ಆಶೋಕ ಬಡಗೇರ ಶಿಕ್ಷಕರಿಗೆ ಗೌರವ ಸಮರ್ಪಣೆ ಹಾಗೂ ನಿವೃತ್ತಿ – ಸಮಾರಂಭ ಕಾರ್ಯಕ್ರಮ ಜರಗಿತು.
ತಾರಾಪುರ ಜೂ.17

ಆಲಮೇಲ ತಾಲೂಕಿನ ತಾರಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ತಾರಾಪೂರ ಶಾಲೆಯಲ್ಲಿ ಶ್ರೀ ಅಶೋಕ್ ಬಡಿಗೇರ ಮುಖ್ಯ ಗುರುಗಳು ಇವರಿಗೆ ತಾರಾಪೂರ ಹಳೆ ತಾವರಖೇಡ. ಹೊಸ ತಾವರಖೇಡ. ಶಾಲೆಯ ಶಿಕ್ಷಕರಿಂದ 30 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅಶೋಕ್ ಬಡಿಗೇರ ಮುಖ್ಯ ಗುರುಗಳು ಇವರಿಗೆ ಶಾಲೆಯ ಮಕ್ಕಳಿಂದ ಪುಷ್ಪಾರ್ಚನೆ ಸಲ್ಲಿಸುವ ಮುಖಾಂತರ ಸ್ವಾಗತಿಸಿದರು ನಂತರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಎಲ್ಲಾ ಶಿಕ್ಷಕರಿಂದ ಆಶೋಕ ಬಡಗೇರ ಶಿಕ್ಷಕರಿಗೆ ಶ್ಯಾಲು ಸನ್ಮಾನ ಹಾಗೂ ಗೌರವ ಆಶೋಕ ಬಡಗೇರ ಶಿಕ್ಷಕರಿಗೆ ಗೌರವ ಸಮರ್ಪಣೆ ಹಾಗೂ ನಿವೃತ್ತಿ ಸಮಾರಂಭ ಕಾರ್ಯಕ್ರಮ ಜರಗಿತು.
ನಂತರ ಅಶೋಕ್ ಬಡಿಗೇರ ಸನ್ಮಾನ ಸ್ವೀಕರಿಸಿ ಮಾತನಾಡಿ ನಾನು 30 ವರ್ಷಗಳ ಕಾಲ ಈ ಸೇವೆ ಮಾಡುವುದರಿಂದ ಈ ಶಿಕ್ಷಕ ವೃತ್ತಿಯು ಬದುಕಿನ ನೆಮ್ಮದಿ ಕಾಣುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.ಹಲವು ವಿದ್ಯಾರ್ಥಿಗಳ ಬಾಳಿನಲ್ಲಿ ನನಗೆ ಗುರುವಿನ ಸ್ಥಾನ ಇರುವುದರಿಂದ ತೃಪ್ತಿಯ ಜೊತೆಗೆ ಹೆಮ್ಮೆಯೂ ನನಗಿದೆ ಎಂದು ಹೇಳಿದರು.
ಶ್ರೀ ಎ.ಕೆ ಕೊಲ್ಲೂರು ಮಠ ಶಿಕ್ಷಕರು ಮಾತನಾಡಿ ಅಶೋಕ ಬಡಿಗೇರ ಶಿಕ್ಷಕರು ಸುಮಾರು 30 ವರ್ಷಗಳ ವರೆಗೆ ಶಿಕ್ಷಕರ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಬಾಳಿಗೆ ಬೆಳಕಾಗಿ ಅಕ್ಷರ ಜ್ಞಾನವನ್ನು ಕಲಿಸುವದೊಂದಿಗೆ ಸಮಾಜದಲ್ಲಿ ಬದುಕುವ ದಾರಿಯನ್ನು ತೋರಿಸಿದ ಶಿಕ್ಷಕರು 31/5/2026 ಶಿಕ್ಷಣದ ವೃತ್ತಿಯಿಂದ ನಿವೃತ್ತಿ ಬಿಟ್ಟಿದ್ದಾರೆ ಅವರ ನಿವೃತ್ತಿ ಜೀವನ ಸುಖಮಯವಾಗಲಿ ಎಂದು ಶುಭ ಹಾರಿಸಿದರು.ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆಯ ಶಿಕ್ಷಕರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎ.ಕೆ ಕೊಲ್ಲೂರು ಮಠ ಶಿಕ್ಷಕರು. ಹೊಸ ತಾವರಖೇಡ.ಬಿ. ಎಚ್ ಪಾಟೀಲ ಮುಖ್ಯ ಗುರುಗಳು ಹೊಸ ತಾವರಖೇಡ. ಜಿ.ಬಿ ಬಿರಾದಾರ ಮುಖ್ಯ ಗುರುಗಳು ಹಳೇ ತಾವರಖೇಡ. ಆರ್.ಐ ಬಂಡೆ ಶಿಕ್ಷಕರು ಹಳೇ. ತಾರಾಪೂರ ಶಾಲೆಯ ಶಿಕ್ಷಕರಾದ ಶ್ರೀ ಎಲ್.ಟಿ ಗೊಂದೆಳಿ ಮುಖ್ಯ ಗುರುಗಳು. ಶ್ರೀ ಗಿರೀಶ್ ಹೊವಿನಹಳ್ಳಿ ಹೊಸ ತಾರಾಪೂರ ಶಾಲೆಯ ಶಿಕ್ಷಕರಾದ ಶ್ರೀ ಎಮ್.ಜಿ ಪೂಜಾರಿ ಮುಖ್ಯ ಗುರುಗಳು. ಶ್ರೀ ಡಿ.ವಿ ಡೊಳ್ಳ ಶಿಕ್ಷಕರು ಎಮ್.ಬಿ ಭೋವಿ ಶಿಕ್ಷಕರು ಸುವರ್ಣ ಹಾದಿಮನಿ ಅತಿಥಿ ಶಿಕ್ಷಕರು ಹಾಗೂ ಶಿವು ಕಂಟೇಕೊರ ದೌಲಪ್ಪ ವಾಲಿಕಾರ. ಯಮನಪ್ಪ ಹರಿಜನ ಎಸ್‌ಡಿಎಂಸಿ ಅಧ್ಯಕ್ಷರು. ಶಂಕರ್ ಕಾಂಬಳ್ಳೆ ಹಾಗೂ ಶಾಲೆಯ ಮುದ್ದು ಮಕ್ಕಳು ಭಾಗವಹಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಹಿರೇಮಠ.ಆಲಮೇಲ
