ಕ್ಷೇತ್ರದ ಎಲ್ಲಾ ದೇವಸ್ಥಾನಳಿಗೆ ಮೂಲ ಸೌಕರ್ಯಗಳಿಗೆ ಒತ್ತು ನೀಡಲು ಮುಂದಾಗುವೆ – ಶಾಸಕ ಡಾ, ಎನ್.ಟಿ ಶ್ರೀನಿವಾಸ್.

ಕೂಡ್ಲಿಗಿ ಏ.22

ಕ್ಷೇತ್ರದಲ್ಲಿ ಶೈಕ್ಷಣಿಕ ಸುಧಾರಣೆ ಜೊತೆಗೆ ಧಾರ್ಮಿಕವಾಗಿಯೂ ಪುನರುಜ್ಜೀವನ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಗ್ರಾಮ ದೇವತೆ ಶ್ರೀ ಊರಮ್ಮ ದೇವಿಗೆ ನೂತನ ಬಂಗಾರದ ಮುಖ ಹಾಗೂ ಕಿರೀಟ ಧಾರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ಪಟ್ಟಣದಲ್ಲಿ ಈಗಾಗಲೇ ಕಳೆದ ವರ್ಷ ಸುಮಾರು ಮೂರು ಕೋಟಿಗೂ ಅಧಿಕ ವೆಚ್ಚದಲ್ಲಿ ಶ್ರೀ ಊರಮ್ಮ ದೇವಿಯ ದೇವಸ್ಥಾನವನ್ನು ಅತ್ಯಂತ ಭವ್ಯವಾಗಿ ನಿರ್ಮಾಣ ಮಾಡಲಾಗಿದೆ.

ಶ್ರೀ ಊರಮ್ಮ ದೇವಿಯ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಚ್ ವೀರನಗೌಡ, ಆಯಗಾರರು ಸೇರಿದಂತೆ ಅಸಂಖ್ಯಾತ ಭಕ್ತರು ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ್ದು ಶ್ಲಾಘನೀಯ ಕಾರ್ಯ. ಅದರಂತೆ ಕಳೆದ ವರ್ಷ ಅದ್ದೂರಿ ಜಾತ್ರೆಯನ್ನು ಮಾಡಿ ಜಾತ್ರೆಗೆ ಭಕ್ತರು ನೀಡಿದ ದೇಣಿಗೆಯಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ದೇವಿಗೆ ಸ್ವರ್ಣ ಮುಖ ಹಾಗೂ ಕಿರೀಟವನ್ನು ಮಾಡಿಸುವ ಮೂಲಕ ಧಾರ್ಮಿಕವಾಗಿ ಹೆಚ್ಚು ಮಹತ್ವ ಬರುವಂತೆ ಮಾಡಿರುವುದು ಈ ಭಾಗದಲ್ಲಿ ಗ್ರಾಮ ದೇವತೆ ಶ್ರೀ ಊರಮ್ಮ ದೇವಿಯ ಅನುಗ್ರಹವನ್ನು ನಾವೆಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸ ಬೇಕಿದೆ.

ಶಾಸಕನಾಗಿ ನಾನು ಕೂಡ ಗ್ರಾಮ ದೇವತೆ ದೇವಸ್ಥಾನಕ್ಕೆ ಸಹಕಾರ ನೀಡುವ ಜೊತೆಗೆ ಈ ಭಾಗದಲ್ಲಿನ ಅನೇಕ ದೇವಸ್ಥಾನಗಳ ಅಭಿವೃದ್ಧಿಗೆ ಅವಶ್ಯಕವಾದ ಅನುದಾನ ನೀಡಿ ಧಾರ್ಮಿಕವಾಗಿ ಪುನರುಜ್ಜೀವನ ಗೊಳಿಸಿರುವ ಸಮಾಧನವಿದೆ ಎಂದರು.

ಮುಂಬರುವ ದಿನಗಳಲ್ಲಿ ಗ್ರಾಮದೇವತೆ ಸೇರಿದಂತೆ ಕ್ಷೇತ್ರದ ಎಲ್ಲಾ ದೇವಸ್ಥಾನಗಳ ಮೂಲ ಸೌಕರ್ಯಗಳಿಗೆ ಒತ್ತು ನೀಡಲು ಮುಂದಾಗುವೆ ಎಂದರು. ಇದಕ್ಕು ಮುನ್ನ ಗ್ರಾಮದೇವತೆ ನೂತನ ಚೌಕಿ ಮನೆಗೆ ಗಂಗೆ ತಂದು ಚೌಕಿಮನೆ ಲೋಕಾರ್ಪಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಶ್ರೀ ಗ್ರಾಮ ದೇವತೆ ಊರಮ್ಮ ದೇವಿ ಕಮೀಟಿಯ ಅಧ್ಯಕ್ಷ ಕೆ.ಎಚ್ ವೀರನಗೌಡ, ಹಿ.ಮ ಚಿದಾನಂದ ಸ್ವಾಮಿ, ಜೋಯೀಸ್ ಹಯವಧನಚಾರ್, ಸಣ್ಣ ಕೊತ್ಲಪ್ಪ, ಉದಯ ಜನ್ನು, ಬಣಕಾರ ಮಂಜುನಾಥ, ಟಿ.ಜಿ ಮಲ್ಲಿಕಾರ್ಜುನ ಗೌಡ, ಸಿ.ಬಿ ಜಯರಾಂ ನಾಯಕ, ಎಸ್.ಸುರೇಶ್, ಢಾಣಿ ರಾಘವೇಂದ್ರ, ಢಾಣಿ ಚೌಡಮ್ಮ, ಶೆಟ್ರು ಬಸವರಾಜ, ಅರ್ಚಕ ನಾಗರಾಜ, ಈರಣ್ಣ, ಕೆ.ಈಶಪ್ಪ, ಬಿ.ಕೆ ರಾಘವೇಂದ್ರ, ಕಡ್ಡಿ ಮಂಜುನಾಥ, ಗಣೇಶ, ರಾಮಾಂಜನಿ, ಕೆ.ಬಿ ನಾಗರಾಜ, ಬಾಣದ ಶಿವ ಶಂಕರ್, ಜಿ.ಎಂ ಬಸಣ್ಣ, ಜೆ.ಬಸವರಾಜ ಸೇರಿದಂತೆ ಅನೇಕರು ಇದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button