ಶ್ರೀಶಾರದಾಶ್ರಮದಲ್ಲಿ ಪ್ರತಿ ಭಾನುವಾರ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿಗಳಿಗೆ – ಆಸಕ್ತರು ಹೆಸರು ನೋಂದಾಯಿಸಿಲು ಕೋರಿಕೆ.
ಚಳ್ಳಕೆರೆ ಜೂ.16

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ 2026 ರ ಜೂನ್ 21 ರಿಂದ ಫೆಬ್ರವರಿ 2027 ರ ವರೆಗೆ ಪ್ರತಿ ಭಾನುವಾರ ಬೆಳಗ್ಗೆ 11:00 ಗಂಟೆ ಯಿಂದ 01:00 ಗಂಟೆಯ ವರೆಗೆ 4 ನೇ. ತರಗತಿ ಯಿಂದ 10 ನೇ. ತರಗತಿಯ ವರೆಗಿನ ಮಕ್ಕಳಿಗಾಗಿ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿಗಳು ನಡೆಯಲಿದ್ದು.
ಈ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇರುವ ಮಕ್ಕಳು ಜೂನ್ 20 ರ ಒಳಗಾಗಿ ಒಂದು ಸಾವಿರ ರೂಪಾಯಿ ಯೊಂದಿಗೆ ಅರ್ಜಿ ಭರ್ತಿ ಮಾಡಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ (ದೂರವಾಣಿ- 9686177923) ಅವರಿಗೆ ಸಂಜೆ 4:30 ರಿಂದ 8:30 ರ ನಡುವೆ ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಿ ಕೊಳ್ಳುವಂತೆ ಶ್ರೀಶಾರದಾಶ್ರಮದ ಪ್ರಕಟಣೆಯಲ್ಲಿ ಕೋರಲಾಗಿದೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

