ಸಕಲ ದೇವ-ದೇವಿ ಸ್ವರೂಪರು ಶ್ರೀದತ್ತಾತ್ರೇಯರು – ಶ್ರೀಮತಿ ಗೀತಾ.ಪ್ರಕಾಶ್.
ಚಳ್ಳಕೆರೆ ಜೂ.22

ಶ್ರೀಗುರು ದತ್ತಾತ್ರೇಯರಲ್ಲಿ ಸಕಲ ದೇವ-ದೇವಿಯರ ಸ್ವರೂಪವನ್ನು ಕಾಣುತ್ತೇವೆ ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ಆಧ್ಯಾತ್ಮಿಕ ಚಿಂತಕಿ ಶ್ರೀಮತಿ ಗೀತಾ ಪ್ರಕಾಶ್ ತಿಳಿಸಿದರು.

ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು “ಶ್ರೀಗುರು ದತ್ತಾತ್ರೇಯರ ಜೀವನ-ವ್ಯಕ್ತಿತ್ವ” ದ ಬಗ್ಗೆ ಗಾನ-ಪ್ರವಚನ ನೀಡುತ್ತ ಮಾತನಾಡಿದರು.

ಅತ್ರಿ-ಅನುಸೂಯರ ಮಗನಾಗಿ ತ್ರೇತಾಯುಗದಲ್ಲಿ ಜನಿಸಿದ ಶ್ರೀಗುರು ದತ್ತಾತ್ರೇಯರ ಮಹಿಮೆ ಅನಂತವಾದದ್ದು, ಬ್ರಹ್ಮ-ವಿಷ್ಣು- ಮಹೇಶ್ವರರ ಸಂಗಮ ರೂಪವಾಗಿ ಔದುಂಬರ ವೃಕ್ಷದ ವಾಸಿಗಳಾಗಿ ಸದಾ ಅವರ ನಾಮಜಪ, ಧ್ಯಾನ-ಭಜನೆ ಮಾಡುವ ಭಕ್ತರಿಗೆ ಸೂಕ್ಷ್ಮ ರೂಪದಿಂದ ದರ್ಶನ ನೀಡುವ ದತ್ತಾತ್ರೇಯರು ಇಂದಿಗೂ ಭಕ್ತರ ಕಲ್ಪತರು ಆಗಿದ್ದಾರೆ ಎಂದು ಹೇಳಿದರು.

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಶ್ರೀಮತಿ ಪ್ರಮೀಳಾ ಜಗದೀಶ್, ಶೋಭಾ ರಮೇಶ್, ತಿಪ್ಪಮ್ಮ ಉಮಾಶಂಕರ್ ಅವರಿಂದ ವಿಶೇಷ ಭಜನೆ, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ನಂಜಮ್ಮ, ಎಚ್ ಲಕ್ಷ್ಮೀದೇವಮ್ಮ, ಎಂ ಲಕ್ಷ್ಮೀದೇವಮ್ಮ, ಸುವರ್ಣಮ್ಮ, ಅನುಸೂಯ, ರಾಘವೇಂದ್ರ, ಸರ್ವಮಂಗಳಾ, ಪ್ರೇಮಾ, ಸರಸ್ವತಿ ನಾಗರಾಜ್, ಪುಷ್ಪಲತಾ ವಿಜಯ್ ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

