ಸಚಿವ ಕಾಶಪ್ಪನವರ ರಾಜೀನಾಮೆಗೆ – ಸುರೇಶ ಚಲವಾದಿ ಆಗ್ರಹ.

ಗದಗ ಆ.15

ಅಸಂಬದ್ದ ಪದ ಬಳಕೆ ಸಚಿವ ವಿಜಯಾನಂದ ಕಾಶಪ್ಪನವರ ರಾಜೀನಾಮೆ ನೀಡುವಂತೆ ಭಾರತೀಯ ಜನತಾ ಪಕ್ಷ ಎಸ್‌.ಸಿ ಮೋರ್ಚಾದ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಸುರೇಶ.ವಾಯ್ ಚಲವಾದಿ ಯವರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದ ನೂತನ ಸಂಪುಟ ಧರ್ಜೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಯಾವದೋ ವಿಷಯಕ್ಕೆ ಸಂಬಂಧಿಸಿ ಮಾತನಾಡುವ ಸಂದರ್ಭದಲ್ಲಿ “ಹೊಲಗೇರಿ” ಎಂಬ ಅಸಂಬದ್ದವಾದ ಪದ ಬಳಕೆ ಮಾಡಿ ರಾಜ್ಯದ ಶೋಷಿತ ಸಮುದಾಯವಾದ ಚಲವಾದಿ ಸಮುದಾಯಕ್ಕೆ ಅಪಮಾನ ವೆಸಗಿರುತ್ತಾರೆ. ರಾಜ್ಯದ ಸಂವಿಧಾನಬದ್ದ ಹುದ್ದೆಯಲ್ಲಿದ್ದು ಈ ರೀತಿ ಬೇಜವಾಬ್ದಾರಿ ಅಸಂವಿಧಾನಿಕ ಪದ ಬಳಕೆ ಮಾಡಿರುವದು ಅವರ ಅಂತರಾತ್ಮದೊಳಗಿನ ದಲಿತರ ಬಗೆಗಿನ ಕೀಳು ಮನಸ್ಥಿತಿಯನ್ನ ಪ್ರದರ್ಶಿಸುತ್ತದೆ.

ಸಂವಿಧಾನದ ಪ್ರತಿಯನ್ನ ಕೈಲಿಡಿದುಕೊಂಡು ತಿರುಗಾಡಿ ಚುನಾವಣಾ ಸಂದರ್ಭದಲ್ಲಿ ದಲಿತರ ಕೇರಿಗಳಿಗೆ ಭೇಟಿ ನೀಡಿ ದಲಿತರು ನಮ್ಮ ಸಹೋದರರೆಂಬ ಹಸಿ ಸುಳ್ಳುಗಳನ್ನ ಹೇಳಿ ದಲಿತರ ಮತ ಪಡೆದ ಇವರು ಅಧಿಕಾರ ಸಿಕ್ಕ ನಂತರ ದಲಿತರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವದಷ್ಟೇ ಅಲ್ಲದೆ ಸಾಮಾಜಿಕವಾಗಿ ದಲಿತರ ಬಗ್ಗೆ ಕೀಳು ಮಟ್ಟದ ಪದ ಬಳಕೆ ಮಾಡಿ ದಲಿತರ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಇವರನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ಅವರು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಮತ್ತು ಸಮಾಜ ಕಲ್ಯಾ ಇಲಾಖೆಯ ಆಯುಕ್ತರು ಇವರ ಮೇಲೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಧೌರ್ಜನ್ಯ ಪ್ರತಿಬಂಧಕ ಕಾಯ್ದೆ 1989 ರ ಸೆಕ್ಷನ್ (3 )(1)(r) ರಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ನಾಲಿಗೆ ಮತ್ತು ಬುದ್ದಿಗೆ ಒಂದಕ್ಕೊಂದು ಲಿಂಕಿರದ ರೀತಿಯಲ್ಲಿ ಸಮಾಜದ ಸ್ವಾಸ್ಥ್ಯ ಹದಗೆಡುವಂತಹ ಮಾಧ್ಯಮದ ಮುಂದೆ ದಿನಕ್ಕೊಂದು ಅವಹೇಳನಕಾರಿ ಹೇಳಿಕೆ ನೀಡುತ್ತಾ ಸದಾ ಸುದ್ದಿಯಲ್ಲಿರುವ ಇಂತಹವರನ್ನು ಸಂಪುಟದಲ್ಲಿಟ್ಟು ಕೊಂಡು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ತಿಲಾಂಜಲಿ ಇಡಲಾಗಿದೆ. ಕಳೆದ ಆರೇಳು ದಶಕಗಳ ಕಾಲ ದಲಿತರ ಹೆಸರಿನಲ್ಲಿ ಮತ ಪಡೆದ ಕಾಂಗ್ರೆಸ್ ದಲಿತರ ಅಭಿವೃದ್ಧಿಯಲ್ಲಿ ಮಾತ್ರ ಶೂನ್ಯ ಸಾಧನೆ ಸಾಧಿಸಿದೆ.

ಕಳೆದ 3 ವರ್ಷಗಳಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಲ್ಯಾಣಗಳಿಗಿರುವ ಅದೆಷ್ಟೋ ಯೋಜನೆಗಳು ಅನುದಾನ ಕೊರತೆಯಿಂದ ಸೊರಗಿ ಹೋಗಿವೆ.ಡಾ, ಬಿ.ಆರ್ ಅಂಬೇಡ್ಕರ್ ಅಭಿವ್ರದ್ದಿ ನಿಗಮ. ಆದಿ ಜಾಂಭವ ಅಭಿವೃದ್ಧಿ ನಿಗಮ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಹಲವಾರು ನಿಗಮಗಳಲ್ಲಿ ಮತ ಕ್ಷೇತ್ರವಾರು ಸಾಕಷ್ಟು ಟಾರ್ಗೆಟ್‌ಗಳನ್ನ ಕಡಿಮೆ ಗೊಳಿಸಿ ದಲಿತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ.

ಭೂ ಒಡೆತನ ಯೋಜನೆಯಡಿಯಲ್ಲಿ ಸಮಾರು ವರ್ಷಗಳ ಕಡತಗಳು ವಿಲೇವಾರಿಯಾಗದೇ ಹಾಗೇ ಉಳಿದಿವೆ.ಇದರಿಂದಾಗಿ ದಲಿತರು ಭೂಮಿ ಒಡೆಯರಾಗದೇ ಉಳ್ಳವರ ಜಮೀನುಗಳಲ್ಲಿ ಕೂಲಿ ಕಾರ್ಮಿಕರಾಗಿಯೇ ಉಳಿಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳ ದುಡ್ಡನ್ನು ತಮ್ಮ ಪಂಚ ಗ್ಯಾರಂಟಿಗೆ ಬಳಸಿದ ಕಾಂಗ್ರೆಸ್ ದಲಿತರ ಕೇರಿಗಳ ಅಭಿವೃದ್ಧಿಗೆ ಪುಡಿಗಾಸು ನೀಡದಿರುವದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ಹೊರ ಹಾಕಿದರು.

ಇವುಗಳನ್ನೆಲ್ಲಾ ಮೆಲುಕು ಹಾಕಿದರೆ ಕಾಂಗ್ರೆಸ್ ಅಹಿಂದ ಹೆಸರನ್ನ ನೆಪಗಳಿಗೆ ಬಳಸಿ ಕೊಂಡು ಅಂತರಾಳದ ತಮ್ಮ ಕೀಳು ಮಟ್ಟದ ಜಾತೀಯತೆಯನ್ನು ಪ್ರಯೋಗಿಸಿ ದಲಿತರು ಅಭಿವೃದ್ದಿ ಯಾಗದಂತೆ ತಡೆಯುವುದರಲ್ಲಿ ಯಶಸ್ವಿ ಯಾಗಿದ್ದಾರೆ.

ಇವರ ಕಪಟ ನಾಟಕವನ್ನು ರಾಜ್ಯದ ದಲಿತ ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ ಇವರ ಈ ಕೀಳು ಮಟ್ಟದ ರಾಜ್ಯಕೀಯಕ್ಕೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತಾರೆ ಎಂದು ಎಚ್ಚರಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button