ಅಂಕಣಕಾರರಾಗಲು ಲೋಕ ಜ್ಞಾನ ಮತ್ತು ಸಾಕಷ್ಟು ಸಿದ್ಧತೆಗಳಿರ ಬೇಕು – ಎ.ಆರ್ ಮಣಿಕಾಂತ್.

ಚಿತ್ರದುರ್ಗ ಜೂ.18

ಅಂಕಣಕಾರರಾಗಲು ಲೋಕ ಜ್ಞಾನ, ವಿವಿಧ ಭಾಷೆಗಳ ಜ್ಞಾನ ಹಾಗೂ ಸಾಕಷ್ಟು ಸಿದ್ಧತೆಗಳನ್ನು ಕೈಗೊಳ್ಳ ಬೇಕಾಗುತ್ತದೆ ಎಂದು ಖ್ಯಾತ ಅಂಕಣಕಾರ ಎ.ಆರ್ ಮಣಿಕಾಂತ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯಿಂದ ಆಯೋಜಿಸಿದ್ದ ಉಪನ್ಯಾಸ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಉದ್ಘಾಟನೆ

ಉದ್ಘಾಟನೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ.ವೀರೇಶ್ ನೆರವೇರಿಸಿ ವೇದಿಕೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಎ.ಆರ್.ಮಣಿಕಾಂತ್ ಅವರಿಗೆ ಗೌರವ ಸಮರ್ಪಣೆ 💐

ಪ್ರಾಸ್ತಾವಿಕವಾಗಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ದಯಾ ಪುತ್ತೂರ್ಕರ್ ಮಾತನಾಡಿದರೆ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷೆ ಶಾರದಾ ಬಿ ಜೈರಾಂ ವಹಿಸಿದ್ದರು.

ಕೆ.ಎಂ.ವೀರೇಶ್ ಅವರ ಉದ್ಘಾಟನಾ ನುಡಿಗಳು

ಖ್ಯಾತ ವಕೀಲರಾದ ಬಿ.ಕೆ ರಹಮತ್ ವುಲ್ಲಾ, ಸತೀಶ್ ಕುಮಾರ್, ಜಯದೇವಮೂರ್ತಿ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.

ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ದಯಾ ಪುತ್ತೂರ್ಕರ್ ಅವರ ಪ್ರಾಸ್ತಾವಿಕ ನುಡಿಗಳು

ಕಾರ್ಯಕ್ರಮದ ಪ್ರಾರ್ಥನೆಯನ್ನು ಜ್ಯೋತಿ ಗಿರೀಶ್ ಮಾಡಿದರೆ ಸ್ವಾಗತವನ್ನು ಶಾಂತಮ್ಮ ನಡೆಸಿ ಕೊಟ್ಟರು. ಶಿವಾನಂದ ಬಂಡೇಹಳ್ಳಿ ಸೊಗಸಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.

ಗಾಯತ್ರಿ ಶಿವರಾಂ, ಬಸವರಾಜ್ ಹರ್ತಿ, ಡಾ, ಗೌರಮ್ಮ, ಉಷಾರಾಣಿ, ಕೆ.ಎಸ್.ತಿಪ್ಪಮ್ಮ, ಸುಮಾ ರಾಜಶೇಖರ್, ಶಿವರುದ್ರಪ್ಪ ಪಂಡ್ರಳ್ಳಿ, ವೀರೇಶ್, ಪ್ರವೀಣ್ ಬೆಳಗೆರೆ, ಯತೀಶ್ ಎಂ ಸಿದ್ದಾಪುರ, ಕ್ಲಾಸಿಕ್ ಚಂದ್ರಶೇಖರ್, ವಿನಾಯಕ್, ಡಾ, ಮಹೇಶ್, ಹಂಸದಾಸ, ಶೃತಿ ದೀಕ್ಷಿತ್, ಸುಜಾತಾ ಪ್ರಾಣೇಶ್, ವೇದಮೂರ್ತಿ, ಶಶಿಕಲಾ ಕುಂಚಿಗನಾಳ್ ಸೇರಿದಂತೆ ಸಾಹಿತ್ಯಾಸಕ್ತರು ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button