ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 80 ನೇ. ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ – ಪ್ರಾಂಶುಪಾಲರಾದ ಎಮ್.ಎಚ್ ಹಡಪದ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.
ತಳ್ಳಿಕೇರಿ ಆ.15



ಅಮೀನಗಡ ಹೋಬಳಿಯ ಹುನಗುಂದ ತಾಲೂಕಿನ ಸೂಳೇಭಾವಿ/ತಳ್ಳಿಕೇರಿ ಕ್ರಾಸ್ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 80 ನೇ. ಭಾರತ ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣವನ್ನು ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಎಮ್.ಎಚ್ ಹಡಪದ ಅವರು ಧ್ವಜಾರೋಹಣ ನಿರ್ವಹಿಸಿ ಮಾತನಾಡಿದ ಅವರು ಈ ಭಾರತ ದೇಶದ ಸದೃಢವಾದ ಸಮಾಜವನ್ನು ಕಟ್ಟುವಲ್ಲಿ ನಿಮ್ಮೆಲ್ಲರ ಪಾತ್ರ ಬಹಳ ಮುಖ್ಯವಾಗಿದೆ.

ಈ ದೇಶಕ್ಕೆ 1947 ರಲ್ಲಿ ಭಾರತ ಸ್ವತಂತ್ರವಾದಾಗ ಶೇಖಡಾ 90 ರಷ್ಟು ಮಕ್ಕಳಿಗೆ ಶಿಕ್ಷಣ ದೊರೆತ್ತಿದಿಲ್ಲ ಆಗ ಹಗಲು ರಾತ್ರಿ ಅನಕ್ಷರಸ್ಥ ಎಲ್ಲಾ ವಯಸ್ಕರಲ್ಲಿ ಶಿಕ್ಷಣದ ಕ್ರಾಂತಿಯನ್ನು ಪ್ರಾರಂಭ ಮಾಡಿ ಸಾಕ್ಷಾರತೆ ರಾತ್ರಿ ಶಾಲೆ ಪ್ರಾರಂಭವಾದವು ಈಗ ಇಂದಿನ ಪ್ರಸ್ತುತದಲ್ಲಿ ಇಡೀ ಭಾರದ ದೇಶದತ್ತ ಜಗತ್ತು ತಿರುಗಿ ನೀಡುತ್ತಿದೆ, ಭಾರದ ಎಲ್ಲಾ ರಂಗದಲ್ಲಿ ಇಡೀ ವಿಶ್ವದಲ್ಲೇ 3 ನೇ. ಸ್ಥಾನ ಪಡೆದಿದೆ.

ಶಿಕ್ಷಣ ಕ್ಷೇತ್ರದಲ್ಲಿ ಇವತ್ತು ಶೇಖಡಾ ೯೯ ರಷ್ಟು ಶಿಕ್ಷಣ ಎಲ್ಲಾ ಜಾತಿ ಜನಾಂಗದ ಮಕ್ಕಳಿಗೆ ಸಿಕ್ಕಿದೆ. ತಾವು ಈ ಕೂಡಲೇ ಈ ದೇಶದ ಮುಂದಿನ ಆಸ್ತಿ ನಿಮ್ಮಲ್ಲಿ ಯಾರೂ ದೊಡ್ಡ ದೊಡ್ಡ IPS ,IAS ಹಾಗೂ ಇತರೆ ದೊಡ್ಡ ದೊಡ್ಡ ಇಲಾಖೆ, ಅಧಿಕಾರ ವಹಿಸಬಹುದು ಹೀಗಾಗಿ ಈ ದೇಶಕ್ಕೆ ನಿಮ್ಮ ಸೇವೆ ಮುಡುಪಾಗಿರಲಿ ಈ ದಿನದ ಸ್ವತಂತ್ರಕ್ಕಾಗಿ ಲಕ್ಷಾಂತರ ಜನ ಪ್ರಾಣವನ್ನು ಕಳೆದು ಕೊಂಡಿದ್ದಾರೆ.

ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಣೆ ಮಾಡಿಕೊಂಡು ನಾವೆಲ್ಲರೂ ಜಾತಿ, ಧರ್ಮ, ಮತ, ಪಂಗಡ, ಎನ್ನದೆ ಈ ದೇಶದ ಒಂದೆ ತಾಯಿಯ ಮಕ್ಕಳಂತೆ ಸೌಹಾರ್ದ ಯುತವಾಗಿ ಬಾಳಿ ಕಲಿತ ಈ ವಸತಿ ಶಾಲೆಯ ಕೀರ್ತಿಯನ್ನು ಹಾಗೂ ಈ ದೇಶದ ಕೀರ್ತಿಗೆ ಹೆಮ್ಮೆ ತರುವಂತಹ ಮಕ್ಕಳಾಗಿ ತಾವು ಬೆಳೆಯಬೇಕು ಎಂದರು.

ಈ ಸಂದರ್ಭದಲ್ಲಿ ವಸತಿ ಶಾಲೆಯ ಉಪ ಪ್ರಾಂಶುಪಾಲರು ರಾದ ಶ್ರೀ ಮಹಾಂತೇಶ್ ಬಂಡಿ, ಹಿರಿಯ ಶಿಕ್ಷಕಿಯರಾದ ಶ್ರೀಮತಿ ಶಾಹಿದಾ ನದಾಫ್, ರಾಜು ಹಿಪ್ಪರಗಿ, ಪವನ್ ಕುಲಕರ್ಣಿ, ಪ್ರಸನ್, ಸೋಮಲು, ಶಿವಯ್ಯ ಗೊನ್ನಾಗರಮಠ, ಶಿಕ್ಷಕಿಯರಾದ ಕವಿತಾ ಚವ್ಹಾಣ, ಭವಾನಿ ಹಲಗಿ, ವಾರ್ಡನ್ ರಾದ ಶ್ರೀಮತಿ ಪೂರ್ಣಿಮಾ ಕಟ್ಟಿಮನಿ, ಹಾಗೂ ಶಾಲೆಯ ಪ್ರಥಮ ದರ್ಜೆ ಸಹಾಯಕರಾದ ಭಾಷಾಸಾಬ್ ಬನಾಶಿ, ಸೇರಿದಂತೆ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು ಎಂದು ವರದಿಯಾಗಿದೆ.
