ಸಮ ಸಮಾಜದ ನಿರ್ಮಾಣದಲ್ಲಿ ಅಂಬೇಡ್ಕರ್ ಚಿಂತನೆಗಳು ಸಹಕಾರಿ – ಡಾ, ಪಿ.ಆರಡಿ ಮಲ್ಲಯ್ಯ ಕಟ್ಟೇರ.
ಚಿತ್ರದುರ್ಗ ಏ.29

ಸಮ ಸಮಾಜದ ನಿರ್ಮಾಣದಲ್ಲಿ ಡಾ, ಬಿ.ಆರ್ ಅಂಬೇಡ್ಕರ್ ಚಿಂತನೆಗಳು ಸಹಕಾರಿಯಾಗಿದ್ದು ಅದರ ಸಮರ್ಥ ಅನುಷ್ಠಾನದಿಂದ ಮಾತ್ರ ಸಮಾನತೆಯ ವಾತಾವರಣವನ್ನು ಕಾಣಬಹುದು ಎಂದು ಕೋಣಂದೂರಿನ ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ, ಪಿ.ಆರಡಿ ಮಲ್ಲಯ್ಯ ಕಟ್ಟೇರ ಅಭಿಪ್ರಾಯ ಪಟ್ಟರು.
ನಗರದ ರೋಟರಿ ಬಾಲ ಭವನದಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆ ಮತ್ತು ಇನ್ನರ್ ವಿಲ್ ಕ್ಲಬ್ ನ ಸಂಯುಕ್ತಾಶ್ರಯದಲ್ಲಿ “ಡಾ, ಬಿ.ಆರ್ ಅಂಬೇಡ್ಕರ್” ಜಯಂತಿ ಪ್ರಯುಕ್ತ ಡಾ, ಚಾಂದಿನಿ ಖಲೀದ್ ಅವರ “ಹುಡುಕಾಟ ಶುರುವಾಗಿದೆ” ಕವನ ಸಂಕಲನ ಬಿಡುಗಡೆ ಮತ್ತು “ಚುಟುಕು ಕವಿಗೋಷ್ಠಿ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಸಮಾನತೆಯ ಹಾದಿಯಲ್ಲಿ ಅಂಬೇಡ್ಕರ್ ಚಿಂತನೆಗಳು” ಎಂಬ ವಿಷಯವಾಗಿ ಸುದೀರ್ಘವಾಗಿ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.

ಕನ್ನಡ ಹಾಗೂ ಹಿಂದಿ ಭಾಷಾ ವಿಷಯ ಪರಿವೀಕ್ಷಕ ಸಿ. ರಂಗನಾಯ್ಕ ಅವರು ಡಾ, ಚಾಂದಿನಿ ಖಲೀದ್ ಅವರ “ಹುಡುಕಾಟ ಶುರುವಾಗಿದೆ” ಕವನ ಸಂಕಲನದ ಕುರಿತು ವಿಮರ್ಶೆ ಮಾಡುತ್ತಾ ಈ ಕವನ ಸಂಕಲನದಲ್ಲಿ ಒಟ್ಟು ಐವತ್ತು ಅತ್ಯುತ್ತಮ ಕವನಗಳಿದ್ದು ಪ್ರತಿಯೊಂದು ಕವನವು ನಮ್ಮಲ್ಲಿ ಅನ್ವೇಷಣೆಯ ಪ್ರವೃತ್ತಿಯನ್ನು ಹೆಚ್ಚಿಸುತ್ತವೆ.
ಜಬೀವುಲ್ಲಾ ಅಸದ್ ಅವರ ರೇಖಾ ಚಿತ್ರಗಳು ಕವನ ಸಂಕಲನಕ್ಕೆ ಉತ್ತಮ ಮೆರುಗು ನೀಡುತ್ತವೆ.ಇದು ಚಾಂದಿನಿ ಅವರ ಮೂರನೇ ಪುಸ್ತಕವಾಗಿದ್ದು ಇಂತಹ ಕವನ ಸಂಕಲನವನ್ನು ಪ್ರತಿಯೊಬ್ಬರೂ ಖರೀದಿಸಿ ಓದಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಚಿತ್ರದುರ್ಗದ ಖ್ಯಾತ ವಕೀಲರು ಮತ್ತು ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರಾದ ಬಿ.ಕೆ ರಹಮತವುಲ್ಲಾ ನೆರವೇರಿಸಿ ಮಾತನಾಡಿದರು..
ಪ್ರಾಸ್ತಾವಿಕವಾಗಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ದಯಾ ಪುತ್ತೂರ್ಕರ್ ಮಾತನಾಡಿದರೆ ಅಧ್ಯಕ್ಷತೆಯನ್ನು ಇನ್ನರ್ ವಿಲ್ ಕ್ಲಬ್ ನ ಅಧ್ಯಕ್ಷರಾದ ವೀಣಾ ಜಯರಾಮ್ ವಹಿಸಿ ಮಾತನಾಡಿದರು.
ಮಧ್ನಾಹ್ನ ನಡೆದ ಕಾರ್ಯಕ್ರಮದಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಹ ನಡೆಯಿತು.
ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ನೂತನ ಅಧ್ಯಕ್ಷೆ ಶಾರದಾ ಬಿ ಜೈರಾಂ, ಮುಖ್ಯ ಅತಿಥಿಗಳಾಗಿ ಕೊಪ್ಪಳದ ಕುಕನೂರಿನ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ರುದ್ರಪ್ಪ ಭಂಡಾರಿ, ನೂತನ ಉಪಾಧ್ಯಕ್ಷರಾದ ಮೀರಾ ನಾಡಿಗ್ ಭಾಗವಹಿಸಿ ಮಾತನಾಡಿದರು.
ಚುಟುಕು ಕವಿಗೋಷ್ಠಿಯಲ್ಲಿ ಐವತ್ತಕ್ಕೂ ಹೆಚ್ಚು ಉದಯೋನ್ಮುಖ ಕವಿಗಳು ತಮ್ಮ ಚುಟುಕುಗಳನ್ನು ವಾಚನ ಮಾಡಿದರು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಗಂಗಾಧರಪ್ಪ ಮಾಡಿದರೆ ನಿರೂಪಣೆಯನ್ನು ವಿನಾಯಕ, ಮುದ್ದುರಾಜ್ ಮಾಡಿದರು. ಸ್ವಾಗತ ಪರಿಚಯವನ್ನು ಕೆ.ಎನ್ ದೇವರಾಜ್, ಯತೀಶ್ ಎಂ ಸಿದ್ದಾಪುರ ನಡೆದರೆ ವಂದನಾರ್ಪಣೆಯನ್ನು ಬಿ.ಮುರಳೀಧರ, ನರಸಮ್ಮ ನಡೆಸಿ ಕೊಟ್ಟರು.
ಈ ಸಂದರ್ಭದಲ್ಲಿ ಜಯದೇವ ಮೂರ್ತಿ, ಡಾ, ಬಸವರಾಜ್ ಹರ್ತಿ, ಕೆ.ಎಸ್ ತಿಪ್ಪಮ್ಮ, ಶಿವಾನಂದ ಬಂಡೇಹಳ್ಳಿ, ಶಿವರುದ್ರಪ್ಪ ಪಂಡ್ರಳ್ಳಿ, ಪ್ರವೀಣ್ ಬೆಳಗೆರೆ, ವಿಜಯಾಗುರು, ಯತೀಶ್ ಎಂ ಸಿದ್ದಾಪುರ, ರಾಗಿ ಗಿರೀಶ್, ಹೆಚ್ ಸತೀಶ್ ಕುಮಾರ್, ರಘು ಜಿ.ಪಿ, ಕ್ಲಾಸಿಕ್ ಚಂದ್ರಶೇಖರ್, ತಿಪ್ಪೀರಮ್ಮ, ಇಂಗಳದಾಳ್ ತಿಮ್ಮಯ್ಯ, ಶಿವಮೂರ್ತಿ.ಟಿ, ಶೃತಿ ದೀಕ್ಷಿತ್ ಸೇರಿದಂತೆ ಕವಿ ಮನಸ್ಸುಗಳು ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

