ಶ್ರೀಶಾರದಾಶ್ರಮದಿಂದ ಚಿಂದಿ ಆಯುವ ಮಹಿಳೆಯರಿಗೆ – ದಿನಸಿ ಕಿಟ್ ವಿತರಣೆ.

ಚಳ್ಳಕೆರೆ ಮೇ.10

ಶ್ರೀಶಾರದಾಶ್ರಮದಿಂದ ಅಭಿಷೇಕ್ ನಗರ ಮತ್ತು ರಹೀಂನಗರದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಹಾಗೂ ಚಿಂದಿ ಆಯುವ ಇಪ್ಪತ್ತೆರಡು ಕುಟುಂಬಗಳಿಗೆ ರಾಗಿ, ಗೋಧಿ,ಬೇಳೆ, ಬೆಲ್ಲ, ಎಣ್ಣೆ, ಸೋಪುಗಳನ್ನು ಒಳಗೊಂಡ ಕಿಟ್ ಗಳನ್ನು ಜೀವಂತ ದುರ್ಗಾ ಪೂಜೆ ಮತ್ತು ಆರತಿ ಮಾಡುವುದರ ಮೂಲಕ ವಿತರಿಸಿ ಜೀವ ಶಿವ ಸೇವಾ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ದಿನಸಿ ಕಿಟ್ ವಿತರಣಾ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಪ್ರಯುಕ್ತ ಯತೀಶ್ ಎಂ ಸಿದ್ದಾಪುರ ಅವರಿಂದ ಭಜನೆ, ಧ್ಯಾನಾಭ್ಯಾಸ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಶ್ರೀಮತಿ ಎಂ ಗೀತಾ ನಾಗರಾಜ್, ವನಜಾಕ್ಷಿ,ಪಿ. ಎಸ್ ಮಾಣಿಕ್ಯ ಸತ್ಯನಾರಾಯಣ, ಅಂಬುಜಾ, ಪಂಕಜಾ, ಗಂಗಾಧರಶೆಟ್ಟಿ, ಪಾರ್ವತಮ್ಮ, ಶಾಂತಾ, ಲಲಿತಾ, ಯತೀಶ್ ಎಂ ಸಿದ್ದಾಪುರ, ನಾಗರತ್ನಮ್ಮ, ಮಂಜುಳಾ, ಡಾ, ಭೂಮಿಕಾ, ರಶ್ಮಿ , ಯಶಸ್ವಿ, ಹೃತಿಕ್, ಸಂಗೀತ, ಚೇತನ್, ಸಂತೋಷ್, ಸಂಜನಾ, ಚೆನ್ನಕೇಶವ, ಮಾನ್ಯ ಸೇರಿದಂತೆ ಸದ್ಭಕ್ತರು, ಯುವಕ ಯುವತಿಯರು-ಫಲಾನುಭವಿಗಳು ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button