ಸಮಾನ ಮನಸ್ಕರ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸಂಘಟನೆ ಕುರಿತು – ಶಾಸಕ ಎನ್.ವೈ ಗೋಪಾಲಕೃಷ್ಣ ಚರ್ಚೆ.

ಮೊಳಕಾಲ್ಮೂರು ಆ.08

ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ಅವರು ಸಚಿವ ಸ್ಥಾನ ನೀಡದಿದ್ದಕ್ಕೆ ಬೇಜಾರ ಮತ್ತು ಕೋಪಗೊಂಡಿಲ್ಲ ಏಕೆಂದರೆ ನಾನು ಏಳು ಬಾರಿ ಶಾಸಕನಾಗಿ ಧರ್ಮದ ದಾರಿಯಲ್ಲಿ ನಡೆದಿದ್ದೇನೆ ಎರಡು ಮೂರು ಬಾರಿ ಮತ್ತು ಭ್ರಷ್ಟಾಚಾರ ಇರುವ ಎಮ್ಮೆಲ್ಲೆಗಳಾದವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ.

ಆದರೂ ನನಗೆ ಬೇಜಾರ ಅನಿಸುವುದಿಲ್ಲ ಕುರುಕ್ಷೇತ್ರದಲ್ಲಿ ಪಾಂಡವರು ಐದು ಜನ ಮಾತ್ರ ಇರುತ್ತಾರೆ ಕೌರವರು 101 ಜನ ಇರುತ್ತಾರೆ ಆದರೆ ಕೃಷ್ಣಪರಮಾತ್ಮ ಪಾಂಡವರ ಕಡೆಗೆ ಮಾತ್ರ ಇದ್ದಿದ್ದು ದ್ವಾಪರ ಯುಗದಲ್ಲಿ ಆಗ ಪಾಂಡವರೇ ಗೆದ್ದಿದ್ದು ಅದನ್ನು ತಿಳಿದು ಕೊಳ್ಳಬೇಕು ಕೃಷ್ಣಪರಮಾತ್ಮ ಯಾರ ಕಡೆ ಮನಸ್ಸು ಕೊಡುತ್ತಾರ ಯಾವ ಪಕ್ಷದ ಕಡೆ ಮನಸ್ಸು ಇರುತ್ತದ ಆ ಪಕ್ಷಕ್ಕೆ ಡ್ಯಾಮೇಜ್ ಬರುವುದಿಲ್ಲ ಇದನ್ನಾದರೂ ಅರ್ಥಮಾಡಿ ಕೊಳ್ಳಬೇಕು ಹೈಕಮಾಂಡ್ ಕಾರಣ ಇಷ್ಟೇ ಜನಪರ ಕೆಲಸ ಶಿಕ್ಷಣಕ್ಕೆ ಹೆಚ್ಚು ಹೊತ್ತು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳು ರೈತರಿಗೆ ಕೆರೆ ನೀರು ಹರಿಸುವುದು ರಸ್ತೆ ಚರಂಡಿ ಆರೋಗ್ಯ ಇವಕ್ಕೆಲ್ಲ ಕಮ್ಮಿ ಆಗದ ಹಾಗೆ ಗ್ರಾಮಗಳಿಗೆ ಯೋಜನೆ ರೂಪಿಸಿ ಮತದಾರರ ಸಂತೋಷ ಪಡಿಸಿದ್ದಾರೆ.

ಹಿಂದೆ ಹತ್ತು ವರ್ಷ ಯಾರು ಮಾಡದ ಇಂದು ಆ ಕೆಲಸವನ್ನು ಎನ್.ವೈ ಗೋಪಾಲಕೃಷ್ಣ ಶಾಸಕರು ಮಾಡಿದ್ದಾರೆ ಎಂದು ಕ್ಷೇತ್ರದ ಮತದಾರರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.

ಮೊಳಕಾಲ್ಮೂರು ತಾಲೂಕಿನ ರಾಂಪುರದ ತಂದೆ ತಾಯಿ ಇರುವ ಗದ್ದುಗೆಯ ಶ್ರೀ ಎಲ್ಲಮ್ಮ ಎಸ್ಟೇಟ್ ಆವರಣದಲ್ಲಿ ನಡೆದ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಮಾನ ಮನಸ್ಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲ ಪಡಿಸುವುದು ಹಾಗೂ ಮುಂಬರುವ ದಿನಗಳಲ್ಲಿ ಕೈಗೊಳ್ಳ ಬೇಕಾದ ಜನಪರ ಕಾರ್ಯಕ್ರಮಗಳ ಕುರಿತು ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸುದೀರ್ಘವಾಗಿ ಚರ್ಚಿಸಲಾಯಿತು.

ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಅಭಿವೃದ್ಧಿಯ ಯೋಜನೆಗಳು ತಲುಪಬೇಕು. ರಸ್ತೆ, ಕುಡಿಯುವ ನೀರು, ನೀರಾವರಿ, ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸೇರಿದಂತೆ ಜನರ ಅಗತ್ಯಗಳಿಗೆ ಆದ್ಯತೆ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ಶಾಸಕ ಎನ್.ವೈ ಗೋಪಾಲಕೃಷ್ಣ ಅವರು ತಿಳಿಸಿದರು.

ಅದೇ ರೀತಿ, ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗ ಬೇಕಾಗಿತ್ತು ಆದರೆ ಕಾರಣ ಪಕ್ಷದಲ್ಲಿ ಭಿನ್ನಮತ ಗೊಂಡ ಹಿರಿಯರು ಅನ್ನದೆ ಹೈಕಮಾಂಡ್ ಗೆ ಬೇರೆಯವರ ಹೆಸರು ಮುಂಚೂಣಿ ಯಾಗಿಸಿದ್ದಾರೆ ಇದನ್ನು ಮನಗಂಡು ಮೊಳಕಾಲ್ಮೂರು ಕ್ಷೇತ್ರದ ಮತದಾರರು ಕಾರ್ಯಕರ್ತರು ಹಾಗೂ ಮುಖಂಡರು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನರ ಧ್ವನಿಯಾಗಿ ಕೆಲಸ ಮಾಡಬೇಕು. ಸಂಘಟನೆಯಲ್ಲಿನ ಒಗ್ಗಟ್ಟು ಹಾಗೂ ಕಾರ್ಯಕರ್ತರ ಪರಿಶ್ರಮವೇ ಪಕ್ಷದ ಶಕ್ತಿಯಾಗಿದೆ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಹಿತಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದ ಶಾಸಕರು, ಮೊಳಕಾಲ್ಮೂರು ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಈ ಸಂದರ್ಭದಲ್ಲಿ ಶಾಸಕರ ಅಣ್ಣನಾದ ಪೆನ್ನೋಬಳಿ ಸ್ವಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್.ವೈ ಚೇತನ್ ಹಾಗೂ ಸುಭಾನ್ ಸಾಬ್ ಮೊಳಕಾಲ್ಮೂರು ಪಟ್ಟಣದ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಪಟೇಲ್ ಪಾಪ ನಾಯಕ ಸೋಲನಹಳ್ಳಿ ದೇವಯ್ಯ ಇನ್ನೂ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಮುಖಂಡರು, ಕಾರ್ಯಕರ್ತರು ಹಾಗೂ ಸಮಾನ ಮನಸ್ಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ ಎಚ್ ಮೀನಕೆರಿ ಹೊಂಬಾಳೆ ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button