“ಪುಟ್ಟಣ್ಣನ ಕತ್ತೆ” ಚಲನ ಚಿತ್ರದ – ಪೋಸ್ಟರ್ ಬಿಡುಗಡೆ.

ಬೆಂಗಳೂರು ಮೇ.30

“ದಾರಿ ಯಾವುದಯ್ಯ ವೈಕುಂಠಕೆ ಚಿತ್ರವನ್ನು ನಿರ್ದೇಶನ ಮಾಡಿ ಸೈ ಎನಿಸಿ ಕೊಂಡಿದ್ದ “ಸಿದ್ದು ಪೂರ್ಣಚಂದ್ರ” ಸದಾ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ‘ಬ್ರಹ್ಮಕಮಲ’, ‘ತಾರಿಣಿ’, ‘ಈ ಪಾದ ಪುಣ್ಯಪಾದ’ ದಂಥ ವಿಶಿಷ್ಠ ಕಥಾ ಚಿತ್ರಗಳನ್ನು ನೀಡಿದ್ದು ಇವುಗಳ ಸಾಲಿಗೆ ಇದೀಗ “ಪುಟ್ಟಣ್ಣನ ಕತ್ತೆ” ಎಂಬ ಹೊಸ ಚಲನ ಚಿತ್ರವೂ ಸೇರಿ ಕೊಳ್ಳುತ್ತಿದೆ.ನಿರ್ದೇಶಕರ ಜನುಮ ದಿನದಂದು ಚಿತ್ರ ತಂಡ “ಪುಟ್ಟಣ್ಣನ ಕತ್ತೆ” ಪೋಸ್ಟರ್ ಬಿಡುಗಡೆ ಮಾಡಿದೆ. ಮೊದಲ ಪೋಸ್ಟರ್ ದಲ್ಲಿ ಕತ್ತೆಯನ್ನು ತೋರಿಸಿರುವುದು ಚಿತ್ರದ ಶುಭ ಸೂಚನೆ ಎಂದು ಚಿತ್ರ ತಂಡ ಹೇಳಿ ಕೊಂಡಿದೆ. ಮುಂದಿನ ಪೋಸ್ಟರ್ ದಲ್ಲಿ ಕಲಾವಿದರನ್ನು ತೋರಿಸಲಾಗುತ್ತದೆ ಎಂದು ನಿರ್ದೇಶಕರು ತಿಳಿಸಿದರು.ಎಲ್ಲರೂ ನಾಯಿ ಮೇಲೆ ಚಿತ್ರ ಮಾಡಿದರೆ ನಾನ್ಯಾಕೆ ಕತ್ತೆ ಮೇಲೆ ಕತೆ ಬರೆದು ಚಿತ್ರ ಮಾಡ ಬಾರದು ಅಂತ ಐಡಿಯಾ ಬಂದಾಗ ಈ ಕಥೆ ಹೊಳೆಯಿತು. ಈ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಮನುಷ್ಯರ ಜೊತೆ ಕತ್ತೆಯನ್ನು ಬಳಸಲಾಗಿದೆ. ನಮ್ಮೆಲ್ಲರಿಗೂ ಕತ್ತೆಯ ಜೊತೆಗಿನ ಒಡನಾಟ ಹೊಸದು, ಅದರ ಮನಸ್ಥಿತಿ ನೋಡಿ ಕೊಂಡು ಮೊದಲ ಹಂತದ ಚಿತ್ರೀಕರಣ ಮಾಡಿದೆವು.

ಮುಂದಿನ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಪ್ರಾರಂಭದಲ್ಲಿ ಕಷ್ಟವೆಸಿದರೂ ಒಂದೆರಡು ದಿನಗಳಲ್ಲಿ ಕತ್ತೆಯೂ ನಮ್ಮೊಂದಿಗೆ ಸಹಕರಿಸಿದ್ದು ವಿಶೇಷ. ಇದಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡುತಿದ್ದೇನೆಂದು ಸಿದ್ದು ಪೂರ್ಣಚಂದ್ರ ಚಿತ್ರದ ಬಗ್ಗೆ ಮಾಹಿತಿ ಹಂಚಿ ಕೊಂಡರು.‘ಪೂರ್ಣಚಂದ್ರ ಫಿಲಂಸ್’ಲಾಂಛನದಲ್ಲಿ ಬರುತ್ತಿರುವ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅನಿಶ್ ಆರ್ಯನ್, ಭೀಮೇಶ್ ಅಭಿನಯಿಸಿದ್ದಾರೆ. ಉಳಿದಂತೆ ಕಲಾರತಿ ಮಹದೇವ್, ಸಿದ್ದು ಮಂಡ್ಯ, ರಶ್ಮಿ ಮೈಸೂರ್, ಬಾಬು, ರೋಹಿಣಿ, ಎನ್.ಟಿ ರಾಮಸ್ವಾಮಿ, ಲಕ್ಕಿ ಶಂಕರ್, ಶೃತಿ ಗಗನ, ಸೌಮ್ಯ, ಕವಿತಾ ಕಂಬಾರ್, ಲಿಯೋ ಶರ್ಮ, ವಿಭಾ ವಂದನ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಛಾಯಾಗ್ರಾಹಣ ರಾಜು ಹೆಮ್ಮಿಗೇಪುರ, ಸಂಕಲನ ದೀಪು, ಸಂಗೀತ ಅನಂತ್ ಆರ್ಯನ್, ಸಿಂಕ್ ಸೌಂಡ್ ಕೃಷ್ಣಮೂರ್ತಿ, ಪತ್ರಿಕಾ ಸಂಪರ್ಕ ಸುಧೀಂದ್ರ ವೆಂಕಟೇಶ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ ಅವರದಿದೆ. ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ “ತನ್ಮಯ್.ಎಸ್ ಗೌಡ” ಬಂಡವಾಳ ಹೂಡಿದ್ದಾರೆ.

*****

ಡಾ, ಪ್ರಭುಗಂಜಿಹಾಳ

ಮೊ: ೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button