ಹಿರಿಯ ಮುತ್ಸದ್ಧಿ ನಾಯಕ ಹಾಗೂ ಪ್ರಸ್ತುತ ಶಾಸಕರು ಆದ ಎನ್.ವೈ ಗೋಪಾಲಕೃಷ್ಣ ಅವರಿಗೆ – ಸಚಿವ ಸ್ಥಾನಕ್ಕೆ ಆಗ್ರಹಿಸಿ ಕೂಡ್ಲಿಗಿ ಶಾಸಕರು & ಕಾಂಗ್ರೆಸ್ ಮುಖಂಡರು ನಿಯೋಗ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಭೇಟಿ.

ಕೂಡ್ಲಿಗಿ ಜೂ.17

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರ ಪರವಾಗಿ ಮಾನ್ಯ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎನ್.ಟಿ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಇಂದು ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿಗಳ ಸಿದ್ದರಾಮಯ್ಯ ಭೇಟಿ ಮಾಡಿ ಸತತ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ಹಾಗೂ ಅನುಭವಿ ರಾಜಕಾರಣಿ, ಮಾಜಿ ಸಭಾಪತಿಗಳಾದ ಶ್ರೀ ಎನ್.ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮುಖಂಡರು ಒಗ್ಗಟ್ಟಿನಿಂದ ಮನವಿ ಸಲ್ಲಿಸಿದರು.

ಕಾರಣ 2018 ರಲ್ಲಿ ನೀವು ನೋಡಿರಬಹುದು ಕಾಂಗ್ರೆಸ್ಸಿಗೆ ಹೀನಾಯ ಸೋಲು ಅದರಲ್ಲಿ ಎನ್.ವೈ ಗೋಪಾಲಕೃಷ್ಣ ಶಾಸಕರಿಗೆ ಟಿಕೆಟ್ ಕೈತಪ್ಪಿದ್ದು ಟಿಕೆಟ್ ಕೈತಪ್ಪಿದರೂ ಕೂಡ ಬಿಜೆಪಿಯವರು ಅವರನ್ನು ಬರಮಾಡಿ ಕೊಂಡು ಕೇವಲ 15 ದಿನದಲ್ಲಿ ಕೂಡ್ಲಿ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಅನ್ನು ಆಯ್ಕೆ ಮಾಡಿ ಕ್ಷೇತ್ರದ ಶಾಸಕರನ್ನಾಗಿ ಮಾಡಿ ಕೊಂಡರು ಮತ್ತೆ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಎನ್.ವೈ ಗೋಪಾಲಕೃಷ್ಣ ಶಾಸಕರು ಒಳ್ಳೆ ಧರ್ಮದ ಪ್ರಾಮಾಣಿಕ ವ್ಯಕ್ತಿ ಭ್ರಷ್ಟಾಚಾರ ಇಲ್ಲದಂತೆ ಕೆಲಸ ಮಾಡಿರುವ ವ್ಯಕ್ತಿ ಎಂದು ತಿಳಿದು ಸಚಿವ ಸ್ಥಾನ ನಾನು ಕೊಡುತ್ತಿದ್ದೆ ಆದರೂ ಕಾಂಗ್ರೆಸ್ ಎಂಎಲ್ಎ ಗಳು ನಮ್ಮ ಪಕ್ಷಕ್ಕೆ ನಮ್ಮ ಸರ್ಕಾರ ನಡೆಸಲು ನಮ್ಮ ಜೊತೆಗೆ ಸುಮಾರು 18 ಜನ ಎಂಎಲ್ಎ ಗಳು ಬಂದಿದ್ದಾರೆ ಆದ ಕಾರಣ ನಿಮಗೆ ಸಚಿವ ಸ್ಥಾನಕ್ಕಿಂತಲೂ ಕೂಡ್ಲಿಗಿ ಕ್ಷೇತ್ರಕ್ಕೆ ನೀವು ಕೇಳಿದಷ್ಟು ಅನುದಾನ ನಾನು ಕೊಡುತ್ತೇನೆ ಎಂದು ಸುಮಾರು 3000 ಕೋಟಿ ಅನುದಾನವನ್ನು ಕೂಡ್ಲಿಗಿ ಕ್ಷೇತ್ರಕ್ಕೆ ಎನ್.ವೈ ಗೋಪಾಲಕೃಷ್ಣ ಶಾಸಕರು ಅಭಿವೃದ್ಧಿಯಲ್ಲಿ ಮುನ್ನಡೆ ಸಾಗಿದರು.

ಮತ್ತು 2023 ಮತ್ತೆ ಚುನಾವಣೆ ಬಂತು ಆಗ ಕಾಂಗ್ರೆಸ್ ಪಕ್ಷದವರು ಎನ್.ವೈ ಗೋಪಾಲಕೃಷ್ಣರನ್ನು ಬರಮಾಡಿ ಕೊಂಡು ನಮ್ಮ ಪಕ್ಷಕ್ಕೆ ನೀವು ಸೀಮಿತ ನಿಮಗೆ ನಮ್ಮ ಪಕ್ಷ ಮನೆದೇವ್ರು ಇದ್ದಾಗೆ ನಿಮ್ಮ ಶಕ್ತಿಯೇ ನಮಗೆ ಬಹಳ ದೊಡ್ಡದು ಎಂದು ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಎನ್.ವೈ ಗೋಪಾಲಕೃಷ್ಣ ಇವರಿಗೆ ಕೊರಳಲ್ಲಿ ಕಾಂಗ್ರೆಸ್ ಹಸ್ತದ ಪ್ಲ್ಯಾಗ್ ಹಾಕಿದಾಗ ಆ ಕ್ಷಣದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಗೆಲವು ಖಚಿತ ಎಂದು ಇಡೀ ರಾಜ್ಯದ 136 ಎಮ್ಎಲ್ಎ ಗಳ ಶಕ್ತಿಗೆ ಎನ್.ವೈ ಗೋಪಾಲಕೃಷ್ಣ ಎಂದು ತಿಳಿಯಬೇಕು ಏಕೆಂದರೆ ಕೃಷ್ಣ ಪರಮಾತ್ಮ ಇದ್ದ ಹಾಗೆ ಎನ್.ವೈ ಗೋಪಾಲಕೃಷ್ಣ ಶಾಸಕರು ಮತ್ತು ಇವರದು ಒಳ್ಳೆ ದೊಡ್ಡ ಮನೆತನದ ಕುಟುಂಬ ಇವರ ಅಣ್ಣನಾದ ಎನ್.ವೈ ಹನುಮಂತಪ್ಪ ಮೂರು ರಾಜ್ಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.

ಮತ್ತು ಚಿತ್ರದುರ್ಗ ಜಿಲ್ಲೆ ಲೋಕಸಭಾ ಸದಸ್ಯರಾಗಿ ಸಮಾಜ ಸೇವೆ ಮಾಡಿದ್ದಾರೆ ಯಾವುದೇ ಕಿರಿಕಿರಿ ಇಲ್ಲದ ಹಾಗೆ ಸುಮಾರು ಏಳು ಭಾರೀ ಶಾಸಕರಾಗಿ ಕಾನೂನು ಬದ್ಧವಾಗಿ ಆಡಳಿತ ನಡೆಸಿ ಕೊಂಡು ಬಂದಿದ್ದಾರೆ ಜನಪರ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿದಂತವರು ಬರೀ ಸುಳ್ಳು ಹೇಳ್ಕೊಂಡು ಎಂದು ಅವರು ಕೆಲಸ ಮಾಡಿಲ್ಲ ಎಂದು ನಿಜವಾದಂತ ಮೂರು ಜಿಲ್ಲೆಗಳ ಮತದಾರರು ಮಾತನಾಡುತ್ತಾರೆ.

ಇಂತಹ ವ್ಯಕ್ತಿಗೆ ನೀವು ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಸರ್ಕಾರದ ಆಡಳಿತದಲ್ಲಿ ಉನ್ನತ ಸಚಿವ ಸ್ಥಾನ ನೀಡಿ ಇಡೀ ರಾಜ್ಯದ ಜನ ಮೆಚ್ಚಿದ ನಾಯಕ ಸಾರ್ವಜನಿಕರ ಅಭಿವೃದ್ಧಿಯ ಕಾಯಕ ಎಂದು ತಿಳಿದು ಸಚಿವ ಸ್ಥಾನ ನೀಡಲೇ ಬೇಕೆಂದು ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮತ್ತು ಹಾಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರಿಗೆ ಡಾಕ್ಟರ್ ಎನ್.ಟಿ ಶ್ರೀನಿವಾಸ್ ಶಾಸಕರ ಕಾಂಗ್ರೆಸ್ ಮುಖಂಡರು ಹಾಗೂ ಬೆಂಬಲಿಗರು ಕಾಲಿಗೆ ಬಿದ್ದು ಕೇಳಿ ಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗುಂಡುಮಣಗು ತಿಪ್ಪೇಸ್ವಾಮಿ, ಸೇರಿದಂತೆ ಅನೇಕ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

“ಹಿರಿಯತೆ, ಅನುಭವ ಮತ್ತು ಜನ ಸೇವೆಗೆ ಗೌರವವಾಗಿ ಶ್ರೀ ಎನ್.ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು” ಎಂಬ ಒಕ್ಕೊರಲಿನ ಆಗ್ರಹ ಈ ಸಂದರ್ಭದಲ್ಲಿ ವ್ಯಕ್ತವಾಯಿತು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ ಹೊಂಬಾಳೆ ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button