“ನಿತ್ಯ ಬಾಳ್ವೆಗೆ ಸ್ವಾಭಿಮಾನವೇ ಶ್ರೇಷ್ಠತೆ”…..

ನಿರೀಕ್ಷೆ ಇದ್ದಷ್ಟು ಪರೀಕ್ಷೆ ಬಹಳವು
ನಿಯತ್ತು ಇದ್ದಷ್ಟು ನೋವು ಜಾಸ್ತಿಯು
ಅಲಂಕಾರ ಇದ್ದಷ್ಟು ಅಂಹಕಾರ ತುಂಬಾ
ಸಹಕಾರ ಇದ್ದಷ್ಟು ದುರಂಕಾರ ಹೆಚ್ಚು
ಸರಳತೆ ಇದ್ದಷ್ಟು ಹೀಯಾಳಿಕೆ ಅಧಿಕತಮವು
ನಿಷ್ಠೆ ಇದ್ದಷ್ಟು ಬಹು ಚೇಷ್ಟೆಯು
ಕಲಿಯುಗದ ಭ್ರಷ್ಟತೆ ಇದ್ದಷ್ಟು ಬಲಿಷ್ಠತೆಯು
ಪುರುಷೋತ್ತಮನಿಗೆ ವಟ ವಟ ಸತಿಯು
ಸತ್ಯವತಿಗೆ ಜೂಜಾಟದ ಪತಿಯು
ಕಲಿಯುಗ ಜೀವನ ಚಕ್ರ ಎದಿರಿಸಲು
ನಿತ್ಯ ಬಾಳ್ವೆಗೆ ಸ್ವಾಭಿಮಾನವೇ ಶ್ರೇಷ್ಠತಮವು
ಜಯ ವಿಜಯಗಳ ಮಧ್ಯ ಜೀವನ ಅಂತ್ಯವು

ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ

