ಬಡ ದಲಿತ ವಿದ್ಯಾರ್ಥಿ ನೀಲಮ್ಮಳ ಸಾಧನೆಗೆ – ಗ್ರಾಮಸ್ಥರಿಂದ ಶ್ಲಾಘನೀಯ.
ಗುಂಡಕರ್ಜಗಿ ಏ.24

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದ ಬಡ ದಲಿತ ವಿದ್ಯಾರ್ಥಿನಿ ನೀಲಮ್ಮ ಯಲ್ಲಪ್ಪ ಚಲವಾದಿ ಅವರು 1 ನೇ. ತರಗತಿಯಿಂದ 8 ನೇ. ತರಗತಿ ವರೆಗೆ ಕನ್ನಡ ಪ್ರಾಥಮಿಕ ಶಾಲೆ ಗುಂಡಕರ್ಜಗಿಯಲ್ಲಿ ಓದಿದ್ದಾಳೆ ನಂತರ 8 ರಿಂದ 10 ನೇ. ತರಗತಿಯ ವರೆಗೆ ವಿ.ಬಿ.ಸಿ ಶಾಲೆ ಮುದ್ದೇಬಿಹಾಳದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾಳೆ, 600 ಕ್ಕೆ 593 ಅಂಕಗಳನ್ನು ಪಡೆದಿದ್ದಾಳೆ (94,88%) ಲಭಿಸಿದ್ದು. ನಮ್ಮ ಕುಟುಂಬಕ್ಕೆ ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಚಾರವಾಗಿದೆ.
ಈ ಬಡ ವಿದ್ಯಾರ್ಥಿನಿಯ ಸಾಧನೆಯಿಂದ ತಾನು ಕಲಿತ ಶಾಲೆಗೆ ಮತ್ತು ಗುಂಡಕರ್ಜಗಿ ಗ್ರಾಮಕ್ಕೆ & ಗ್ರಾಮದ ದಲಿತ ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದ್ದು ಗುಂಡಕರ್ಜಗಿ ಗ್ರಾಮಸ್ಥರು & ಬಂದು ಮಿತ್ರರು ನೀಲಮ್ಮ ಯಲ್ಲಪ್ಪ ಚಲವಾದಿ ಅವರಿಗೆ ಸಿಹಿ ತಿನಿಸಿ ಸನ್ಮಾನಿಸಿ ಗೌರವಿಸಲಾಯಿತು ಎಂದು ಅವಳ ಚಿಕ್ಕಪ್ಪನಾದ ಹನುಮಂತ ಚಲವಾದಿ ಅವರು ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮೂಲಕ ಶ್ಲಾಘಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಬಸವರಾಜ ಸಂಕನಾಳ ಮುದ್ದೇಬಿಹಾಳ
