ಮಕ್ಕಳು ಬೇರೆಯವರ ಬಗ್ಗೆ ಪೂರ್ವಾಗ್ರಹ ಪೀಡಿತ ಭಾವನೆಗಳನ್ನು ಇಟ್ಟು ಕೊಳ್ಳಬಾರದು – ಡಾ, ಭೂಮಿಕ.

ಚಳ್ಳಕೆರೆ ಮೇ.25

ಮಕ್ಕಳು ಬೇರೆಯವರ ಬಗ್ಗೆ ಪೂರ್ವಾಗ್ರಹ ಪೀಡಿತ ಮನೋ ಭಾವನೆಗಳನ್ನು ಬೆಳೆಸಿ ಕೊಳ್ಳದೇ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರ ಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕಿ ಡಾ, ಭೂಮಿಕ ಅಭಿಪ್ರಾಯ ಪಟ್ಟರು.

ಧ್ಯಾನಾಭ್ಯಾಸ

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ನೀತಿ ಕಥೆ ಹೇಳುತ್ತಾ ಮಾತನಾಡಿದರು.

ಮಕ್ಕಳಿಗಾಗಿ ವಿವಿಧ ಆಟಗಳು

ಶಿಬಿರದ ನಿಮಿತ್ತ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಮಕ್ಕಳಿಂದ ಧ್ಯಾನ, ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಚೈತನ್ಯದಾಯಕ ನುಡಿಗಳ ಪಠಣ, ಭಜನೆ ನಡೆದರೆ ಸಂತೋಷ್ ಅವರು ವಿವಿಧ ಆಟಗಳನ್ನು ಆಡಿಸಿದರು. ಕೊನೆಯಲ್ಲಿ ಅಮ್ಮಾ ಶಾರದಾಮಾತೆ ಹೇಳುವಿಕೆ, ಜೈಕಾರ, ಪ್ರಸಾದ ವಿನಿಯೋಗ ನಡೆಯಿತು.

ತರಗತಿಯಲ್ಲಿ ಮಾತಾಜೀ ತ್ಯಾಗಮಯೀ, ಹರ್ಷಿತಾ, ಚರಣ್ಯ, ಸಹನಾ, ವಿವಿಕ್ತ, ಯಶಸ್, ವೈಷ್ಣವಿ, ಚಿರಣ್ಯ, ಭಾವನಾ, ವರ್ಷ ಪಾಲ್ಗೊಂಡಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button