ಆರೋಗ್ಯವೇ ಭಾಗ್ಯ, ಯೋಗವೇ ಅದಕ್ಕೆ ಮಾರ್ಗ – ಶ್ರೀಶೈಲ ಬಿರಾದಾರ.
ಸಿಂದಗಿ ಜೂ.22

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ APMC ಯೋಗಾ ಗ್ರೂಪ್ ನವರು ಆಯೋಜಿಸಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪವಿತ್ರ ಕಾರ್ಯಕ್ರಮದಲ್ಲಿ ಸಿಂದಗಿ ವೀಧಾನ ಸಭಾ ಕ್ಷೇತ್ರದ BJP ಪಕ್ಷದ ಮುಖಂಡರು ಸನ್ಮಾನ್ಯ ಶ್ರೀ ಶ್ರೀಶೈಲಗೌಡ ಬಿರಾದಾರ ಅವರು ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಅವಿರತ ಶ್ರಮದಿಂದಾಗಿ ಇಂದು ಭಾರತದ ಈ ಪ್ರಾಚೀನ ಕಲೆ ಜಗತ್ತಿನಾದ್ಯಂತ ಪಸರಿಸಿದೆ. ಇಂದು ಇಡೀ ವಿಶ್ವವೇ ಭಾರತದ ಕಡೆ ಮುಖ ಮಾಡಿ ಯೋಗವನ್ನು ಅಪ್ಪಿ ಕೊಳ್ಳುತ್ತಿದೆ ಎಂದರೆ ಅದಕ್ಕೆ ನಮ್ಮ ಸಂಸ್ಕೃತಿಯಲ್ಲಿರುವ ಶಕ್ತಿಯೇ ಕಾರಣ.

ನಮ್ಮ ಭಾರತೀಯ ಜನತಾ ಪಾರ್ಟಿ ಯಾವಾಗಲೂ “ಸ್ವಸ್ಥ ಭಾರತ, ಶ್ರೇಷ್ಠ ಭಾರತ” ಎಂಬ ತತ್ವವನ್ನು ನಂಬಿ ಕೊಂಡು ಬಂದಿದೆ. ನಮ್ಮ ಯುವ ಪೀಳಿಗೆ ಮೊಬೈಲ್ ಮತ್ತು ಕೆಟ್ಟ ಹವ್ಯಾಸಗಳಿಗೆ ಬಲಿಯಾಗದೆ, ಯೋಗ ಮತ್ತು ಸದೃಢ ಜೀವನ ಶೈಲಿಯನ್ನು ಅಳವಡಿಸಿ ಕೊಳ್ಳಬೇಕು. ಸಿಂದಗಿ ಮತ ಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲೂ ಇಂತಹ ಯೋಗ ಶಿಬಿರಗಳು ನಡೆಯಬೇಕು ಎನ್ನುವುದು ನನ್ನ ಆಸೆ.
ಯೋಗ ಎನ್ನುವುದು ಕೇವಲ ದೈಹಿಕ ಕಸರತ್ತಲ್ಲ. ಅದು ಮನಸ್ಸು, ಶರೀರ ಮತ್ತು ಆತ್ಮವನ್ನು ಒಂದು ಗೂಡಿಸುವ ಪವಿತ್ರ ಮಾರ್ಗ, ದಿನಕ್ಕೆ ಕೇವಲ ಅರ್ಧ ಗಂಟೆ ಯೋಗ ಮಾಡುವುದರಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು.

ಆದ್ದರಿಂದ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ರೂಢಿಸಿ ಕೊಳ್ಳಬೇಕು ಎಂದು ನಾನು ಈ ಮೂಲಕ ವಿನಂತಿಸುತ್ತೇನೆ, ಎಂದು ಮಾತನಾಡಿದರು ಆಶೋಕ ಗು ವಾರದ. ಗಿರೀಶ ಪಿ ಕುಲಕರ್ಣಿ. ಡಾ, ರವಿ ಸರ್. ಡಾ, ಚಿದಾನಂದ ಅರಳಗುಂಡಗಿ. ಶರಣಯ್ಯ ಮ. ಹಿರೇಮಠ. ಎಮ್ ಸಿ. ಪಟ್ಟಣಶೆಟ್ಟಿ ಅರ್ಬನ್ ಬ್ಯಾಂಕ್. ಭೋಜಪ್ಪಣ್ಣ ಸಂಗಮ. ಸಿದ್ದರಾಮ ಪಾಟೀಲ. ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರು. ಬಸವರಾಜ ಕಲಬುರಗಿ. ಶಿವಪುತ್ರ. ಮಲ್ಲೇದ. ಶ್ರೀಶೈಲ ಕುದುರೆಗುಂಡ ಶಿಕ್ಷಕರು. ಬಿ ಕೆ ತಾಳಿಕೋಟಿ ಸರ್. ಭಾಗವಹಿಸಿದರು ನಿರೂಪಣೆ ರುದ್ರಯ್ಯ ಸ್ವಾಮಿ ಹಿರೇಮಠ. ಸಂಗಮೇಶ ಕಕ್ಕಸಗೇರಿ. ಸ್ವಾಗತ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಹಿರೇಮಠ.ಆಲಮೇಲ

