🚨ಬ್ರೇಕಿಂಗ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ಬ್ರೇಕಿಂಗ್ ನ್ಯೂಸ್🚨ಶ್ರೀ ಎಚ್. ನಾಗರಾಜ ಹಂದೆ ಅವರ – 27 ಕ್ಕೆ ನುಡಿ ನಮನ ಕಾರ್ಯಕ್ರಮ ಆಯೋಜನೆ.

ಉಡುಪಿ ಜು.23

ಒಬ್ಬ ಮನುಷ್ಯ ಬದುಕಿದ್ದಾಗ ಎಷ್ಟು ದೊಡ್ಡವ ನಾಗಿರುತ್ತಾನೋ ಇಲ್ಲವೋ, ಆದರೆ ತೆರೆ ಮರೆಯಲ್ಲಿ ನಿಂತು ನೂರಾರು ಜನರ ಬಾಳಿಗೆ ಬೆಳಕಾಗಿ, ಕಣ್ಣೀರಿಗೆ ಕಣ್ಣೊರೆಸಿ, ಹೊರಗೆ ಬರದೇ ಎಲೆ ಮರೆಕಾಯಿ ಯಂತೆ ಬಾಳುತ್ತಾನಲ್ಲ… ಆ ವ್ಯಕ್ತಿ ಹೋದ ಮೇಲೆ ಉಳಿಯುವುದು ದೊಡ್ಡ ಶೂನ್ಯ..!

ಹೌದು, ಉಡುಪಿ ಜಿಲ್ಲೆಯ ಹೆಮ್ಮೆಯ ಸಹಕಾರಿ ರಂಗದ ದಿಗ್ಗಜ, ಕೋಟ ಸಹಕಾರಿ ವ್ಯವಸಾಯಿಕ ಸಂಘದ ಹಾಲಿ ಉಪಾಧ್ಯಕ್ಷರು ಹಾಗೂ ಮಾಜಿ ಸಹಾಯಕ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ “ಶ್ರೀ ಎಚ್. ನಾಗರಾಜ ಹಂದೆ” (70) ನಮ್ಮನ್ನು ಅಗಲಿದ್ದಾರೆ. ಜೀವ ಮಾನವಿಡೀ ಪ್ರಾಮಾಣಿಕತೆಯ ಹಾದಿ ತುಳಿದ ಆ ಸರಳ ಜೀವದ ನೆನಪುಗಳಲ್ಲಿ ಈಗ ಕಣ್ಣೀರಿನ ಕಡಲು ಉಕ್ಕುತ್ತಿದೆ.

ಎಲೆ ಮರೆಕಾಯಿ ಯಂತೆ ಬದುಕಿ, ಮರೆಯಲಾರದ ನೆನಪಾದ ಅಣ್ಣ ನಾಗರಾಜ ಹಂದೆ..!

ಬದುಕು ಅಂದ್ರೆ ನೂರಾರು ಡವಲಪ್‌ಮೆಂಟ್ಸು, ಸಾವಿರಾರು ಜನರನ್ನು ಸುತ್ತಿಕೊಳ್ಳೋ ಪ್ರಚಾರವಲ್ಲ; ಒಬ್ಬೊಬ್ಬರ ಕಣ್ಣೀರೊರೆಸುತ್ತಾ, ಸಹಕಾರ ಕ್ಷೇತ್ರದ ನಂಬಿಕೆಯ ನಂಟಾಗಿ ಬದುಕುಳಿಯೋದು ನಿಜವಾದ ಸಾರ್ಥಕತೆ. ಕೋಟದಂಥ ಮಣ್ಣಿನಲ್ಲಿ, ಕೋಟ ಸಹಕಾರಿ ವ್ಯವಸಾಯಿಕ ಸಂಘದ ಮೂಲಕ ಹಳ್ಳಿಗರ ಕೈ ಹಿಡಿದು ನಡೆಸಿದ ಆ ಕೈಗಳು ಇಂದು ನಿಶ್ಚಲವಾಗಿವೆ.

ಸಂಘದ ಮಾಜಿ ಸಹಾಯಕ ಕಾರ್ಯ ನಿರ್ವಹಣಾಧಿಕಾರಿಯಾಗಿ, ಹಾಲಿ ಉಪಾಧ್ಯಕ್ಷರಾಗಿ ಅವರು ಮಾಡಿದ ಜನಪರ ಸೇವೆ ಅಕ್ಷರಶಃ ಅನನ್ಯ. ಪ್ರಚಾರದ ಆಸೆಗೆ ಹೋಗದೆ, ತೆರೆಮರೆಯಲ್ಲೇ ಇದ್ದು ನೂರಾರು ಜನರ ಸಂಸಾರಗಳಿಗೆ ಆಸರೆಯಾಗಿದ್ದ ಆ ಚೇತನ ಸೆಪ್ಟೆಂಬರ್ 1, 1955 ರಂದು ಜನಿಸಿ, ಜುಲೈ 14, 2026 ರಂದು ಲೋಕವನ್ನೇ ಅಗಲಿದ್ದಾರೆ.

ಅವರ ಆ ಅಗಲಿಕೆಯ ನೋವು ಇನ್ನೂ ಹಸಿರಾಗಿದೆ. ಆ ಪುಣ್ಯ ಚೇತನಕ್ಕೆ ಕಣ್ಣೀರ ನಮನ ಸಲ್ಲಿಸಲು ಇಡೀ ಊರೇ ಒಟ್ಟು ಗೂಡುತ್ತಿದೆ..!

ಶ್ರದ್ಧಾಂಜಲಿ ಸಭೆಯ ವಿವರಗಳು:-

ಕಾರ್ಯಕ್ರಮ:-

ನುಡಿ ನಮನ ಹಾಗೂ ಅಶ್ರುತರ್ಪಣ.

ದಿನಾಂಕ:-

27.07.2026 (ಸೋಮವಾರ)

ಸಮಯ:-

ಸಂಜೆ ಸರಿಯಾಗಿ 5:00 ಗಂಟೆಗೆ

ಸ್ಥಳ:-

ಬಿ.ಸಿ.ಹೊಳ್ಳ ಸಹಕಾರ ಸಭಾ ಭವನ,

ಕೋಟ ಈ ಶ್ರದ್ಧಾಂಜಲಿ ಸಭೆಯಲ್ಲಿ ಕೋಟ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ “ಡಾ, ಕೃಷ್ಣ ಕಾಂಚನ್”, ಮುಖ್ಯ ಕಾರ್ಯನಿರ್ವಹಣಾಧಿಕಾರಿ “ಶ್ರೀ ಶರತ್ ಕುಮಾರ್ ಶೆಟ್ಟಿ”, ಹಾಗು ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಸರ್ವ ಸದಸ್ಯರು ಭಾಗವಹಿಸಿ ಆ ಮಹಾನ್ ಚೇತನಕ್ಕೆ ಕಣ್ಣೀರ ವಿದಾಯ ಹೇಳಲಿದ್ದಾರೆ.

ಒಂದು ಹಸಿರು ನೆನಪಿಗೆ ಮೌನ ಮುಗಿದು ಮಾತು ಹೊರಡುವ ಕ್ಷಣವಿದು. ಬನ್ನಿ, ನಾವೆಲ್ಲರೂ ಆ ಸರಳ ಸಜ್ಜನಿಕೆಯ ಮೂರ್ತರೂಪಕ್ಕೆ ಶ್ರದ್ಧಾಂಜಲಿ ಸಲ್ಲಿಸೋಣ.

ವರದಿ:ಆರತಿ.ಗಿಳಿಯಾರು,ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button