🚨ಬ್ರೇಕಿಂಗ್ ನ್ಯೂಸ್🚨ಬ್ರೇಕಿಂಗ್ ನ್ಯೂಸ್🚨 🚨ಎಕ್ಸ್‌ಕ್ಲೂಸಿವ್ ರಾಜ್ಯ ಮಟ್ಟದ, ಮಹಾ ತನಿಖಾ ವರದಿ🚨 💥📢ಕೂಡಲೇ ಸಿಬಿಐ, ಎಸ್.ಐ.ಟಿ ತನಿಖೆಗೆ ಆದೇಶಿಸುವಂತೆ ರಾಜ್ಯ ಸರ್ಕಾರಕ್ಕೆ ‘ರಾಮನಗರ ನ್ಯೂಸ್’ ದಿನ ಪತ್ರಿಕೆ ಮುಖಾ ಮುಖಿ ಸವಾಲು..!💥
ಉಡುಪಿ/ಬೆಂಗಳೂರು ಜೂ.22

ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಇತಿಹಾಸದಲ್ಲೇ ಅತ್ಯಂತ ಕರಾಳ ಹಾಗೂ ಇಡೀ ಆಡಳಿತ ವ್ಯವಸ್ಥೆಯನ್ನೇ ನಡುಗಿಸುವ ಮಹಾ ಹಗರಣವೊಂದನ್ನು “ರಾಮನಗರ ನ್ಯೂಸ್” ದಿನಪತ್ರಿಕೆ ಇದೀಗ ಅಧಿಕೃತ ದಾಖಲೆ ಸಮೇತ ರಾಜ್ಯ ಮಟ್ಟದಲ್ಲಿ ಜಗಜ್ಜಾಹೀರು ಗೊಳಿಸಿದೆ..!
ಉಡುಪಿ ಜಿಲ್ಲೆಯ ಹಿಂದಿನ ಪ್ರಭಾರ ಲೋಕಾಯುಕ್ತ ಡಿವೈಎಸ್‌ಪಿ “ಮಂಜುನಾಥ್” ಇವರ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಸಾಲು ಸಾಲು ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಗಳು (ಟ್ರ್ಯಾಪ್) ಸಾರ್ವಜನಿಕರ ಹಿತ ದೃಷ್ಟಿಯಿಂದ ನಡೆದಿದ್ದಲ್ಲ, ಬದಲಿಗೆ ಇಲಾಖೆಯೊಳಗೇ ಕುಳಿತು ಹೆಣೆದಿದ್ದ ‘ನಕಲಿ ಟ್ರ್ಯಾಪ್’ ನಾಟಕಗಳು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ! ದಕ್ಷ, ಪ್ರಾಮಾಣಿಕ ಹಾಗೂ ನಿಷ್ಠಾವಂತ ಅಧಿಕಾರಿಗಳನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿ, ಸಂಚು ರೂಪಿಸಿ ಸಿಲುಕಿಸಲು ಸೃಷ್ಟಿಸಲಾದ ಈ ಕಪೋಲ ಕಲ್ಪಿತ ಕಥೆಗಳ ಅಸಲಿ ದಾಖಲೆಗಳು ಈಗ ಪತ್ರಿಕೆಯ ಕೈಸೇರಿವೆ.
ಮಾಜಿ ಪ್ರಭಾರ ಡಿವೈಎಸ್‌ಪಿ ಮಂಜುನಾಥನ ಈ ಇಡೀ ಕರ್ಮಕಾಂಡವನ್ನು ಇದೀಗ ಒಂದೂ ಅಕ್ಷರ ಬಿಡದಂತೆ ದಾಖಲೆ ಸಮೇತ ಸಾರ್ವಜನಿಕವಾಗಿ ಬಟ್ಟಂ ಬಯಲು ಮಾಡಲಾಗುತ್ತಿದೆ!
🚨 ಹೆಡ್‌ಲೈನ್ ಮೇಕಿಂಗ್ ಸಾಕ್ಷ್ಯ:-
ಒಂದೇ ಸಬೂಬು, ಒಂದೇ ಮಾದರಿಯ ಸುಳ್ಳು..!
“ರಾಮನಗರ ನ್ಯೂಸ್” ದಿನ ಪತ್ರಿಕೆಯ ವಿಶೇಷ ತನಿಖಾ ತಂಡವು ಉಡುಪಿ ಲೋಕಾಯುಕ್ತ ವ್ಯಾಪ್ತಿಯಲ್ಲಿ ನಡೆದ ವಿವಿಧ ಟ್ರ್ಯಾಪ್‌ಗಳ ಅಧಿಕೃತ ಮಹಜರು (Spot Mahazar) ವರದಿಗಳನ್ನು ಎಳೆ ಎಳೆಯಾಗಿ ಜಾಲಾಡಿದಾಗ, ಇಡೀ ರಾಜ್ಯವೇ ಮೂಗಿನ ಮೇಲೆ ಬೆರಳಿಡುವಂತಹ ಅಸಲಿ ಸತ್ಯ ಹೊರ ಬಿದ್ದಿದೆ. ಬೇರೆ ಬೇರೆ ಪ್ರಕರಣಗಳ ಮಹಜರು ವರದಿಗಳಲ್ಲಿ ಅಕ್ಷರಶಃ ಒಂದೇ ರೀತಿಯ ಲಿಖಿತ ಉತ್ತರಗಳನ್ನು ದಾಖಲಿಸಲಾಗಿದೆ!
📂 ಪ್ರಕರಣ 1:-
ಗಂಗೊಳ್ಳಿ ಪಿಡಿಒ ನಕಲಿ ಟ್ರ್ಯಾಪ್ ಪ್ರಕರಣ.ಉಡುಪಿ ಜಿಲ್ಲೆಯ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿಡಿಓ ಅವರನ್ನು ಟ್ರ್ಯಾಪ್ ಮಾಡುವ ಸಂದರ್ಭದಲ್ಲಿ, ಕಾರ್ಯಾಚರಣೆಯ ನಂತರ ಪಿರ್ಯಾದಿದಾರರು ತನಿಖಾಧಿಕಾರಿಯ ಮುಂದೆ ಹಾಜರು ಪಡಿಸಿದ ವಾಯ್ಸ್ ರೆಕಾರ್ಡರ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಯಾವುದೇ ಸಂಭಾಷಣೆಗಳೂ ರೆಕಾರ್ಡ್ ಆಗಿರುವುದಿಲ್ಲ!
ಅದಕ್ಕೆ ಪಿರ್ಯಾದಿದಾರರು ಮಹಜರಿನಲ್ಲಿ ನೀಡಿದ ಸಬೂಬು ಹೀಗಿದೆ:-
“ಕಚೇರಿಗೆ ಹೋಗುವ ಸಮಯದ ಗಡಿ ಬಿಡಿಯಲ್ಲಿ ವಾಯ್ಸ್ ರೆಕಾರ್ಡರ್ ಅನ್ನು ಆನ್ ಮಾಡಲು ಮರೆತು ಹೋಗಿದೆ..!”
📂 ಪ್ರಕರಣ 2:-
ಬೈಂದೂರು ಉಪ ವಲಯ ಅರಣ್ಯಾಧಿಕಾರಿ ಟ್ರ್ಯಾಪ್ ಪ್ರಕರಣ.
ದಿನಾಂಕ:-
21/06/2024
ಸ್ಥಳ:-
ವಲಯ ಅರಣ್ಯಾಧಿಕಾರಿಗಳ ಕಚೇರಿ, ಬೈಂದೂರು
ಬಲಿಯಾದ ಅಧಿಕಾರಿ:-
ಬಂಗಾರಪ್ಪ ಗಣಪತಿ ಆಚಾರಿ (ಉಪ ವಲಯ ಅರಣ್ಯಾಧಿಕಾರಿ) ಇವರನ್ನು ಟ್ರ್ಯಾಪ್ ಮಾಡಿದ ಸಂದರ್ಭದ ಮಹಜರು ವರದಿಯಲ್ಲೂ ಸಹ, ಪಿರ್ಯಾದಿದಾರರು ತನಿಖಾಧಿಕಾರಿಗಳ ಮುಂದೆ ತನಗೆ ನೀಡಿದ್ದ ವಾಯ್ಸ್ ರೆಕಾರ್ಡರ್ ಹಾಜರು ಪಡಿಸಿ,
ತದ್ರೂಪು ಹೇಳಿಕೆ ನೀಡಿದ್ದಾರೆ:-
“ತಾನು ಕಚೇರಿಯ ಒಳಗಡೆ ಹೋಗುವಾಗ ಗಡಿ ಬಿಡಿಯಲ್ಲಿ ವಾಯ್ಸ್ ರೆಕಾರ್ಡ್ ಅನ್ನು ಆನ್ ಮಾಡಿ ಕೊಡಲು ಮರೆತಿದ್ದು, ವಾಯ್ಸ್ ರೆಕಾರ್ಡರ್ ಮಾಡಿ ಕೊಂಡಿರುವುದಿಲ್ಲವಾಗಿ ತಿಳಿಸಿರುತ್ತಾರೆ.
”🤔 ಇಡೀ ರಾಜ್ಯವನ್ನು ಕಾಡುತ್ತಿರುವ ತೀಕ್ಷ್ಣ ಪ್ರಶ್ನೆಗಳು:-

ವಿಭಿನ್ನ ದಿನಾಂಕಗಳಲ್ಲಿ, ಬೇರೆ ಬೇರೆ ಕಚೇರಿಗಳಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಇಬ್ಬರೂ ಪಿರ್ಯಾದಿದಾರರಿಗೆ ಒಂದೇ ರೀತಿಯ “ಗಡಿಬಿಡಿ” ಉಂಟಾಗಲು ಹೇಗೆ ಸಾಧ್ಯ? ಇಬ್ಬರೂ ಪಿರ್ಯಾದಿದಾರರು ಮಹಜರು ವರದಿಯಲ್ಲಿ ಒಂದೇ ರೀತಿಯ ಅಕ್ಷರಗಳನ್ನು ಬಳಸಿ ಸ್ಪಷ್ಟನೆ ನೀಡಿರುವುದು ಕೇವಲ ಕಾಕತಾಳೀಯವೇ? ಖಂಡಿತಾ ಅಲ್ಲ! ಇದು ಅಂದಿನ ಪ್ರಭಾರ ಡಿವೈಎಸ್‌ಪಿ ಮಂಜುನಾಥ್ ನೇತೃತ್ವದ ತಂಡವೇ ಕಚೇರಿಯಲ್ಲಿ ಕುಳಿತು ಸೃಷ್ಟಿಸಿದ “ಕಾಪಿ-ಪೇಸ್ಟ್” ಕಥೆ ಎಂಬುದಕ್ಕೆ ಇದಕ್ಕಿಂತ ಜೀವಂತ ಸಾಕ್ಷಿ ಬೇಕಾಗಿಲ್ಲ! ಇದು ಇಡೀ ಲೋಕಾಯುಕ್ತ ಸಂಸ್ಥೆಯ ವಿಶ್ವಾಸಾರ್ಹತೆಗೇ ಅಂಟಿದ ಕಪ್ಪು ಚುಕ್ಕೆಯಾಗಿದೆ.
⚖️ ಕಡ್ಡಾಯ ನಿಯಮ ಉಲ್ಲಂಘನೆ:-
ಲಂಚದ ಡಿಮ್ಯಾಂಡ್ ರೆಕಾರ್ಡ್ ಆಗದಿದ್ದರೆ ಅದು ‘ಫೇಕ್ ಟ್ರ್ಯಾಪ್’..! ಕಾನೂನಿನ ಪರಮೋಚ್ಚ ನಿಯಮಗಳ ಪ್ರಕಾರ, ಲೋಕಾಯುಕ್ತರು ಒದಗಿಸುವ ಅಧಿಕೃತ ಡಿವೈಸ್ (Voice Recorder) ನಲ್ಲಿ ಆರೋಪಿತ ಅಧಿಕಾರಿಯು ನಡೆಸುವ “ಲಂಚದ ಬೇಡಿಕೆ (Demand for Bribe) ಕಡ್ಡಾಯವಾಗಿ (Mandatory) ಧ್ವನಿ ಮುದ್ರಣವಾಗಲೇ ಬೇಕು.”
ಇದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಇಡೀ ಟ್ರ್ಯಾಪ್ ಪ್ರಕ್ರಿಯೆ ಕಾನೂನು ಬದ್ಧ ಎನಿಸಿ ಕೊಳ್ಳಲು ಇರ ಬೇಕಾದ ಪ್ರಾಥಮಿಕ ನಿಯಮ. ಆದರೆ, ಉಡುಪಿಯ ಈ ಎರಡೂ ಮಹಜರ್ ವರದಿಗಳನ್ನು ಗಮನಿಸಿದರೆ, ಲೋಕಾಯುಕ್ತರು ನೀಡಿದ ಡಿವೈಸ್‌ನಲ್ಲಿ ಯಾವುದೇ ವಾಯ್ಸ್ ರೆಕಾರ್ಡ್ ಆಗಿಲ್ಲ! ಲಂಚದ ಡಿಮ್ಯಾಂಡ್ ಅಧಿಕೃತ ಡಿವೈಸ್‌ನಲ್ಲಿ ಸಾಬೀತಾಗದಿರುವುದು ಇವೆಲ್ಲವೂ ಇಲಾಖೆಯೊಳಗೇ ಸೃಷ್ಟಿಸಲಾದ ಸಂಪೂರ್ಣ “ಫೇಕ್ ಟ್ರ್ಯಾಪ್” (Fake Trap)” ಎನ್ನುವುದನ್ನು ಕಾನೂನಾತ್ಮಕವಾಗಿ ಎತ್ತಿ ತೋರಿಸುತ್ತದೆ.
📋 ಮಾಹಿತಿ ಹಕ್ಕು (RTI) ತಂದ ಆಘಾತ:-
ಮಾರ್ಗಸೂಚಿಗಳೇ ಇಲ್ಲದ ಕಚೇರಿ..! ಈ ಹಗರಣದ ಬೆನ್ನತ್ತಿದ “ರಾಮನಗರ ನ್ಯೂಸ್” ಪತ್ರಿಕೆಯು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಉಡುಪಿ ಲೋಕಾಯುಕ್ತ ಕಚೇರಿಯಲ್ಲಿ ಪಾರದರ್ಶಕತೆ ಮತ್ತು ತನಿಖಾ ಕ್ರಮಗಳಿಗಾಗಿ ಬಳಸಲಾಗುವ “ಟ್ರ್ಯಾಪ್ ಮಾರ್ಗಸೂಚಿ (Trap Guidelines)” ಪ್ರತಿಗಳನ್ನು ನೀಡುವಂತೆ ಅಧಿಕೃತವಾಗಿ ಕೋರಿತ್ತು. ಆದರೆ ಅಲ್ಲಿಂದ ಬಂದ ಉತ್ತರ ಇಡೀ ಆಡಳಿತ ವ್ಯವಸ್ಥೆಯೇ ನಾಚಿಕೆ ಯಿಂದ ತಲೆ ತಗ್ಗಿಸುವಂತಿದೆ…!
ಉಡುಪಿ ಲೋಕಾಯುಕ್ತ ಕಚೇರಿಯಲ್ಲಿ ಯಾವುದೇ ಅಧಿಕೃತ ಟ್ರ್ಯಾಪ್ ಮಾರ್ಗಸೂಚಿಗಳೇ ಲಭ್ಯವಿಲ್ಲ! ಯಾವುದೇ ಲಿಖಿತ ಗೈಡ್ ಲೈನ್ಸ್ ಅಥವಾ ನಿಗದಿತ ಮಾರ್ಗಸೂಚಿಗಳೇ ಇಲ್ಲದೆ,
ಈ ಉಡುಪಿ ಲೋಕಾಯುಕ್ತ ಪೊಲೀಸರು ಯಾವ ಮಾನದಂಡ ಹಾಗೂ ಕಾನೂನಿನ ಅಡಿಯಲ್ಲಿ ಅಧಿಕಾರಿಗಳನ್ನು ಟ್ರ್ಯಾಪ್ ಮಾಡುತ್ತಿದ್ದಾರೆ…? ಬಲೆ ಹೆಣೆಯುತ್ತಿದ್ದಾರೆ…? ಎನ್ನುವುದು ಸದ್ಯ ಇಡೀ ರಾಜ್ಯದ ಸಾರ್ವಜನಿಕ ವಲಯದಲ್ಲಿ ದೊಡ್ಡ “ಯಕ್ಷಪ್ರಶ್ನೆ” ಯಾಗಿ ಕಾಡುತ್ತಿದೆ.
🕵️ ಉಡುಪಿಯಲ್ಲಿ ಸದ್ದು ಮಾಡಲಿದೆ ‘ರಾಮನಗರ ನ್ಯೂಸ್’ ಮುಂದಿನ ಸರಣಿ…!
ಉಡುಪಿಯ ಮಾಜಿ ಪ್ರಭಾರ ಲೋಕಾಯುಕ್ತ ಡಿವೈಎಸ್‌ಪಿ ಮಂಜುನಾಥ್ ಅವರ ಅವಧಿಯಲ್ಲಿ ನಡೆದ ಪ್ರತಿಯೊಂದು ಟ್ರ್ಯಾಪ್ ಪ್ರಕರಣಗಳ ಅಸಲಿ ಗುಟ್ಟನ್ನು ಮತ್ತು ಆತನ ಇಡೀ ಕರ್ಮಕಾಂಡವನ್ನು ಸದ್ಯದಲ್ಲೇ ರಟ್ಟು ಮಾಡಲು “ರಾಮನಗರ ನ್ಯೂಸ್” ಸಂಪೂರ್ಣ ಸಜ್ಜಾಗಿದೆ.
ಈಗಾಗಲೇ ಅರಣ್ಯಾಧಿಕಾರಿಗಳ ಪ್ರಕರಣ ಸೇರಿದಂತೆ ಇಲಾಖೆಯು ಹೆಣೆದಿದ್ದ ಕಟ್ಟು ಕಥೆಗಳ ಅಧಿಕೃತ ದಾಖಲೆಗಳನ್ನು ಪತ್ರಿಕೆಯ ಪ್ರತಿ ನಿಧಿಗಳು ವಶ ಪಡಿಸಿ ಕೊಂಡಿದ್ದಾರೆ. ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಮುಂದಿನ ದಿನಗಳಲ್ಲಿ ಈ ಮಹಾ ಜಾಲವನ್ನು ಸರಣಿ ವರದಿಗಳ ಮೂಲಕ ಪತ್ರಿಕೆಯು ಬಯಲಿ ಗೆಳೆಯಲಿದೆ.
⚖️ ರಾಜ್ಯ ಸರ್ಕಾರಕ್ಕೆ ಖಡಕ್ ಆಗ್ರಹ:-

ಕೂಡಲೇ ಸಿಬಿಐ ಹಾಗೂ ಎಸ್‌ಐಟಿ ತನಿಖೆಗೆ ಆದೇಶಿಸಿ…! ಈ ಮಹಾ ಹಗರಣವು ಇಡೀ ರಾಜ್ಯದ ಆಡಳಿತ ಯಂತ್ರದ ಪಾರದರ್ಶಕತೆಯನ್ನೇ ಅಲುಗಾಡಿಸಿರುವುದರಿಂದ,
ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳ ಬೇಕಾಗಿದೆ:-
1. 📌 ಉನ್ನತ ಮಟ್ಟದ ತನಿಖೆ:-
ಈ ಹಗರಣದ ಸತ್ಯಾ ಸತ್ಯತೆಯನ್ನು ಹೊರತರಲು ರಾಜ್ಯ ಸರ್ಕಾರ ಕೂಡಲೇ ಇದನ್ನು “ಸಿಬಿಐ (CBI)” ಅಥವಾ “ವಿಶೇಷ ತನಿಖಾ ದಳ (SIT)” ತನಿಖೆಗೆ ಒಪ್ಪಿಸ ಬೇಕು.
2. 📌 ಮಂಜುನಾಥ್ ಅವಧಿಯ ಕೇಸ್‌ಗಳ ಮರು ತನಿಖೆ:-
ಮಾಜಿ ಪ್ರಭಾರ ಡಿವೈಎಸ್‌ಪಿ ಮಂಜುನಾಥ್ ಅವರ ಅಧಿಕಾರಾವಧಿಯಲ್ಲಿ ನಡೆದ ಎಲ್ಲಾ ಟ್ರ್ಯಾಪ್ ಪ್ರಕರಣಗಳ ಸಂಪೂರ್ಣ ಹಾಗೂ ಕಾನೂನಾತ್ಮಕ ಮರುಪರಿಶೀಲನೆಯಾಗಬೇಕು.
3. 📌 ನಿಷ್ಠಾವಂತರಿಗೆ ನ್ಯಾಯ ಸಿಗಲಿ:-
ನಕಲಿ ಕಥೆಗಳಿಂದಾಗಿ ಸಮಾಜದಲ್ಲಿ ತಲೆ ತಗ್ಗಿಸುವಂತಾಗಿರುವ, ತೇಜೋವಧೆ ಗೊಳಗಾಗಿರುವ ನಿಷ್ಠಾವಂತ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ತಕ್ಷಣವೇ ನ್ಯಾಯ ಸಿಗಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸ ಬೇಕು.
📰 ಸಂವಿಧಾನಾತ್ಮಕ ಹಾದಿಯಲ್ಲಿ ‘ರಾಮನಗರ ನ್ಯೂಸ್’ ಧರ್ಮ ಯುದ್ಧ:-
ಯಾರದೇ ಒತ್ತಡ, ಪ್ರಭಾವ ಹಾಗೂ ಬೆದರಿಕೆಗಳಿಗೆ ಮಣಿಯದೆ ಸಮಾಜದಲ್ಲಿನ ಇಂತಹ ಕರಾಳ ಸತ್ಯಗಳನ್ನು ಜಗಜ್ಜಾಹೀರು ಗೊಳಿಸುವುದು ಮಾಧ್ಯಮ ರಂಗದ ಪರಮ ಕರ್ತವ್ಯ. “ರಾಮನಗರ ನ್ಯೂಸ್” ದಿನ ಪತ್ರಿಕೆಯು ತನ್ನ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ನೆಲೆಯನ್ನು ಎತ್ತಿ ಹಿಡಿಯುತ್ತಾ, ಈ ಸತ್ಯದ ಶೋಧನೆಯನ್ನು ತಾರ್ಕಿಕ ಅಂತ್ಯದ ವರೆಗೆ ಕೊಂಡೊಯ್ಯಲಿದೆ.
ನಕಲಿ ಟ್ರ್ಯಾಪ್‌ಗಳ ಸೂತ್ರಧಾರರ ಅಸಲಿ ಮುಖವಾಡ ಕಳಚುವ ವರೆಗೂ ನಮ್ಮ ಈ ತನಿಖಾ ವರದಿ ನಿಲ್ಲುವುದಿಲ್ಲ!:-
ಸತ್ಯದ ಪರ ಧ್ವನಿ, ರಾಮನಗರ ನ್ಯೂಸ್ ವಿಶೇಷ ರಾಜ್ಯ ಮಟ್ಟದ ತನಿಖಾ ವರದಿ.
ವರದಿ:ಆರತಿ.ಗಿಳಿಯಾರು.ಉಪ ಸಂಪಾದಕರು, ರಾಮನಗರ ನ್ಯೂಸ್ ದಿನ ಪತ್ರಿಕೆ, ಉಡುಪಿ ಜಿಲ್ಲೆ.
