ಜನಪದ ಕಲೆಗಳು ನಮ್ಮ ನೆಲ ಮೂಲ ಸಂಸ್ಕೃತಿಯ ಪ್ರತಿಬಿಂಬ ಎಂದ – ಶ್ರೀ ಶ್ರೀ ಬಸವಲಿಂಗ ಮಹಾ ಸ್ವಾಮಿಗಳು ಹೇಳಿದರು.
ಮೊಳಕಾಲ್ಮುರು ಜೂ.22

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಜನಪದ ಕಲೆಗಳು ನಮ್ಮ ನೆಲ ಮೂಲ ಸಂಸ್ಕೃತಿಯ ಪ್ರತಿಬಿಂಬ ಎಂದು ಸಿದ್ಧಯ್ಯನ ಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಶ್ರೀ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಸಪ್ತ ಸ್ವರ ಸಾಂಸ್ಕೃತಿಕ ಸಂಸ್ಥೆ, ತುಮಕೂರ್ಲಹಳ್ಳಿ, ಸಂಸ್ಕೃತಿ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಇವರ ಸಂಯುಕ್ತಾಶ್ರಯದಲ್ಲಿ ಗೌಡರಹಟ್ಟಿಯಲ್ಲಿ ನಡೆದ ಜಾನಪದ ಸಾಂಸ್ಕೃತಿಕ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ನಶಿಸಿ ಹೋಗುತ್ತಿರುವ ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ ಬೆಳಸ ಬೇಕಿದೆ.
ಗ್ರಾಮೀಣ ಸೊಗಡಿನ ಪರಂಪರೆಯನ್ನು ಮುಂದಿನ ಯುವ ಪೀಳಿಗೆಗೆ ಕೊಡ ಬೇಕಿದೆ. ಜಾನಪದ ಕಲಾ ಪರಂಪರೆಗಳಾದ ಗೀಗಿಪದ, ಜಾನಪದ ಗೀತೆ, ತತ್ವಪದ, ಲಾವಣಿ, ಸೋಬಾನೆ ಪದಗಳು, ಬೀಸೋ ಕಲ್ಲಿನ ಪದಗಳು, ಕಹಳೆ, ತಮಟೆ ವಾದನ, ಉರುಮೆ, ಸೇರಿದಂತೆ ಹಲವು ಜನಪದ ಕಲೆಗಳು ನಮ್ಮ ಸಂಸ್ಕೃತಿ ಮತ್ತು ನಮ್ಮ ಬದುಕಿನ ಅಸ್ಮಿತೆಯಾಗ ಬೇಕಿದೆ ಈ ಹಿನ್ನೆಲೆಯಲ್ಲಿ ಕಲೆಯನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸುವ ಮೂಲಕ ಕಲೆಯನ್ನು ಉಳಿಸಿ ಬೆಳೆಸ ಬೇಕಿದೆ ಎಂದು ತಿಳಿಸಿದರು.
ಮೊಳಕಾಲ್ಮೂರು ಪೊಲೀಸ್ ಠಾಣೆಯ ಲಕ್ಷ್ಮಣ್ ಮಹೇಶ್ ಹೊಸಪೇಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮೊಬೈಲ್ ಹಾವಳಿ ಹೆಚ್ಚಾಗಿದ್ದು, ಮನುಷ್ಯ ಒತ್ತಡದಿಂದ ಹೊರ ಬರಲು ಇಂತಹ ಜಾನಪದ ಕಲೆಗಳನ್ನು ಮೈಗೂಡಿಸಿ ಕೊಂಡು ಸಂಸ್ಕಾರವಂತರಾಗ ಬೇಕು, ಬಾಂಧವ್ಯವನ್ನು ಗಟ್ಟಿ ಗೊಳಿಸುವ ಇಂತಹ ಜಾನಪದ ಕಲೆಗಳನ್ನು ಆಸ್ವಾದಿಸಿ ಗೌರವಿಸ ಬೇಕು , ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಈ ಕಾಲ ಘಟ್ಟದಲ್ಲಿ ಇಂತಹ ಗ್ರಾಮೀಣ ಸಂಸ್ಕೃತಿಯ ಕಲೆಗಳು ನಮ್ಮ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುತ್ತವೆ ಎಂದು ತಿಳಿಸಿದರು.

ಶ್ರೀಮಠದ ಕಾರ್ಯದರ್ಶಿ ಪಿಆರ್ ಕಾಂತರಾಜ್ ಮಾತನಾಡಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಕಲಾವಿದರ ನಡೆ ಜನರ ಕಡೆ ಎನ್ನುವಂತಹ ಹಲವಾರು ವಿನೂತನ ಕಾರ್ಯಕ್ರಮಗಳನ್ನ ತಂದಿರುವುದು ಎಲ್ಲಾ ಗ್ರಾಮೀಣ ಭಾಗದ ಕಲಾವಿದರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಿ ರಾಜಣ್ಣ ,ಕೆ ಪಿ ಪಂಪಾಪತಿ ಸೇರಿದಂತೆ ಹಲವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ರಾಮದಾಸ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚೀಳಂಗಿ ಹನುಮಂತಪ್ಪ, ಡಾ, ರಂಗಪ್ಪ, ಗೌಡ್ರು ತಿಪ್ಪೇಸ್ವಾಮಿ, ಬಸವ ಕೇಂದ್ರದ ಅಧ್ಯಕ್ಷ ಭೋಗೇಶ್ ಗೌಡ್ರು, ಕಾರ್ಯಕ್ರಮದಲ್ಲಿ ಜಾನಪದ ಕಲಾ ತಂಡಗಳಾದ ಉರುಮೆ, ಕಹಳೆ, ತಮಟೆ ವಾದನ, ನಾಸಿಕ್ ಡೋಲ್ ಜಾನಪದ ಗೀತೆ ವಚನ ಸಂಗೀತ ಸುಗಮ ಸಂಗೀತ ಹಲವಾರು ಕಲಾ ತಂಡಗಳು ಭಾಗವಹಿಸಿದ್ದವು.
ಸಂಗೀತ ಶಿಕ್ಷಕ ಕೆ ಓ ಶಿವಣ್ಣ, ಕಲಾವಿದರಾದ ಎಂ ನುಂಕೇಶ್, ಮನೋಜ್ ಕುಮಾರ್, ಗುರುಶಂಕರಪ್ಪ, ಚೀಳಂಗಿ ಶಿವಕುಮಾರ ಸೇರಿದಂತೆ ಹಲವಾರು ಕಲಾವಿದರು, ಗ್ರಾಮದ ಮುಖಂಡರು ಭಾಗವಹಿಸಿದ್ದರು. ಶಿಕ್ಷಕ,ಗಾಯಕ ಅಮುಕುಂದಿ ಗಂಗಾಧರ ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು
