ಭಾನುವಾರ ಚಿನ್ಮೂಲದ್ರಿ ಅಕ್ಷರೋತ್ಸವ – ಕಾರ್ಯಕ್ರಮ ಆಯೋಜನೆ.

ಚಿತ್ರದುರ್ಗ ಆ.08

ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾ ಭವನದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆ ಯಿಂದ ಭಾರತೀಯ ವೈದ್ಯಕೀಯ ಸಂಘ, ಚಿತ್ರದುರ್ಗ ಶಾಖೆ, ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ, ಚಿನ್ಮೂಲದ್ರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಚಿನ್ಮೂಲದ್ರಿ ಅಕ್ಷರೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು.

ಇದರ ಭಾಗವಾಗಿ ಪ್ರೇರಣಾದಾಯಕ ಉಪನ್ಯಾಸ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಖ್ಯಾತ ಮನೋ ತಜ್ಞರಾದ ಆರ್ ಶ್ರೀನಾಗೇಶ್ ಅವರಿಂದ “ಒತ್ತಡ ಮುಕ್ತ ಬದುಕು” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನಡೆಯಲಿದ್ದು. ಕಾರ್ಯಕ್ರಮದಲ್ಲಿ ಎ.ಪಿ.ಮಧುಶ್ರೀ ,ಡಾ, ಕೆ.ಎಂ ವೀರೇಶ್, ಡಾ, ಎಲ್ ಪಾಲಾಕ್ಷಯ್ಯ, ಬಿ.ಕೆ ರಹಮತ್ ವುಲ್ಲಾ, ಶಾರದಾ ಬಿ ರಾಮ್, ಡಾ, ಆರ್.ಗೌರಮ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು.

ಕವಿಗೋಷ್ಠಿಯಲ್ಲಿ ಮೂವತ್ತಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಗಳನ್ನು ವಾಚನ ಮಾಡಲಿದ್ದು ಸಂಗೀತ, ಏಕಪಾತ್ರಾಭಿನಯ, ಛದ್ಮವೇಷ, ಭರತನಾಟ್ಯ, ಸಮೂಹ ನೃತ್ಯ, ಸಮಾರೋಪ ಸಮಾರಂಭ ನಡೆಯಲಿವೆ ಎಂದು ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ದಯಾ ಪುತ್ತೂರ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Check Also
Close
Back to top button