ನ್ಯಾನೋ ಗೊಬ್ಬರ ಭವಿಷ್ಯದ ಗೊಬ್ಬರ – ಡಾ, ಪ್ರೇಮ್ ಚಂದ ಅಭಿಮತ.
ಗುಂದಗಿ ಜೂ.11

ಆಲಮೇಲ ತಾಲೂಕಿನ ಗುಂದಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಖೇತ್ ಬಚಾವೋ ಕಾರ್ಯಕ್ರಮದಲ್ಲಿ ನ್ಯಾನೋ ರಸ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಲಾಯಿತು.
ನ್ಯಾನೋ ರಸಗೊಬ್ಬರಗಳ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತಿರುವ ಅಧುನಿಕ ತಂತ್ರಜ್ಞಾನವಾಗಿದೆ ಸಂಪ್ರದಾಯಿಕ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುವುದು ಉತ್ವಾದನಾ ವಚ್ಚ ಹೆಚ್ಚಾಗುವುದು ಹಾಗೂ ಪರಿಸರ ಮಾಲಿನ್ಯ ಉಂಟಾಗುವುದು ಪ್ರಮುಖ ಸಮಸ್ಯೆಗಳಾಗುವೆ.
ಇಂತಹ ಸಾವಾಲುಗಳಿಗೆ ಪರಿಹಾರವಾಗಿ ನ್ಯಾನೋ ರಸ ಗೊಬ್ಬರಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತದೆ. ನ್ಯಾನೋ ರಸ ಗೊಬ್ಬರಗಳಲ್ಲಿ ಪೋಷಕಾಂಶಗಳನ್ನು ಅತಿ ಸೂಕ್ಷ್ಮ ಕಣಗಳ ರೂಪದಲ್ಲಿ ತಯಾರಿಸಲಾಗುತ್ತದೆ.
ಈ ಕಣಗಳು ಸಸ್ಯದ ಎಲೆಗಳು ಮತ್ತು ಬೇರುಗಳು ಮೂಲಕ ಸುಲಭವಾಗಿ ಹೀರಿ ಕೊಳ್ಳಲ್ವಡುವುದರಿಂದ. ಈ ಪೋಷಕಾಂಶಗಳ ಬಳಕೆ ದಕ್ಷತೆ ಹೆಚ್ಚುತ್ತದೆ. ಇದರಿಂದ ಕಡಿಮೆ ಪ್ರಮಾಣದ ಗೊಬ್ಬರ ಬೆಳಸಿ ಹೆಚ್ಚಿನ ಪರಿಣಾಮ ಪಡೆಯಲು ಸಾಧ್ಯವಾಗುತ್ತದೆ.
ಪ್ರಸ್ತುತ ಕೃಷಿಯಲ್ಲಿ ನ್ಯಾನೋ ಯೂರಿಯಾ. ನ್ಯಾನೋ ಡಿ.ಎ.ಪಿ ನ್ಯಾನೋ ಜಿಂಕ್ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳ ನ್ಯಾನೋ ರೂಪಗಳು ಬಳಕೆಯಲ್ಲಿವೆ. ನ್ಯಾನೋ ಯೂರಿಯಾ ಬಳಕೆಯಿಂದ ಸಾರಜನದ ಪೂರೖಕೆ ಸಮರ್ಪಕವಾಗಿ ನಡೆಯುವುದರ ಜೊತೆಗೆ ಸಾಮಾನ್ಯ ಯೂರಿಯಾ ಬಳಕೆಯನ್ನು ಕಡಿಮೆ ಮಾಡಬಹುದು ಅದೇ ರೀತಿ ನ್ಯಾನೋ ಡಿ.ಎ.ಪಿ ಬಳಕೆಯಿಂದ ಬೆಳೆಗಳ ಆರಂಭಿಕೆ ಬೆಳವಣಿಗೆ ಉತ್ತಮವಾಗುತ್ತದೆ.
ನ್ಯಾನೋ ರಸಗೊಬ್ಬರಗಳ ಪ್ರಮುಖ ಪ್ರಯೋಜನಗಳಲ್ಲಿ ಪೋಷಕಾಂಶಗಳ ದಕ್ಷ ಬಳಕೆ ಉತ್ವಾದನಾ ವೆಚ್ಚದ ಇಳಿಕೆ ಬಳೆಗಳ ಉತ್ತಮ ಬೆಳವಣಿಗೆ ಹೆಚ್ಚಿನ ಇಳುವರಿ ಹಾಗೂ ಪರಿಸರ ಸುರಕ್ಷಣೆ ಪ್ರಮುಖವಾಗಿದೆ. ಅಲ್ಲದೆ. ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಪೋಷಕಾಂಶಗಳ ನಷ್ಟ ಕಡಿಮೆ ಯಾಗುವದರಿಂದ ಪರಿಸರದ ಮೇಲಿನ ದುಷ್ಟರಿಣಾಮವೂ ತಗ್ಗುತ್ತದೆ.
ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಇಂಡಿಯ ವಿಜ್ಞಾನಿಗಳಾದ ಡಾ, ಪ್ರಕಾಶ್. ಡಾ, ಪ್ರೇಮ್ ಚಂದ. ಕೃಷಿ ಇಲಾಖೆ ಅಧಿಕಾರಿಗಳು. ಇಪ್ಕೂ ಸಂಸ್ಥೆಯ ಸಿಬ್ಬಂದಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಗ್ರಾಮದ ಅನೇಕ ಗ್ರಾಮದ ರೈತರು ಭಾಗವಹಿಸಿ ಮಾಹಿತಿ ಪಡೆದು ಕೊಂಡರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಹಿರೇಮಠ.ಆಲಮೇಲ

