💥ಉಡುಪಿ ನಕಲಿ ಲೋಕಾಯುಕ್ತ ಟ್ರ್ಯಾಪ್ ವೀರರಿಗೆ ಹಿನ್ನಡೆ..!💥💥 ಗಂಗೊಳ್ಳಿ ಟ್ರ್ಯಾಪ್ ಪ್ರಕರಣದ ಸಾಕ್ಷಿ ಬೆದರಿಕೆ ಆರೋಪ ಪ್ರಕರಣಕ್ಕೆ ಹೈಕೋರ್ಟ್ ನಿಂದ ಮಧ್ಯಂತರ ತಡೆಯಾಜ್ಞೆ..! 💥
ಕುಂದಾಪುರ/ಉಡುಪಿ ಏ.24

ಭ್ರಷ್ಟಾಚಾರದ ನಿರ್ಮೂಲನೆ ಹೆಸರಿನಲ್ಲಿ ಅಧಿಕಾರ ಚಲಾಯಿಸಿ, ಅಮಾಯಕ ಅಧಿಕಾರಿಗಳನ್ನು ಬಲಿ ಪಶು ಮಾಡಲು ಉಡುಪಿ ಲೋಕಾಯುಕ್ತದ ಕೆಲವು ಅಧಿಕಾರಿ ಸಿಬ್ಬಂದಿಗಳೇ ನಡೆಸಿದ ‘ನಕಲಿ ಟ್ರ್ಯಾಪ್’ ಕಾರ್ಯಾಚರಣೆ ಈಗ ರಾಜ್ಯಾದ್ಯಂತ ಕಿಚ್ಚು ಹಚ್ಚಿದೆ. ಗಂಗೊಳ್ಳಿ ಪಿ.ಡಿ.ಓ ಉಮಾಶಂಕರ್ ಪ್ರಕರಣದಲ್ಲಿ ನಡೆದ ಅಕ್ರಮಗಳು ಈಗ ಬಹಿರಂಗವಾಗುತ್ತಿದ್ದು, ವ್ಯವಸ್ಥಿತ ಪಿತೂರಿಯ ವಿರುದ್ಧ ಕಾನೂನು ಸಮರ ಆರಂಭವಾಗಿದೆ.
🛑 ಹೈಕೋರ್ಟ್‌ನಿಂದ ‘ತಡೆ’ಯಾಜ್ಞೆ..!
ಗಂಗೊಳ್ಳಿ ಗ್ರಾಮ ಪಂಚಾಯತ್ ಪಿ.ಡಿ.ಓ ಹೆಚ್. ಉಮಾಶಂಕರ್ ಮತ್ತು ರಾಮನಗರ ನ್ಯೂಸ್ ಕನ್ನಡ ದಿನ ಪತ್ರಿಕೆ ಉಪ ಸಂಪಾದಕರ ವಿರುದ್ಧ ಹೆಣೆಯಲಾಗಿದ್ದ ‘ಡಾ, ರವಿಕುಮಾರ್ ಹುಕ್ಕೇರಿ ಮತ್ತು ವ್ಯವಸ್ಥಾಪಕ ರಾಮಚಂದ್ರ ಮಯ್ಯ ಸಾಕ್ಷಿ ಬೆದರಿಕೆ ಆರೋಪ ಪ್ರಕರಣಕ್ಕೆ ಹೈಕೋರ್ಟ್ ಇದೀಗ ಮಧ್ಯಂತರ ತಡೆ’ ಯಾಜ್ಞೆ ನೀಡಿದೆ.
⚖️ಪಕ್ಷಪಾತ ತನಿಖೆ (Bias):-
ತನಿಖಾಧಿಕಾರಿ ರಾಜೇಂದ್ರ ನಾಯ್ಕ್ ವಿರುದ್ಧ ಲೋಕಾಯುಕ್ತ ಎಸ್.ಪಿ ಗೆ ಪಿ.ಡಿ.ಓ ಉಮಾಶಂಕರ್ ದೂರು:-
ಸದ್ಯದ ತನಿಖಾಧಿಕಾರಿ ರಾಜೇಂದ್ರ ನಾಯ್ಕ್ ನು ಸುಳ್ಳು ಸಾಕ್ಷಿ ಮತ್ತು ನ್ಯಾಯಾಲಯಕ್ಕೆ ಮತ್ತು ಮೇಲಾಧಿಕಾರಿಗಳಿಗೆ ಸುಳ್ಳು ವರದಿ ನೀಡುತ್ತಿದ್ದು ಅತ್ಯಂತ ಪಕ್ಷಪಾತ ಧೋರಣೆ ಅನುಸರಿಸುತ್ತಿರುವ ಬಗ್ಗೆ ದಾಖಲೆ ಸಮೇತ ದೂರು ನೀಡಲಾಗಿದ್ದು ಇವರನ್ನು ತನಿಖಾಧಿಕಾರಿ ಹುದ್ದೆಯಿಂದ ಬದಲಾಯಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅಗ್ರಹಿಸಲಾಗಿದೆ.
🔥ಸದನದಲ್ಲಿ ಪ್ರತಿ ಧ್ವನಿಸ ಬೇಕಿದೆ ‘ನಕಲಿ ಟ್ರ್ಯಾಪ್’ ಹಾವಳಿ..!
ನಕಲಿ ಟ್ರ್ಯಾಪ್ ಹಾವಳಿಯ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆಗೆ ಒಳ ಪಡಬೇಕಾದ ವಿಚಾರವಾಗಿದೆ ಇದರ ಬಗ್ಗೆ ಜನ ಪ್ರತಿನಿಧಿಗಳು ಕೂಡಲೇ ಸದನದಲ್ಲಿ ಇದೇ ವಿಚಾರವಾಗಿ ಧ್ವನಿ ಎತ್ತಬೇಕು ಎಂದು ಪತ್ರಿಕಾ ಮಿತ್ರರು ಹಾಗೂ ಪತ್ರಿಕ ಸಂಘಟನೆಗಳು ಆಗ್ರಹಿಸಿದೆ.
🏛️ “CBI ತನಿಖೆಗೆ ಕದ ತಟ್ಟುತ್ತೇವೆ”..!
ಒಂದು ವೇಳೆ ಗಂಗೊಳ್ಳಿ ಲೋಕಾಯುಕ್ತ ನಕಲಿ ಟ್ರ್ಯಾಪ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯದಿದ್ದರೆ, ಸರಕಾರದ ಗಮನಕ್ಕೆ ತಂದು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಸಿಬಿಐ (CBI) ತನಿಖೆಗೆ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮಾಡಲಾಗುದು ಎಂದು ಪಿ.ಡಿ.ಓ ರವರು ಈ ಮೂಲಕ ತಿಳಿಸಿದ್ದಾರೆ.
ಸದರಿ ನಕಲಿ ಟ್ರ್ಯಾಪ್ ಪ್ರಕರಣದಲ್ಲಿ ಜಿಲ್ಲಾ ಪಂಚಾಯತ್ ನ ಒಬ್ಬ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಗೆ ನಿಯೋಜನೆ ಗೊಂಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಶಾಮಿಲಾಗಿರುವುದು ಕಂಡು ಬಂದಿದ್ದು ಸಾರ್ವಜನಿಕ ವಲಯಗಳಲ್ಲೂ ಅಲ್ಲದೆ ಇಲಾಖಾ ಮಟ್ಟದಲ್ಲೂ ಕೂಡ ಚರ್ಚೆಗೆ ಗ್ರಾಸವಾಗಿದೆ ಅನ್ನುವ ವಿಚಾರಗಳು ಕೂಡ ಹೊರ ಬಿದ್ದಿದೆ.
ಉಡುಪಿ ಲೋಕಾಯುಕ್ತದ ನಕಲಿ ಟ್ರ್ಯಾಪ್ ವಿಚಾರವನ್ನು ಬೆನ್ನು ಹತ್ತಿ ಎಳೆ ಎಳೆಯಾಗಿ ದಾಖಲಾತಿ ಸಮೇತ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದನ್ನು ಸಹಿಸಿ ಕೊಳ್ಳಲು ಆಗದೆ ಪತ್ರಿಕೆಯವರ ಮೇಲೆ ನಕಲಿ ಟ್ರ್ಯಾಪ್ ವೀರರು ಸುಳ್ಳು ಕೇಸು ದಾಖಲಿಸಿ ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದು ಕೊಳ್ಳಲು ಸಾಧ್ಯವಿಲ್ಲ ಎಂದು ಪತ್ರಿಕೆ ಸ್ಪಷ್ಟ ಪಡಿಸಿದೆ.
ಮುಂದಿನ ದಿನಗಳಲ್ಲಿ ಪತ್ರಿಕೆಯು ಸತ್ಯ ಶೋಧನೆಯ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲಾ ಪತ್ರಿಕೆಯು ಯಾವುದೇ ಕಾರಣಕ್ಕೂ ಸತ್ಯದ ಪರ ಹೋರಾಟ ನಿಲ್ಲಿಸುವುದಿಲ್ಲಾ.
ವರದಿ:ಆರತಿ.ಗಿಳಿಯಾರು.ರಾಮನಗರ
ನ್ಯೂಸ್ ಕನ್ನಡ ದಿನ ಪತ್ರಿಕೆ ಉಪ
ಸಂಪಾದಕರು ಉಡುಪಿ.

