬಹುದು,ಟೀ, ಮಾರುವ ವ್ಯಕ್ತಿಯು ಸಹ ಪ್ರಧಾನ ಮಂತ್ರಿ ಆಗಬಹುದು ಅಂತಹದೇ ಪ್ರಜಾಪ್ರಭುತ್ವ ವ್ಯವಸ್ಥೆ. ತುಂಡು ಬಟ್ಟೆಯಲ್ಲಿ ದೇಶವನ್ನು ಕಟ್ಟಿ ಕಾಂಗ್ರೆಸ್ ಪಕ್ಷ ಕಟ್ಟಿದವರು ಗಾಂಧೀಜಿ. ಆದರೆ ಗಾಂಧೀಜಿಯವರನ್ನು ಕೊಂದವರು ಕೋಮುವಾದಿಗಳು, ದೇಶಪ್ರೇಮಿಗಳಲ್ಲ, ಸಿದ್ದರಾಮಯ್ಯ ಬಡವರಿಗೆ 10 ಕೆ.ಜಿ ಅಕ್ಕಿ ಕೊಟ್ಟು ದೇಶಪ್ರೇಮ ಮೆರೆದಿದ್ದಾರೆ ಆದ್ದರಿಂದ ತಮ್ಮ ತಮ್ಮ ಬೂತ್ ಗಳಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿಸಿ ಗೆಲ್ಲಿಸಬೇಕು ಎಂದು ಹೇಳಿದರು. ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಟಿಜಿ ಮಂಜುನಾಥ್ ಮಾತನಾಡಿ ಇಂದು ಕುರುಬ ಸಮಾಜ ಒಗ್ಗೂಡಿಕೆಯ ದಿನವಾಗಿದೆ,ನಾನು ಬಿಜೆಪಿಯಲ್ಲಿ 14 ವರ್ಷ ಕೆಲಸ ಮಾಡಿದ್ದೇನೆ,ಆದರೆ ಕಾಂಗ್ರೆಸ್ ನಲ್ಲಿ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸುತ್ತಿದೆ.

ಇದು ಅಮೃತ ಗಳಿಗೆ ಈ ಸುವರ್ಣ ಅವಕಾಶವನ್ನು ಕಳೆದುಕೊಳ್ಳದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿಎಚ್ ಶ್ರೀನಿವಾಸನನ್ನು ಗೆಲ್ಲಿಸೋಣ ಎಂದು ಹೇಳಿದರು. ಮಾಜಿ ಪುರಸಭಾ ಅಧ್ಯಕ್ಷರಾದ ಧರ್ಮರಾಜ್ ಮಾತನಾಡಿ ಕುರುಬ ಸಮಾಜದ ನಾವೆಲ್ಲರೂ ಒಟ್ಟಾಗಿದ್ದೇವೆ ಎಂಬ ಸಂದೇಶ ಸಾರಬೇಕು ಅದಕ್ಕಾಗಿ ಮೆರವಣಿಗೆಯಲ್ಲಿ ಸಾಗಿ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸೋಣ ಎಂದು ಹೇಳಿದರು. ಜಾತ್ಯತೀತ ಜನತಾ ದಳ ಪಕ್ಷದ (JDS) ತಾಲೂಕು ಅಧ್ಯಕ್ಷರಾದ ಎಂ ನರೇಂದ್ರ ಮಾತನಾಡಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯು ಇಲ್ಲದಿರುವುದರಿಂದ ನಾನು ಕುರುಬ ಸಮುದಾಯಕ್ಕೆ ಸೇರಿದವನಾಗಿದ್ದು ನಮ್ಮ ಪಕ್ಷವು ಕಾಂಗ್ರೆಸ್ ಪಕ್ಷದ ಜಿ ಎಚ್ ಶ್ರೀನಿವಾಸ್ ರವರಿಗೆ ಬೆಂಬಲಿಸುತ್ತೇವೆ. ಸುಳ್ಳು ಹೇಳುತ್ತಾ ಹಿಂದುಳಿದ ಅಲ್ಪಸಂಖ್ಯಾತ ದಲಿತರ ತಲೆಕೆಡಿಸುತ್ತಿರುವ ಕುಲಗೇಡಿಗಳ ಮಾತಿಗೆ ಮರುಳಾಗಬೇಡಿರಿ, ಜಿಎಚ್ ಶ್ರೀನಿವಾಸ್ ಮೂಲಕ ಸಿದ್ದರಾಮಯ್ಯ ರವರನ್ನು ಬೆಂಬಲಿಸೋಣ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕೆಪಿಸಿಸಿ ಸದಸ್ಯರಾದ ಟಿವಿ ಶಿವಶಂಕರಪ್ಪ ಮಾತನಾಡಿ ಈ ಚುನಾವಣೆ ರಾಜ್ಯ ಭವಿಷ್ಯವನ್ನು ನಿರ್ಧರಿಸುತ್ತದೆ ಇದು ಸಾಮಾನ್ಯ ಚುನಾವಣೆ ಅಲ್ಲ, ಸಾಮಾನ್ಯ ಜನರ ಹಿತದೃಷ್ಟಿಯಿಂದ ಈ ಚುನಾವಣೆ ಪ್ರಮುಖವಾಗಿದೆ,ನಮ್ಮಗಳ ಅಭಿವೃದ್ಧಿ ಕಲ್ಯಾಣಕ್ಕಾಗಿ ಜಿ ಎಚ್ ಶ್ರೀನಿವಾಸ ರವರಿಗೆ ಮತ ಹಾಕಿಸಬೇಕು. ಸಿದ್ದರಾಮಯ್ಯನವರು 13 ಬಾರಿ ಬಜೆಟ್ ಮಂಡಿಸಿದ್ದರು , ಆ ಎಲ್ಲಾ ಬಜೆಟ್ಟುಗಳು ಬಡವರ ಪರವಾಗಿ ಇದ್ದಿತು ಎಂದು ಹೇಳಿದರು. ಪುರಸಭಾ ಮಾಜಿ ಅಧ್ಯಕ್ಷರಾದ ಗೊಲ್ಲರಹಳ್ಳಿ ಟಿ ಆರ್ ಬಸವರಾಜ್ ಮಾತನಾಡಿ ಬಿಜೆಪಿ ದೇಶವನ್ನು ಭ್ರಷ್ಟಾಚಾರದಲ್ಲಿ ಮುಳುಗಿಸಿದೆ. ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಿಲ್ಲ ಶ್ರೀಮಂತರ ಪರವಾಗಿದೆ. ಕಾಂಗ್ರೆಸ್ ಪಕ್ಷವು ದೇಶದ ಅಭಿವೃದ್ಧಿಗೆ ಸಂವಿಧಾನ ಉಳಿವಿಗೆ ಜಿ ಎಚ್ ಶ್ರೀನಿವಾಸ್ ಗೆ ಮತ ಕೊಟ್ಟು ಗೆಲ್ಲಿಸಬೇಕು ಎಂದು ಹೇಳಿದರು. ಕುರುಬ ಸಮಾಜದ ವಿವಿಧ ಬಳಗದ ಮುಖಂಡರಾದ ಮುರುಗೇಶಪ್ಪ,ಜೋಗಿ ಪ್ರಕಾಶ್, ಅಜ್ಜಂಪುರದ ನಟರಾಜ್, ಗಡಿಹಳ್ಳಿ ಮಂಜಣ್ಣ,ಮುಗಳಿ ಪ್ರಕಾಶ, ಪುರಸಭಾ ಮಾಜಿ ಅಧ್ಯಕ್ಷರಾದ ಟಿ ಎಚ್ ಲಕ್ಷ್ಮೀನಾರಾಯಣ, ಪ್ರಕಾಶ್ ವರ್ಮಾ, ಹೇಮಲತಾ ರೇವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಟಿ ಎಂ ವೆಂಕಟೇಶ್, ಪುರಸಭಾ ಸದಸ್ಯರಾದ ಟಿ ಜಿ ಲೋಕೇಶ್, ಗಿರಿಜಾ ವರ್ಮಾ ಪ್ರಕಾಶ್, ಗೀತಾ ಗಿರಿರಾಜ್, ಬೀಡ ಮೂರ್ತಿ, ಟಿಜಿ ರೇವಣ್ಣ, ರಂಗೇನಹಳ್ಳಿ ಗೋವಿಂದಪ್ಪ, ಲಕ್ಕವಳ್ಳಿ ಮಂಜುನಾಥ, ಅತ್ತಿಗನಾಳು ಗಿರೀಶ್, ಹುಡೇವಾ ರಾಜಕುಮಾರ್, ಸತೀಶ, ಮಾಜಿ ಪುರಸಭಾ ಸದಸ್ಯರಾದ ಜಿಯಾವುಲ್ಲ ಮುಂತಾದವರು ಮಾತನಾಡಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ