ಖೇತ್ ಭಚಾವೋ ಅಭಿಯಾನ – ಕೃಷಿ ಉಳಿಸಿ ಕಾರ್ಯಕ್ರಮ ಜರಗಿತು.
ದೇವಣಗಾಂವ ಜೂ.11

ಕೃಷಿಯು ನಮ್ಮ ದೇಶದ ಬಿನ್ನಲುಬಾಗಿದ್ದು, ರೈತರ ಜೀವನಾಧಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಕುಸಿಯಿತ್ತಿದ್ದು, ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖೇತ್ ಭಚಾವೋ ಅಭಿಯಾನವನ್ನು ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು,
ರೈತರಲ್ಲಿ ಮಣ್ಣಿನ ಆರೋಗ್ಯ ಸಂರಕ್ಷಣೆ ಮತ್ತು ಸಮತೋಲನ ಗೊಬ್ಬರ ಬಳಕೆಯ ಕುರಿತು ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಅತಿಯಾದ ಯೂರಿಯಾ ಹಾಗೂ ಇತರೆ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿರುವ ಸಾವಯುವ ಅಂಶ ಕಡಿಮೆ ಯಾಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಕುಸಿದು, ಬೆಳೆಗಳ ಉತ್ಪಾದಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೊತೆಗೆ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ಚಟುವಟಿಕೆ ಕಡಿಮೆಯಾಗಿ, ದೀರ್ಘಾವಧಿಯಲ್ಲಿ ಭೂಮಿಯ ಉತ್ಪಾದನಾ ಸಾಮರ್ಥ್ಯ ಕುಂಠಿತ ಗೊಳ್ಳುತ್ತಿದೆ ಎಂದು ಡಾ, ಪ್ರಕಾಶ ಕೃಷಿ ವಿಜ್ಞಾನ ಕೇಂದ್ರ, ಇಂಡಿಯಾ ಬೇಸಾಯ ತಜ್ಞರಾದ ಡಾ, ಪ್ರಕಾಶ ತಿಳಿಸಿದರು.
ರೈತರು ಮಣ್ಣಿನ ಪರೀಕ್ಷೆ ಆಧರಿಸಿ ಗೊಬ್ಬರ ಬಳಕೆ, ಸಾವಯುವ ಗೊಬ್ಬರಗಳ ಬಳಕೆ, ಹಸಿರೆಲೆ ಗೊಬ್ಬರ ಬೆಳೆಗಳ ಬೆಳವಣಿಗೆ, ಬೆಳೆ ಪರಿವರ್ತನೆ ಹಾಗೂ ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುತ್ತಿದೆ. ಮಣ್ಣಿನ ಆರೋಗ್ಯ ಕಾಪಾಡಲು ಎರೆ ಹುಳ ಗೊಬ್ಬರ, ಕಾಂಪೋಸ್ಟ್, ಹಾಗೂ ಹಸಿರೆಲೆ ಗೊಬ್ಬರಗಳ ಬಳಕೆ ಮಾಡಬೇಕು ಎಂದು ಡಾ, ಪ್ರೇಮ್ ಚಂದ ಅವರು ರೈತರಿಗೆ ವಿವರವಾಗಿ ಮಾಹಿತಿ ನೀಡಿದರು.
ಈ ಅಭಿಯಾನವು ರೈತರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಕೃಷಿ ಭೂಮಿಯ ದೀರ್ಘಕಾಲೀನ ಫಲವತ್ತತೆಯನ್ನು ಕಾಪಾಡಲು ಸಹಕಾರಿ ಯಾಗಲಿದೆ. ರೈತರು ಸಮತೋಲನ ಗೊಬ್ಬರ ಬಳಕೆ, ಮಣ್ಣಿನ ಪರೀಕ್ಷೆ ಮತ್ತು ಸಾವಯುವ ಕೃಷಿ ಪದ್ದತಿಗಳನ್ನು ಅಳವಡಿಸಿ ಕೊಂಡು ತಮ್ಮ ಹೊಲಗಳನ್ನು ಸಂರಕ್ಷಿಸಬೇಕು. ಆರೋಗ್ಯಕರ ಮಣ್ಣು ಇದ್ದರೆ ಮಾತ್ರ ಉತ್ತಮ ಬೆಳೆ ಹಾಗೂ ಹೆಚ್ಚಿನ ಆದಾಯ ಸಾಧ್ಯವಾಗುತ್ತದೆ ಎಂದು ಆಲಮೇಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾದ ಅನೀಲದೇವ ದಶವಂತ ತಿಳಿಸಿದರು.
“ಮಣ್ಣು ಉಳಿದರೆ, ಹೊಲ ಉಳಿಯುತ್ತದೆ, ಹೊಲ ಉಳಿದರೆ ರೈತ ಉಳಿಯುತ್ತಾನೆ” ಎಂಬ ಸಂದೇಶದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ದೇವಣಗಾಂವ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮಂತ ನಾಗೂರ, ಊರಿನ ಪ್ರಮುಖರಾದ ದೌವಲಪ್ಪ ಸೋನ್ನ, ನಿಂಗಪ್ಪ ಅಳ್ಳಗಿ, ಮಲ್ಲು ಬ್ಯಾಡಗಿಹಾಳ, ಚನ್ನಪ್ಪ ಸಾಲೋಟಗಿ, ಬಸವರಾಜ ಗುಬ್ಬೇವಾಡ, ರೈತ ಸಂಪರ್ಕ ಕೇಂದ್ರದ ಆತ್ಮ ಸಿಬ್ಬಂದಿಯಾದ ಅನ್ವರ ಹುಂಡೇಕಾರ, ಕೃಷಿ ಸಂಜೀವಿನಿ ಸಿಬ್ಬಂದಿಯಾದ ಆಕಾಶ ನಾವಿ, ಶಿವಾನಂದ ನಿಂಬಾಳ, ಕೃಷಿ ಸಖಿ, ಗ್ರಾಮದ ಹಿರಿಯರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರೇವಣಸಿದ್ದಯ್ಯ. ಹಿರೇಮಠ ಆಲಮೇಲ
