ಮೂಲ ಸೌಕರ್ಯ ಅಭಿವೃದ್ಧಿ – ಕಾಣದ ಹಂಪನಾಳ ಗ್ರಾಮ.
ಬಪ್ಪುರು ಜೂ.21

ಮಸ್ಕಿ ಸಮೀಪದ ಬಪ್ಪುರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಂಪನಾಳ ಗ್ರಾಮ ತಾಲೂಕಿಗೆ ಹತ್ತಿರ ಇದ್ದರೂ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ದೂರ ಉಳಿದಿದೆ. ಕಳೆದ 20 ದಿನಗಳಿಂದ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ.
ಗ್ರಾಮ ಸೇರಿದಂತೆ ನಂಜಲದಿನ್ನಿ, ಗುಡಗಲದಿನ್ನಿ ಮೂರು ಗ್ರಾಮದ ನಡುವೆ ಇಲ್ಲಿರುವ ಕುಡಿಯುವ ನೀರಿನ ಕರೆಗೆ ತುಂಗಭದ್ರಾ ಎಡದಂಡೆ ಕಾಲುವೆ ನೀರು ತುಂಬಿಸಲು ಗ್ರಾಮ ಆಡಳಿತ ಅಧಿಕಾರಿ ವಿಫಲವಾದ ಕಾರಣ ಕೆರೆಯಲ್ಲಿ ನೀರಿಲ್ಲದೆ ಸರಿಯಾಗಿ ಪೂರೈಕೆ ಆಗುತ್ತಿಲ್ಲ ಎಂದು ನೀರುಗಂಟಿ ಹೇಳುತ್ತಿದ್ದಾರೆ.
ಇನ್ನೂ ಶುದ್ಧ ಕುಡಿಯುವ ನೀರು ಒದಗಿಸಲು ಘಟಕ ಸ್ಥಾಪಿಸಿದ್ದು ನಿರ್ವಹಣೆ ಕೊರತೆಯಿಂದ ಕೇವಲ ಒಂದು ವರ್ಷ ಬಳಕೆಯಾಗಿ ದುರಸ್ಥಿಗೆ ತಲುಪಿದ್ದು ವರ್ಷಗಳೇ ಕಳೆದರೂ ದುರಸ್ಥಿ ಆಗದ ಕಾರಣ ಐದಾರು ಕಿ.ಮೀ ದೂರದ ಊರಿಂದ ತರ ಬೇಕಾಗಿದೆ. ಕೆಕೆಆರ್ಡಿಬಿ ಅನುದಾನದಲ್ಲಿ 26 ಲಕ್ಷ ರೂಪಾಯಿ ಖರ್ಚು ಮಾಡಿ ಹೈಟೆಕ್ ಶೌಚಾಲಯ ನಿರ್ಮಿಸಿ ಉದ್ಘಾಟನೆ ಮಾಡದೆ ಪಾಳು ಬೀಳುತ್ತಿದ್ದು ಅದಕ್ಕೆ ನೀರು ಹಾಗೂ ವಿದ್ಯುತ್ ಸಂಪರ್ಕ ಕೂಡ ಒದಗಿಸಿದ ಕಾರಣ ಮಹಿಳೆಯರಿಗೆ ಮುಜುಗರದ ನಡುವೆ ಬಯಲು ಜಾಲಿಗಿಡಗಳೇ ಆಧಾರವಾಗಿವೆ.

ಉತ್ತಮ ರಸ್ತೆ ಸಂಪರ್ಕ ಕೂಡ ಇಲ್ಲದೆ ಸಾರಿಗೆ ವ್ಯವಸ್ಥೆ ಇಲ್ಲದೆ ಮಸ್ಕಿ ಪಟ್ಟಣಕ್ಕೆ ಬರಲು ಖಾಸಗಿ ವಾಹನ ಅವಲಂಬನೆ ಮಾಡಬೇಕಿದೆ. ಸಿ.ಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದೂ ಗುತ್ತಿಗೆದಾರರು ಅರೆ ಬರೆ ಕಾಮಗಾರಿ ಮಾಡಿ ಕೆಲವು ಕಡೆ ಜಲ್ಲಿ ಕಲ್ಲು ಹಾಗೇ ಬಿಟ್ಟಿದ್ದಾರೆ. ಮಳೆ ಬಂದರೆ ಕೆಸರಲ್ಲಿ ಸಂಚಾರ ಮಾಡ ಬೇಕಾದ ಕಾರಣ ಎಲ್ಲೆಡೆ ಬೇಗ ಸಿ.ಸಿ ರಸ್ತೆಗಳನ್ನು ನಿರ್ಮಾಣ ಮಾಡಬೇಕು. ಪ್ರೌಢಶಾಲಾ ಜೊತೆಗೆ ಪದವಿ ಪೂರ್ವ ಕಾಲೇಜು ಮಾಡಲು ಜನರು ಶಾಸಕರಿಗೆ ಮನವಿ ಮಾಡಿದ್ದಾರೆ.
ಹುಳು ತುಂಬಿ ಗಬ್ಬು ನಾರುತ್ತಿರುವ ಚರಂಡಿಗಳ ಸ್ವಚ್ಛತೆ, ಕೆರೆಗೆ ನೀರು ತುಂಬಿಸಿ ನಿತ್ಯ ಸರಬರಾಜು, ಶುದ್ಧ ನೀರಿನ ಘಟಕ ದುರಸ್ಥಿ, ಜೋತು ಬಿದ್ದ ವಿದ್ಯುತ್ ವೈರ್ ಸರಿಪಡಿಸಿ ಬೀದಿ ದೀಪ ಅಳವಡಿಕೆ, ಲಕ್ಷಾಂತರ ರೂಪಾಯಿ ವೆಚ್ಚದ ಹೈಟೆಕ್ ಶೌಚಾಲಯ ಉದ್ಘಾಟನೆ, ಸಾರ್ವಜನಿಕ ಸಾರಿಗೆ ಸೌಲಭ್ಯ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಒದಗಿಸಲು ಸಾಕಷ್ಟು ಭಾರೀ ಗ್ರಾಮ ಪಂಚಾಯತಿ ಪಿಡಿಓ ತಾಲೂಕು ಪಂಚಾಯತಿ ಇ.ಓ ಅವರಿಗೆ ಮನವಿ ಮಾಡಿದರು ಕ್ಯಾರೇ ಮಾಡುತ್ತಿಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಮುಖಂಡರು ತಿಳಿಸಿದ್ದಾರೆ. ಶಾಸಕರ ಮಾತಿಗೂ ಕಿಮ್ಮತ್ತು ನೀಡದ ಅಧಿಕಾರಿಗಳು ಈಗಲಾದರೂ ಅಭಿವೃದ್ಧಿಗೆ ಮುಂದಾಗ ಬೇಕು ಇಲ್ಲದಿದ್ದರೆ ತಾಲೂಕು ಆಡಳಿತದ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ
