ಖೊಟ್ಟಿ ಜಾತಿ ಪ್ರಮಾಣ ಪತ್ರ ಹಾವಳಿ – ತಡೆ ಗಟ್ಟಲು ಜಿಲ್ಲಾಧಿಕಾರಿಗೆ ಮನವಿ.

ಗದಗ ಆ.15

ಜಿಲ್ಲೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿ ವತಿಂದ ಜಿಲ್ಲೆಯಲ್ಲಿ ಖೊಟ್ಟಿ ಜಾತಿ ಪ್ರಮಾಣ ಪತ್ರ ಪಡೆದು ಪ್ರತಿಷ್ಟಿತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಆಯ್ಕೆಯನ್ನು ರದ್ದು ಪಡಿಸಿ ಸರ್ಕಾರಿ ಅಧಿಕಾರಿಗಳಿಗೆ ಸುಳ್ಳು ದಾಖಲಾತಿಯನ್ನು ಒದಗಿಸಿ ವಂಚಿಸಿರುವ ಪಾಲಕರ ಮೇಲೆ ಎಸ್‌/ಸಿ ಎಸ್‌/ಟಿ ಧೌರ್ಜನ್ಯ ಪ್ರತಿಬಂಧಕ ಕಾಯ್ದೆ 1989 ರಡಿಯಲ್ಲಿ ಪ್ರಕರಣ ದಾಖಲಿಸಬೇಕು.

ಮತ್ತು ಜಾತಿ ಪ್ರಮಾಣ ಪತ್ರ ನೀಡಿರುವ ಅಧಿಕಾರಿಗಳು ಜಿಲ್ಲೆಯಲ್ಲಿಯೇ ಇರದ ಜಾತಿಗಳಿಗೆ ಜಾತಿ ಪ್ರಮಾಣ ಪತ್ರವನ್ನು ನೀಡಿ ಅಧಿಕಾರ ದುರ್ಭಳಕೆ ಮಾಡಿ ಕೊಂಡಿರುವಲ್ಲದೇ ಶೋಷಿತ ಸಮುದಾಯಗಳಿಗೆ ಅನ್ಯಾಯ ವೆಸಗಿದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸ ಬೇಕೆಂದು ಒತ್ತಾಯಿಸಿ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಕೋಳಿ ಡೋರ. ಕಾಡು ಕುರುಬ. ಟೋಕ್ರೀ ಕೋಳಿ ಬೇಡ ಜಂಗಮ ಇನ್ನೂ ಮುಂತಾದ ಜಾತಿಯವರು ನಮ್ಮ ಜಿಲ್ಲೆಯಲ್ಲಿ ವಾಸವಿರದಿದ್ದರೂ ಅಂತಹ ಜಾತಿ ಪ್ರಮಾಣ ಪತ್ರವನ್ನು ನೀಡಿರುವ ಸಾಕಷ್ಟು ಪ್ರಕರಣಗಳು ಗದಗ ಜಿಲ್ಲೆಯಲ್ಲಿವೆ.

ಈ ಕೂಡಲೇ ಜಿಲ್ಲಾಢಳಿತ ಎಚ್ಚೆತ್ತು ಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಲ್ಲದ ಅನ್ಯ ಜಾತಿಯವರು ಸುಳ್ಳು ದಾಖಲೆಗಳನ್ನು ಒದಗಿಸಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆದು ನೌಕರಿ ಗಿಟ್ಟಿಸಿಕೊಂಡಿರುವದಲ್ಲದೇ ಮೀಸಲು ಕ್ಷೇತ್ರಗಳಲ್ಲಿಯೂ ಸಹಿತ ಚುನಾವಣೆಯಲ್ಲಿ ಸ್ಪರ್ಧಿಸಿರುತ್ತಾರೆ ಇಂತಹವರಿಂದಾಗಿ ನಿಜವಾದ ಅಸ್ಪ್ರಶ್ಯ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು ಕೂಡಲೇ ಜಿಲ್ಲಾಢಳಿತ ಕಾರ್ಯ ಪ್ರವ್ರತ್ತರಾಗಬೇಕೆಂದು ಗದಗ ಜಿಲ್ಲಾ ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿ ನಿಯೋಗ ಒತ್ತಾಯಿಸಿದರು.

ಮನವಿಗೆ ಸ್ಪಂಧಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಪ್ರಕರಣದ ಕುರಿತು ತನಿಖೆ ಗೊಳಪಡಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕೆಂದು ಆದೇಶಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಎಸ್ಸಿ ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿ ಗದಗ ಜಿಲ್ಲಾಧ್ಯಕ್ಷರಾದ ಶ್ರೀಕಾಂತ ಪೂಜಾರ. ವಾಲ್ಮೀಕಿ ಸಮುದಾಯದ ಮುಖಂಡರಾದ ಗೋವಿಂದರಾಜ ಪನ್ನೂರ್. ದಲಿತ ಯುವ ಮುಖಂಡ ರಮೇಶ್ ಕಡೆಮನಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಅಧ್ಯಕ್ಷರಾದ ಅನಿಲ್‌ಕುಮಾರ್ ಸಿದ್ದಮ್ಮನಹಳ್ಳಿ. ಎಸ್‌ಸಿ ಎಸ್ಟಿ ಧೌರ್ಜನ್ಯ ಪ್ರತಿಬಂಧಕ ಕಾಯ್ದೆ 1989 ಗದಗ ಜಿಲ್ಲಾ ಜಾಗ್ರತಿ ಹಾಗೂ ಉಸ್ತುವಾರಿ ಸಮಿತಿ ಮಾಜಿ ಸದಸ್ಯರಾದ ಸುರೇಶ ಚಲವಾದಿ. ಎಸ್‌ಸಿ ಎಸ್‌ಟಿ ಧೌರ್ಜನ್ಯ ಪ್ರತಿಬಂಧಕ ಕಾಯ್ದೆ 1989 ರ ಗದಗ ಉಪ ವಿಭಾಗ ಮಟ್ಟದ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಬಸವರಾಜ ಮುಳ್ಳಾಳ. ಬಸವರಾಜ ಕುರುಗೋಡು ಚಂದ್ರು ಮುಂಡರಗಿ ವಸಂತ ವಾಲ್ಮೀಕಿ ಸೋಮು ಕೊರ್ಲವಾಡ ಮಂಜುನಾಥ ವಾಲ್ಮೀಕಿ ರಾಮು ಬಾಗಲಕೋಟಿ ಗೋಪಾಲ್ ಗಡಾದ್ ಕಿರಣ್ ನಾಯ್ಕರ ನಾಗರಾಜ್ ಯರಗುಡಿ ಸಿದ್ದು ಹುಲ್ಲಣ್ಣವರ ಮಣಿಕಂಠ ಎಲಿಗಾರ ಶ್ರೀಕಾಂತ್ ಗೌಡರ್ ಮುಂತಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button