ಸಾವಿರಾರು ಹೆಕ್ಟೇರ್ ಭೂಮಿಗೆ ನೀರುಣಿಸಿ ರೈತರಲ್ಲಿ ಮಂದಹಾಸ ಮೂಡಿಸಿರುವ ಶಾಸಕ ಡಾ, ಎನ್.ಟಿ ಶ್ರೀನಿವಾಸ್ ರವರು, ಬರದ ನಾಡಿಗೆ ಗಂಗೆಯ ಕರೆತಂದು ಭಗೀರಥರಾಗಿದ್ದಾರೆ – ಎಂದು ರೈತರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಪಾಲಯ್ಯನಕೋಟೆ ಆ.06


ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರ ಬರ ಪೀಡಿತ ಪ್ರದೇಶವಾಗಿದ್ದು, ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್ ರವರು. 74 ಕೆರೆಗಳಿಗೆ ನೀರುಣಿಸುವ ಮೂಲಕ ಬರದನಾಡಿನ ಭಗೀರಥ ರಾಗಿದ್ದಾರೆಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಆ. 5 ರಂದು ಪಾಲಯ್ಯನಕೋಟೆ ಗ್ರಾಮದ ಹೊರ ವಲಯದಲ್ಲಿರುವ, 74 ಕೆರೆಗಳಿಗೆ ನೀರು ಪೂರೈಸುವ ಬೃಹತ್ ಘಟಕ ವೀಕ್ಷಣೆಗೆಂದು ಶಾಸಕರು ಆಗಮಿಸಿದ್ದ ಸಂದರ್ಭದಲ್ಲಿ. ಹತ್ತಾರು ರೈತ ಮುಖಂಡರು ಹಾಗೂ ನೂರಾರು ರೈತರು, ಪತ್ರಕರ್ತರೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ 226 ಗ್ರಾಮಗಳಿಗೆ, 5000 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಭೂಮಿಗೆ. ನೀರುಣಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು, ಶಾಸಕರಾದ ಡಾ, ಎನ್.ಟಿ ಶ್ರಿನಿವಾಸ್ ರವರು ಅನುಷ್ಠಾನಕ್ಕೆ ತರುವ ಮೂಲಕ. ಕ್ಷೇತ್ರದ ಅಸಂಖ್ಯಾತ ರೈತರ ಮೊಗದಲ್ಲಿ, ಮಂದಹಾಸ ಮೂಡಿಸಿದ್ದಾರೆ.
ಕೆರೆಗಳಿಗೆ ನೀರುಣಿಸುವುದರಿಂದಾಗಿ, ಬೊರ್ವೆಲ್ ಗಳು ಪುನಶ್ಚೇತನ ಗೊಳ್ಳಲಿವೆ. ದನ ಪಶು ಪಕ್ಷಿ ಸಂಕುಲ ಸೇರದಂತೆ, ಎಲ್ಲಾ ಜೀವಿಗಳಿಗೆ ಜೀವ ಜಲ ಒದಗಿಸಿ ದಂತಾಗಿದೆ. ಮತ್ತು ಕೃಷಿಯಾಧಾರಿತ ಲಕ್ಷಾಂತರ ರೈತ ಕುಟುಂಬಗಳ, ಸ್ವಾಲಂಭಿ ಜೀವನ ಸುಧಾರಿಸಿ ಜೀವನ ಮಟ್ಟ ಉತ್ತಮ ಗೊಳ್ಳಲಿದೆ ಎಂದು ರೈತ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಶಾಸಕರಾಗಿದ್ದ, ಹಾಗೂ ಹಾಲಿ ಚಿತ್ರದುರ್ಗ ಶಾಸಕರಾಗಿರವ, ಎನ್.ವೈ ಗೋಪಾಲಕೃಷ್ಣ ರವರು. 74 ಕೆರೆಗಳಿಗೆ ನೀರುಣಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಯೋಜನೆಗೆ ನಾಂದಿ ಹಾಡಿದ್ದರು. ಅದನ್ನು ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್ ರವರು, ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿ ಬರದ ನಾಡಿನ ಭಗೀರಥರಾಗಿದ್ದಾರೆ.
ಯೋಜನೆಯ ಮೂಲಕ ಕ್ಷೇತ್ರದ ರೈತರ ಜೀವನಕ್ಕೆ, ಪುನಶ್ಚೇತನ ನೀಡಿರುವ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು. ಹಾಲಿ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರವರಿಗೆ, ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿರುವ ಸಂಬಂಧಿಸಿದ ಇಲಾಖೆಗಳ ಎಲ್ಲಾ ಸಚಿವರಿಗೆ ತಾವು ಚಿರ ಋಣಿಗಳಾಗಿರುವುದಾಗಿ. ಮತ್ತು ಯೋಜನೆ ಜಾರಿ ಯಾಗುವಲ್ಲಿ ಶಾಸಕರೊಂದಿಗೆ ಸಹಕರಿಸಿರುವ.

ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹಮದ್ ರವರಿಗೆ. ಸಂಬಂಧಿಸಿದ ಇಲಾಖೆಗಳ ಉನ್ನತಾಧಿಕಾರಿಗಳಿಗೆ, ಹಾಗೂ ಎಲ್ಲಾ ಸಿಬ್ಬಂದಿಯವರಿಗೆ. ಸಮಸ್ತ ಕ್ಷೇತ್ರದ ಪರವಾಗಿ ತಾವು , ಅಭಿನಂದನೆಗಳನ್ನು ಸಲ್ಲಿಸುತ್ತಿರುವುದಾಗಿ. ಜನಾನುರಾಗಿ ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್ ರವರು, ಕ್ಷೇತ್ರದ ಜನತೆಯ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದು.
ಅವರು ಎಂದೆಂದಿಗೂ ನಮ್ಮ ಕ್ಷೇತ್ರದ, ಖಾಯಂ ಶಾಸಕ ರಾಗಿರುತ್ತಾರೆ. ಅರನ್ನು ನಾವು ಯಾವುದೇ ಕಾರಣಕ್ಕೆ ಬಿಟ್ಟು ಕೊಡುವ ಮಾತೇ ಇಲ್ಲ, ಅವರು ನಮ್ಮೆಲ್ಲರ ನಮ್ಮ ಕ್ಷೇತ್ರದ ಆಸ್ತಿಯಾಗಿದ್ದಾರೆ.
ಎಷ್ಟೇ ಚುನಾವಣೆಗಳು ಬರಲಿ ಯಾರೇ ಬಂದರೂ ಕೂಡ, ಅವರನ್ನು ಕಾಪಾಡಿ ಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್ ರವರು ಕ್ಷೇತ್ರದ ಹೆಮ್ಮೆಯ ಹಿರಿಮಗ ನಾಗಿದ್ದಾರೆಂದು, ರೈತ ಮುಖಂಡ ನಿಂಬಳಗೆರೆ ಕೊಟ್ರೇಶ, ಎಂ.ಜಿ.ರಾಜೇಂದ್ರಗೌಡ, ಹೋರಾಟಗಾರರು ವಕೀಲರಾದ ಟಿ.ಓಂಕಾರಪ್ಪ, ಪಾಲಣ್ಣ, ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ಮಾತನಾಡಿ ಶಾಕರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಪಾಲಯ್ಯನಕೋಟೆಯ ರೈತ ಮುಖಂಡರು, ಹಾಗೂ ವಿವಿಧೆಡೆಯ ಹತ್ತಾರು ರೈತ ಮುಖಂಡರು. ಮತ್ತು ವಿವಿದ ಸಂಘಟನೆಗಳ ಮುಖಂಡರು, ನೂರಾರು ರೈತರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ. ಸಾಲುಮನಿ ಕೂಡ್ಲಿಗಿ
