ಅಜೀವ ಸದಸ್ಯತ್ವ ಪಡೆಯಲು – ವಿಶೇಷ ಮನವಿ.

ನಾಲವಾರ ಆ.15

ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ನಾಲವಾರ ವಲಯ ಘಟಕದಲ್ಲಿ ಅಜೀವ ಸದಸ್ಯತ್ವ ಪಡೆಯಲು ವಿಶೇಷ ಮನವಿ ನಮ್ಮ ಪ್ರೀತಿಯ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಪದಾಧಿಕಾರಿಗಳು ಸದಸ್ಯರು ಹಾಗೂ ಅಪಾರ ಸಂಖ್ಯೆಯ ಕನ್ನಡ ಅಭಿಮಾನಿಗಳು, ಕನ್ನಡ ಮನಸ್ಸುಗಳೆಲ್ಲರಿಗೂ ವಿಶೇಷ ಮನವಿ 📚

ತಾವು ಆದಷ್ಟು ಬೇಗ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವವನ್ನು ಈ ಪೋನ್ ಸಂಖ್ಯೆ 7829385388 ರವಿ ಮಠದ ಕಿಸಾನ್ ಆಗ್ರೋ ಕೇಂದ್ರ ನಾಲವಾರದಲ್ಲಿ ಆನ್‌ ಲೈನ್ ಮೂಲಕ ಪಡೆದು, ತಮ್ಮ ಸದಸ್ಯತ್ವದ ಗುರುತಿನ ಚೀಟಿಯನ್ನು (ಐಡಿ ಕಾರ್ಡ್) ನ್ನು ಪಡೆಯಿರಿ.

ನಮ್ಮ ಚಿತ್ತಾಪುರ ತಾಲೂಕಿನ ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಪದಾಧಿಕಾರಿಗಳು ಹಾಗೂ ಸದಸ್ಯರು, ಈ ಭಾಗದ ಹೆಚ್ಚಿನ ಸಂಖ್ಯೆಯ ಕನ್ನಡ ಅಭಿಮಾನಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರನ್ನಾಗಿ ಮಾಡುವ ಮೂಲಕ ಸದಸ್ಯತ್ವದ ಸಂಖ್ಯೆಯನ್ನು ಹೆಚ್ಚಿಸೋಣ.

ಕನ್ನಡ ನಾಡು, ಕನ್ನಡ ಭಾಷೆ, ಕನ್ನಡ ಸಾಹಿತ್ಯ ಮತ್ತು ಕನ್ನಡ ಸಂಸ್ಕೃತಿಯ ಸೇವೆ ಮಾಡಲು ನಾವೆಲ್ಲರೂ ಸಂಕಲ್ಪ ಮಾಡೋಣ. ನಮ್ಮ ಕನ್ನಡ ನಾಡಿನ ಜಲ, ನೆಲ, ಭಾಷೆ ಹಾಗೂ ಸಂಸ್ಕೃತಿಗೆ ಯಾವುದೇ ಧಕ್ಕೆ ಬಾರದಂತೆ ಜಾಗೃತ ರಾಗೋಣ.

ಕನ್ನಡ ಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು, ಕನ್ನಡದ ಬೆಳವಣಿಗೆಗಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶ್ರಮಿಸುವ ಸಂಕಲ್ಪವನ್ನು ನಾವೆಲ್ಲರೂ ತೊಡೋಣ.

ಬನ್ನಿ… ಕನ್ನಡಕ್ಕಾಗಿ ಕೈ ಜೋಡಿಸೋಣ.ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಹೆಚ್ಚಿಸೋಣ.ಕನ್ನಡದ ಸೇವೆಗೆ ನಮ್ಮನ್ನು ನಾವು ಅರ್ಪಿಸೋಣ.

ಎಂದು ನಾಲವಾರ ವಲಯ ಘಟಕ ಕಸಾಪ ಅಧ್ಯಕ್ಷರು ಅಂಜುನಾಥ ಎಸ್ ನಾಯ್ಕಲ್ ನಾಲವಾರ. ಮತ್ತು ನಾಲವಾರ ವಲಯ ಘಟಕ ಕಸಾಪ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ಜಂಟಿ ಯಾಗಿ ತಿಳಿಸಿದರು ಎಂದು ವರದಿಯಾಗಿದೆ.

ಜೈ ತಾಯಿ ಕನ್ನಡಾಂಭೆ! 💛❤️

ಕನ್ನಡವೇ ಸತ್ಯ – ಕನ್ನಡವೇ ನಿತ್ಯ!

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button