ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ. ತಿಮ್ಮಣ್ಣ ನಾಯಕ ಅವರಿಂದ – ಕಾರುಣ್ಯಾಶ್ರಮಕ್ಕೆ ಸಹಾಯದ ಸೌಜನ್ಯ.
ಸಿಂಧನೂರು ಆ.06


ರಾಯಚೂರು ತಾಲೂಕಿನ ಯರಗೇರಾ ಗ್ರಾಮೀಣ ವಲಯದ ಸಿ.ಪಿ.ಐ.ಗಳಾದ ಸಾಬಯ್ಯ ನಾಯಕ ಹಾಗೂ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ.ಗಳಾದ ತಿಮ್ಮಣ್ಣ ನಾಯಕ ಸಿಂಧನೂರಿನ ಕರುಣೆಯ ಕಾರುಣ್ಯ ಆಶ್ರಮಕ್ಕೆ ಸಹಾಯ ಸೌಜನ್ಯದ ಸಹಕರಿಸಿದರು. ಈ ಸಮಯದಲ್ಲಿ ಆಶ್ರಮದ ವತಿಯಿಂದ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.
ಈ ಸಮಯದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ, ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ನಮ್ಮ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ.ಗಳಾದ ತಿಮ್ಮಣ್ಣ ನಾಯಕ ಇವರು ನಿರಂತರವಾಗಿ ಕಾರುಣ್ಯ ಆಶ್ರಮಕ್ಕೆ ಸಹಾಯ ಸಹಕಾರ ಮಾಡುತ್ತಾ ಸೇವೆಗೆ ಕೈಜೋಡಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಮಾಡುತ್ತಿರುವ ಸಹಾಯ ಹಲವಾರು ಅಂಧ-ಅನಾಥರ ಬಾಳಿಗೆ ಬೆಳಕಾಗಿದೆ.
ಆಶ್ರಮದಲ್ಲಿನ ಆಶ್ರಯ ದಾತುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆಶ್ರಮದ ನಿರ್ವಹಣೆ ಬಹಳ ಕಷ್ಟದಲ್ಲಿರುತ್ತದೆ ಆದ್ದರಿಂದ ಕರುನಾಡಿನ ಕರುಣಾಮಯಿಗಳು ತಮ್ಮ ಕೈಯಿಂದ ಆದಂತಹ ಸಹಾಯ ಸಹಕಾರವನ್ನು ಮಾಡಿರಿ ಎನ್ನುವುದು ಕಾರ್ಮಿಕ ಕುಟುಂಬದ ಗೌರವ ಪೂರ್ವಕ ವಿನಂತಿ ಎಂದು ಈ ಸಂದರ್ಭದಲ್ಲಿ ಸಮಸ್ತ ರಾಯಚೂರು ಪೊಲೀಸ್ ಇಲಾಖೆಗೆ ಸಿಂಧನೂರಿನ ಕರುಣೆಯ ಕಾರುಣ್ಯ ಕುಟುಂಬದ ವತಿಯಿಂದ ಹೃದಯ ಪೂರ್ವಕ ಹೃತ್ಪೂರ್ವಕ ಧನ್ಯವಾದಗಳು ಎಂದು ಪತ್ರಿಕಾ ಮಾಧ್ಯಮಗಳಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ಕಾರ್ಯಾಧ್ಯಕ್ಷ ಡಾ, ಚನ್ನಬಸವ ಸ್ವಾಮಿ ಹಿರೇಮಠ ದುರುಗೇಶ ಬಾಲಿ ಸಲಹಾ ಸಮಿತಿ ಹಿರಿಯರು. ಬಸವರಾಜ ಬುಕ್ಕನಹಟ್ಟಿ ವರದಿಗಾರರು ಸಿಂಧನೂರು. ಮರಿಯಪ್ಪ ಸಿಬ್ಬಂದಿಗಳು ಕಾರುಣ್ಯ ಆಶ್ರಮ ಇವರುಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್ ಭಾಷಾ ನಕ್ಕುಂದಿ ಮಾನ್ವಿ
