ರೈತರಿಗೆ ಬೆಳೆ ವಿಮೆ, ಬೆಳೆ ನಷ್ಟದಿಂದ – ಆರ್ಥಿಕ ಭದ್ರತೆ ಬೆಳೆ ವಿಮೆ ಅತ್ಯಂತ ಅಗತ್ಯತೆ ಯಾಗಿದೆ.
ಆಲಮೇಲ ಜೂ.22

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿರುವ ಸಂದರ್ಭದಲ್ಲಿ ರೈತರು ತಮ್ಮ ಬೆಳೆಗಳನ್ನು ಪ್ರಕೃತಿ ವಿಕೋಪಗಳಿಂದ ರಕ್ಷಿಸಿ ಕೊಳ್ಳಲು ಬೆಳೆ ವಿಮೆ ಮಾಡಿಸಿ ಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜಾರಿಯಲ್ಲಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ಕೊಳ್ಳುಬಹುವುದಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಅನಿಯಮಿತ ಮಳೆ. ಬರ. ಗಾಳಿ ಮಳೆ. ಪ್ರವಾಹ. ಕೀಟ ಹಾಗೂ ರೋಗಬಾಧೆ ಮುಂತಾದ ಕಾರಣಗಳಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಬೆಳೆ ವಿಮೆ ರೈತರಿಗೆ ಆರ್ಥಿಕ ನೆರವು ಒದಗಿಸಿ ಕೃಷಿಯಲ್ಲಿ ಸ್ಥಿರತೆ ಕಾಪಾಡಲು ಸಹಕಾರಿಯಾಗುತ್ತದೆ.
2026-27 ನೇ. ಸಾಲಿನ ಮುಂಗಾರು ಹಂಗಾಮಿಗೆ ಆಲಮೇಲ ತಾಲ್ಲೂಕಿನಲ್ಲಿ ತೊಗರಿ. ಹತ್ತಿ. ಈರುಳ್ಳಿ. ಕೆಂಪು ಮೆಣಸಿನಕಾಯಿ ಹಾಗೂ ಮುಸುಕಿನ ಜೋಳವನ್ನು ಅಧಿಸೂಚಿತ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಒಳ ಪಡಿಸಲಾಗಿದೆ.
ಬೆಳೆ ಸಾಲ ಪಡೆದ ಹಾಗೂ ಪಡೆಯದ ಎಲ್ಲಾ ರೈತರು ಯೋಜನೆಯ ಸೌಲಭ್ಯ ಪಡೆಯಬಹುದು. ನಮ್ಮ ಜಿಲ್ಲೆಗೆ ಎಸ್.ಬಿ.ಆಯ್. ಜನರಲ್ ಇನ್ಸೂರನ್ಸ್ ಕಂಪನಿ ಆಯ್ಕೆಯಾಗಿದೆ. ತೊಗರಿ. ಹಾಗೂ ನೀರಾವರಿ ಹತ್ತಿ ಬೆಳೆಗೆ ವಿಮೆ ಕಟ್ಟಲು 31/7/2026 ರಂದು ಕೊನೆಯ ದಿನವಾಗಿದೆ.
ಅದರಂತೆ ಮಳೆಯಾಶ್ರಿತ ಹತ್ತಿಗೆ. 14/08/2026 ರಂದು ಕೊನೆಯ ದಿನವಾಗಿದೆ. ಬೆಳೆ ವಿಮೆ ನೊಂದಣಿಗೆ ರೈತರು ಫಾರ್ಮರ್ ಐಡಿ (FID). ಆಧಾರ್ ಕಾರ್ಡ್. ಬ್ಯಾಂಕ್ ಖಾತೆ ವಿವರ ಹಾಗೂ ಜಮೀನಿನ ದಾಖಲೆಗಳನ್ನು ಹೊಂದಿರ ಬೇಕು.
ರೈತರ ಬ್ಯಾಂಕ್ ಖಾತೆಯು (NPCI) ಹಾಗೂ ಆಧಾರ್ ಜೋಡಣೆ ಯಾಗಿರುವುದು ಕಡ್ಡಾಯವಾಗಿದೆ. ವಿಮೆ ಮಾಡಿಸಿದ ಬೆಳೆಗಳಿಗೆ ಪ್ರಕೃತಿ ವಿಕೋಪ ಅಥವಾ ಇತರ ಕಾರಣಗಳಿಂದ ಹಾನಿಯಾದಲ್ಲಿ ರೈತರು 72 ಗಂಟೆಗಳ ಒಳಗಾಗಿ ಕೃಷಿ ಇಲಾಖೆ ಬ್ಯಾಂಕ್. ಅಥವಾ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕು. ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿದರೆ ಪರಿಹಾರ ಪಡೆಯಲು ಅನುಕೂಲವಾಗುತ್ತದೆ.
ಆದ್ದರಿಂದ ಆಲಮೇಲ ತಾಲ್ಲೂಕಿನ ರೈತರು ಬೆಳೆ ವಿಮೆ ಯೋಜನೆಯ ಸದುಪಯೋಗ ಪಡೆದು ತಮ್ಮ ಬೆಳೆ ಹಾಗೂ ಆದಾಯವನ್ನು ಸುರಕ್ಷಿತ ಗೊಳಿಸಿ ಕೊಳ್ಳುವಂತೆ ಅಲಮೇಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾದ ಅನೀಲದೇವ ದಶವಂತ ಇವರು ನಮ್ಮ ಮಾಡರ್ನ್ ಸುದ್ದಿಗೆ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಹಿರೇಮಠ ಆಲಮೇಲ
