ಕಣ್ಮರೆ ಯಾಗುತ್ತಿರುವ ಕಲೆಗೆ ಮರುಜೀವ, ವಿದ್ಯಾರ್ಥಿಗಳ ಕೈಯಲ್ಲಿ ಜಾನಪದ ತೇರು – ಡಾ, ಗೊಲ್ಲಹಳ್ಳಿ ಶಿವಪ್ರಸಾದ್.
ಮಸ್ಕಿ ಜು.26

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಮರಕಮದಿನ್ನಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂದು ಹಮ್ಮಿಕೊಂಡಿದ್ದ “ಜಾನಪದ ತೇರು… ವಿದ್ಯಾರ್ಥಿಗಳಿಗಾಗಿ” ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಅವರು,
“ಜಾನಪದ ಕೇವಲ ಕಲೆಯಲ್ಲ, ಅದು ನಮ್ಮ ಬದುಕು, ನಮ್ಮ ಸಂಸ್ಕೃತಿಯ ಬೇರು. ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ನಮ್ಮ ನೆಲದ ಕಲೆಗಳಿಂದ ದೂರವಾಗುತ್ತಿದ್ದಾರೆ. ಜಾನಪದ ತೇರು ಕಾರ್ಯಕ್ರಮದ ಮೂಲಕ ನಾವು ಜಾನಪದವನ್ನು ಮತ್ತೆ ಶಾಲೆಯ ಅಂಗಳಕ್ಕೆ ಕರೆತರುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಜಾನಪದದ ಬಗ್ಗೆ ಅಭಿಮಾನ ಮೂಡಿದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ” ಎಂದು ಹೇಳಿದರು.
“ರಾಯಚೂರು ಜಿಲ್ಲೆ ಜಾನಪದ ಕಲೆಗಳ ತವರೂರು. ಇಲ್ಲಿನ ಡೊಳ್ಳು, ಗೊರವರ ಕುಣಿತ, ಜೋಗತಿ ನೃತ್ಯಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಬೇಕು” ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ವೀರಗಾಸೆ, ಗೊರವಯ್ಯನ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಪ್ರದರ್ಶನ ನೀಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಅಕಾಡೆಮಿಯ ಸದಸ್ಯ ವಿಜಯಕುಮಾರ್ ಸೋನಾರೆ, ಸಂಚಾಲಕರಾದ ರಂಗಪ್ಪ ಮಾಸ್ಟರ್ ತಡಕಲ್, ಎನ್. ಶ್ರೀ ಶಿವಕುಮಾರ್ ಶಾಸ್ತ್ರೀ ತಡಕಲ್, ಈರಯ್ಯ ಸ್ವಾಮಿ, ಶಾಲೆಯಹಿರಿಯ ಶಿಕ್ಷಕರಾದ ದೇವರಾಜ್ ಸರ್, ವೆಂಕಟೇಶ್ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷ ದೇವರಾಜ್ ನಾಯಕ,, ಶರಣಪ್ಪ ನಾಯಕ್,ಜಾನಪದ ಕಲಾವಿದರು, ಸದಸ್ಯರು ಮತ್ತು ಮಹಿಳಾ ಕಲಾವಿದರು ಹಾಗೂ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ
